ಕೋಲಾರದಲ್ಲಿ ಕೊತ್ತಂಬರಿ ಕಟ್ಟಿಗೆ ಎಪ್ಪತ್ತು, ಚಿಕ್ಕಬಳ್ಳಾಪುರದಲ್ಲಿ ನೂರು
ಕೋಲಾರ, ಜೂನ್ 12: ಕೋಲಾರದಲ್ಲಿ ತರಕಾರಿಗಳಿಗಿಂತ ಕೊತ್ತಂಬರಿ ಬೆಲೆ ಬಲೇ ಹೆಚ್ಚಾಗಿದೆ. ಸಣ್ಣ ಗಾತ್ರದ ಕೊತ್ತಂಬರಿ ಕಟ್ಟಿಗೆ ಐವತ್ತು, ಮಧ್ಯಮ ಗಾತ್ರದ್ದಾದರೆ ಅರವತ್ತು, ಅದಕ್ಕೂ ದಪ್ಪನಾದ ಕಟ್ಟಾದರೆ ಎಪ್ಪತ್ತು ರುಪಾಯಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಬಾರಿ ಬೆಳೆ ಸರಿಯಾಗಿ ಆಗಿಲ್ಲ.
ಅದರರ್ಥ ಮಳೆ ಬಂದು ಬೆಳೆ ಕೊಚ್ಚಿಹೋಗಿದೆ. ಆದ್ದರಿಂದ ಈ ಪರಿಸ್ಥಿತಿ ಆಗಿದೆ. ಇನ್ನು ಈ ಬಗ್ಗೆ ಒನ್ ಇಂಡಿಯಾ ಕನ್ನಡದ ಜತೆ ಮಾತನಾಡಿದ ಸ.ರಘುನಾಥ ಅವರು, ರಾಮಕೃಷ್ಣ ರಸ್ತೆಯಲ್ಲಿರುವ ಸೊಪ್ಪಿನ ಮಾರುಕಟ್ಟೆಯಲ್ಲಿ ಈಗಷ್ಟೇ ಹೋಗಿ ತೆಗೆದುಕೊಂಡು ಬಂದೆ. ಅದು ತುಂಬ ದುಬಾರಿಯಾಗಿರುವುದು ಹೌದು. ನಾನು ಸಣ್ಣ ಕಟ್ಟಿಗೆ ಐವತ್ತು ರುಪಾಯಿ ಕೊಟ್ಟು ತೆಗೆದುಕೊಂಡು ಬಂದೆ ಎಂದರು.

ಇನ್ನು ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ನೂರಾ ಹತ್ತರಿಂದ ನೂರಾ ಇಪ್ಪತ್ತು ರುಪಾಯಿ ಇದೆ. ಸದ್ಯಕ್ಕೆ ಬೆಲೆ ಕಡಿಮೆ ಆಗುವ ಸಾಧ್ಯತೆ ಇಲ್ಲ. ಇನ್ನೂ ಒಂದು ತಿಂಗಳು ಇದೇ ಬೆಲೆ ಇರುವ ಸಾಧ್ಯತೆ ಇದೆ. ಏಕೆಂದರೆ ಈ ಸಲ ಫಸಲು ಬಹಳ ಕಡಿಮೆ ಬಂದಿದೆ ಎಂದು ಶಿಡ್ಲಘಟ್ಟದ ಮಲ್ಲಿಕಾರ್ಜುನ್ ಅವರು ಮಾಹಿತಿ ನೀಡಿದರು.












Click it and Unblock the Notifications