ಬಿಜೆಪಿ ಸಂಸದರ ವಿರುದ್ಧ 'ಮುನಿ'ದ ಸಚಿವ ಎಚ್. ನಾಗೇಶ್!

ಕೋಲಾರ, ನವೆಂಬರ್ 02: ಕೋಲಾರ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ. ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್ ಮತ್ತು ಸಂಸದ ಎಸ್. ಮನಿಸ್ವಾಮಿ ನಡುವಿನ ಜಟಾಪಟಿ ಬಹಿರಂಗವಾಗಿದೆ.

"ಸಚಿವನಾದ ನನಗೆ ಮರ್ಯಾದೆ ಇಲ್ಲವೇ?. ನಾನು ಬಿಟ್ಟಿ ಬಿದ್ದಿದ್ದೇನಾ?" ಎಂದು ಸಚಿವ ಎಚ್. ನಾಗೇಶ್ ಸಂಸದರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಈ ಮೂಲಕ ಜಿಲ್ಲಾ ಬಿಜೆಪಿಯಲ್ಲಿ 'ಮುನಿ'ಸನ್ನು ಜನರ ಮುಂದಿಟ್ಟಿದ್ದಾರೆ.

ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್. ನಾಗೇಶ್ ಬಿಜೆಪಿ ಸರ್ಕಾರ ರಚನೆಗೆ ಬೆಂಬಲ ನೀಡಿದ್ದಾರೆ. ಆದ್ದರಿಂದ ಯಡಿಯೂರಪ್ಪ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದಾರೆ. ಕೋಲಾರ ಜಿಲ್ಲಾ ಉಸ್ತುವಾರಿಯೂ ಅವರ ಹೆಗೆಲೇರಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಕೋಲಾರದಲ್ಲಿ ಕಾಂಗ್ರೆಸ್‌ನ ಕೆ. ಎಚ್. ಮುನಿಯಪ್ಪ ಸೋಲಿಸಿದ ಎಸ್. ಮುನಿಸ್ವಾಮಿ ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡಿದ್ದಾರೆ. ಆದರೆ ನಾಗೇಶ್ ಮತ್ತು ಮುನಿಸ್ವಾಮಿ ನಡುವೆ ಎಲ್ಲವೂ ಸರಿ ಇಲ್ಲ.

ನನಗೆ ಗೌರವ ಕೊಡಬೇಕು

ನನಗೆ ಗೌರವ ಕೊಡಬೇಕು

ಸಚಿವ ಎಚ್. ನಾಗೇಶ್ ಮಾತನಾಡಿ, "ಸಂಸದ ಮುನಿಸ್ವಾಮಿ ಅವರು ಜಿಲ್ಲಾ ಉಸ್ತುವಾರಿ ಸಚಿವನಾದ ನನಗೆ ಗೌರವ ಕೊಡಬೇಕು. ಅವರು ನನ್ನ ಬಗ್ಗೆ ಹಗುರವಾಗಿ ಮಾತನಾಡಿದರೆ ಹೋರಾಟ ಮಾಡುತ್ತೇನೆ" ಎಂದು ಎಚ್ಚರಿಕೆ ನೀಡಿದರು.

ಸಂಸದರಿಗೆ ಕೊನೆ ಎಚ್ಚರಿಕೆ

ಸಂಸದರಿಗೆ ಕೊನೆ ಎಚ್ಚರಿಕೆ

"ಸಚಿವನಾದ ನನಗೆ ಮರ್ಯಾದೆ ಇಲ್ಲವೇ?. ನಾನು ಬಿಟ್ಟಿ ಬಿದ್ದಿದ್ದೇನಾ?. ಸಂಸದರು ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಇದೇ ರೀತಿ ಮಾತನಾಡುತ್ತಿದ್ದರಾ?" ಎಂದು ಎಚ್. ನಾಗೇಶ್ ಪ್ರಶ್ನೆ ಮಾಡಿದರು.

ಚಿಕ್ಕವರೆಂದು ಕ್ಷಮಿಸಿದ್ದೇನೆ

ಚಿಕ್ಕವರೆಂದು ಕ್ಷಮಿಸಿದ್ದೇನೆ

"ಮುನಿಸ್ವಾಮಿ ನನ್ನ ಸಂಬಂಧಿ ಮತ್ತು ಸಹೋದರ. ನನಗಿಂತ ಚಿಕ್ಕವರೆಂದು ಕ್ಷಮಿಸಿದ್ದೇನೆ. ಇನ್ನಾದರೂ ಅವರು ತಮ್ಮ ವರಸೆ ಬದಲಿಸಿಕೊಂಡರೆ ಒಳ್ಳೆಯದು" ಎಂದು ಎಚ್. ನಾಗೇಶ್ ಎಚ್ಚರಿಕೆ ನೀಡಿದರು.

Recommended Video

    Modi ಯಿಂದ ಭಾರತೀಯರಿಗೆ ಮತ್ತೊಂದು Gift | Oneindia Kannada
    ನನ್ನ ವಿರೋಧಿಗಳು

    ನನ್ನ ವಿರೋಧಿಗಳು

    "ಪಕ್ಷೇತರ ಶಾಸಕನಾದ ನಾನು ಎಲ್ಲರಿಗೂ ಬೇಕು. ನಾಲ್ಕೈದು ಜನರನ್ನು ಬಿಟ್ಟು ನನಗೆ ಯಾರೂ ಶತ್ರುಗಳಿಲ್ಲ. ಕೊತ್ತೂರು ಮಂಜುನಾಥ್ ಗುಂಪಿನವರು ಮಾತ್ರ ನನ್ನ ವಿರೋಧಿಗಳು. ಹೀಗಾಗಿ ಅವರನ್ನು ದೂರ ಇಟ್ಟಿದ್ದೇನೆ. ಅವರ ವರ್ತನೆ ಸರಿಯಿಲ್ಲ" ಎಂದು ಎಚ್. ನಾಗೇಶ್ ಆರೋಪಿಸಿದರು.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+