ಮದ್ಯದ ಅಂಗಡಿ ತೆರೆಯುವ ಬಗ್ಗೆ ಅಬಕಾರಿ ಸಚಿವರ ಪ್ರತಿಕ್ರಿಯೆ
ಕೋಲಾರ, ಏಪ್ರಿಲ್ 13: ಲಾಕ್‌ಡೌನ್‌ನಿಂದ 20 ದಿನಗಳ ಕಾಲ ಮದ್ಯದ ಅಂಗಡಿಗಳು ಮುಚ್ಚಿದ್ದವು. ಆದರೆ, ಇನ್ನು ಮುಂದೆ ಮದ್ಯದ ಅಂಗಡಿಯನ್ನು ತೆರೆಯಲು ಸರ್ಕಾರ ಅವಕಾಶ ನೀಡುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಅಬಕಾರಿ ಸಚಿವ ಎಚ್ ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಕೋಲಾರದಲ್ಲಿ ಮಾತನಾಡಿರುವ ಅವರು, ಪ್ರಧಾನಿ ಮೋದಿ ನಾಳೆ ತೆಗೆದುಕೊಳ್ಳುವ ನಿರ್ಧಾರ ಮೇಲೆ ನಮ್ಮ ಮುಂದಿನ ನಿರ್ಧಾರ ಇರಲಿದೆ ಎಂದು ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ 10 ಗಂಟೆಗೆ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಲಾಕ್‌ಡೌನ್ ಮುಂದುವರೆಕೆ ಆಗಲಿದೆ ಎನ್ನುವ ಅನುಮಾನ ಇದ್ದು, ಅವರ ಬಗ್ಗೆ ಸ್ಪಷ್ಟನೆ ಸಿಗಬಹುದಾಗಿದೆ. ಈ ವೇಳೆ ಮೋದಿ ತೆಗೆದುಕೊಂಡ ನಿರ್ಧಾರಗಳ ಮೇಲೆ, ರಾಜ್ಯ ಸರ್ಕಾರ ಮದ್ಯ ಅಂಗಡಿಗೆ ಅವಕಾಶ ನೀಡಬೇಕೊ ಇಲ್ಲವೋ ಎಂದು ಚರ್ಚೆ ನಡೆಸಲಿದೆ.

ಮದ್ಯ ಇಲ್ಲದ ಕಾರಣಕ್ಕೆ ಕಳ್ಳಬಟ್ಟಿ ಸಾರಾಯಿ ತಯಾರಿಕೆ ಹೆಚ್ಚಾಗಿದೆ. ನಮ್ಮ ಅಧಿಕಾರಿಗಳು ಇದನ್ನು ತಡೆಯಲು ಶ್ರಮಿಸುತ್ತಿದ್ದಾರೆ ಎಂದು ಎಚ್ ನಾಗೇಶ್ ತಿಳಿಸಿದ್ದಾರೆ.
ಮದ್ಯ ಬ್ಯಾನ್ ಆಗಿರುವ ಹಿನ್ನಲೆ ದೇಶದಲ್ಲಿ ಕುಡುಕರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ನಡೆದಿದೆ. ಹೀಗಾಗಿ ಕೆಲವು ರಾಜ್ಯಗಳು ಮದ್ಯ ಮಾರಾಟಕ್ಕೆ ಅವಕಾಶ ನೀಡಿವೆ.












Click it and Unblock the Notifications