ಕೋಲಾರ; ಮತದಾನ ಬಹಿಷ್ಕಾರ ಮಾಡಿದ ಗ್ರಾಮದ ಜನ
ಕೋಲಾರ, ಡಿಸೆಂಬರ್ 22: ಗ್ರಾಮ ಪಂಚಾಯಿತಿ ಚುನಾವಣೆಯನ್ನು ಗ್ರಾಮದ ಜನರು ಬಹಿಷ್ಕಾರ ಮಾಡಿದ್ದು, ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕಂಬೀಪುರ ಗ್ರಾಮದ ಜನರ ಮನವೊಲಿಕೆ ಕಾರ್ಯ ನಡೆಯುತ್ತಿದೆ.
ಮಾಲೂರು ತಾಲೂಕು ಕಂಬೀಪುರ ಗ್ರಾಮದ ಜನರು ಗ್ರಾಮಕ್ಕೆ ಮುಖ್ಯ ರಸ್ತೆ ಇಲ್ಲ, ಮೂಲ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ಜನರೆಲ್ಲರೂ ಫೆಕ್ಸ್ ಹಿಡಿದು ನಿಂತಿದ್ದಾರೆ. ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಈ ಗ್ರಾಮ ಸೇರುತ್ತದೆ.
ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಬಂದು ರಸ್ತೆ ಸಂಪರ್ಕ ಕಲ್ಪಿಸುವ ಭರವಸೆ ನೀಡುವ ತನಕ ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಚುನಾವಣಾಧಿಕಾರಿಗಳು ಗ್ರಾಮಸ್ಥರ ಮನವೊಲಿಕೆ ಕಾರ್ಯವನ್ನು ಮಾಡುತ್ತಿದ್ದಾರೆ.

ಕೋವಿಡ್ ಸೋಂಕಿತರ ಪ್ರಚಾರ; ಕೋವಿಡ್ ಪಾಸಿಟಿವ್ ಬಂದು ಹೋಂ ಐಸೊಲೇಷನ್‌ನಲ್ಲಿದ್ದ ಮೂವರು ಗ್ರಾಮ ಪಂಚಾಯಿತಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಚುನಾವಣೆಗೆ ನಿಂತಿದ್ದ ಸಂಬಂಧಿಕರೊಬ್ಬರ ಪರವಾಗಿ ಮೂವರು ಸಹ ಪ್ರಚಾರ ನಡೆಸಿದ್ದು, ಮನೆ-ಮನೆಗೆ ಭೇಟಿ ನೀಡಿದ್ದಾರೆ. ಕೋಲಾರ ತಾಲೂಕಿನ ದಿಂಬಚಾಮನಹಳ್ಳಿ ಗ್ರಾಮದಲ್ಲಿ ಈ ಪ್ರಕರಣ ವರದಿಯಾಗಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕಂಬೀಪುರ ಗ್ರಾಮಸ್ಥರು ಮತದಾವನ್ನು ಬಹಿಷ್ಕಾರ ಮಾಡಿದ್ದಾರೆ. ಗ್ರಾಮಕ್ಕೆ ಮುಖ್ಯ ರಸ್ತೆ ಇಲ್ಲ, ಮೂಲ ಸೌಲಭ್ಯಗಳಿಗೆ ಆಗ್ರಹಿಸಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ಇದು ಮಾಲೂರು ತಾಲೂಕಿನ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಸೇರಿರುವ ಕಂಬೀಪುರ ಗ್ರಾಮ.#Kolar #Malur #Grampanchayatelections pic.twitter.com/VyzARGBhMp
— oneindiakannada (@OneindiaKannada) December 22, 2020
ದೊಡ್ಡಹಸಾಳ ಗ್ರಾಮ ಪಂಚಾಯತಿಗೆ ಸೇರಿದ ದಿಂಬಚಾಮನಹಳ್ಳಿ ವ್ಯಾಪ್ತಿಯಲ್ಲಿ ಕೋವಿಡ್ ಪಾಸಿಟಿವ್ ಬಂದಿರುವ ವ್ಯಕ್ತಿಗಳಿಂದ ಎಲೆ-ಅಡಿಕೆ ಕರಪತ್ರವನ್ನು ಗ್ರಾಮಸ್ಥರು ಪಡೆದಿದ್ದಾರೆ. ವೈದ್ಯರ ಎಚ್ಚರಿಕೆ ನಡುವೆಯೂ ಮನೆ- ಮನೆಗೆ ತೆರಳಿ ಮೂವರು ಪ್ರಚಾರ ಮಾಡಿದ್ದಾರೆ.












Click it and Unblock the Notifications