• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಣ್ಣೆ ಸಿಕ್ಕಿದ್ದಕ್ಕೆ ದೇವರಿಗೂ ಮದ್ಯ ಸೇವೆ ಮಾಡಿದ ಕುಡುಕ

|

ಕೋಲಾರ, ಮೇ 4: ಇಂದು ಮದ್ಯ ಮಾರಾಟ ಶುರುವಾಗಿದ್ದು, ಅದೇ ಖುಷಿಯಲ್ಲಿ ದೇವರಿಗೂ ಮದ್ಯ ಸೇವೆ ಮಾಡಿದ್ದಾರೆ. ಕೋಲಾರದ ಕುಡುಕ ದೇವರಿಗೆ ವೈನ್‌ ಸೇವೆ ಮಾಡಿದ್ದಾನೆ.

ದೇವರ ಫೋಟೋ ಮುಂದೆ ಎಣ್ಣೆ ಬಾಟಲಿ ಇಟ್ಟು ಪೂಜೆ ಮಾಡಿದ್ದಾನೆ. ಕೋಲಾರದ ಈ ಕುಡುಕನ ಅವಾಂತರದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಈ ಭೂಪ ದೇವರ ಫೋಟೋದ ಜೊತೆಗೆ ಬಾಟಲಿಗೂ ಹೂ ನಿಂದ ಅಲಂಕಾರ ಮಾಡಿದ್ದಾನೆ.

ಕುಡಿಯುವುದಕ್ಕೆ ಮುಂಚೆಯೇ ಅಂಗಡಿ ಮುಂದೆ ತಲೆತಿರುಗಿ ಬಿದ್ದ ಯುವತಿ

ಈ ಕುಡುಕ ಬಾಟಲಿಗೆ ಅರಿಶಿಣ, ಕುಂಕುಮ ಹಚ್ಚಿ, ಬಾಳೆಹಣ್ಣು ನೈವೇದ್ಯ ಮಾಡಿ, ಅಗರಬತ್ತಿ ಬೆಳೆಗಿ ಕೈ ಮುಗಿದಿದ್ದಾನೆ. ನಮ್ಮನ್ನು ಸಂಕಷ್ಟದಿಂದ ಪಾರು ಮಾಡಿದಕ್ಕೆ ನಿನಗೆ ಧನ್ಯವಾದಗಳು ಎಂದು ದೇವರ ಬಳಿ ಪ್ರಾರ್ಥನೆ ಮಾಡಿದ್ದಾನೆ.

ತಿಂಗಳುಗಳ ನಂತರ ಮದ್ಯ ಮಾರಾಟ ಮತ್ತೆ ಪ್ರಾರಂಭವಾಗಿದ್ದು, ಅನೇಕ ಕಡೆ ಕುಡುಕರು ಅವಾಂತರ ಮಾಡಿದ್ದಾರೆ. ಎಷ್ಟೋ ಜನ ಕುಡಿದು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ.

ಕೆಲವರು ಮಹಾ ಕುಡುಕರು 50 ಸಾವಿರಗಟ್ಟಲೆ ಬಿಲ್ ಮಾಡಿದ್ದಾರೆ. ಮತ್ತೊಂದು ಕಡೆ ಸರ್ಕಾರ ನಿರ್ಧಾರವನ್ನು ಕೆಲವು ಮಹಿಳೆಯರು, ಮಠದ ಸ್ವಾಮಿಗಳು ವಿರೋಧಿಸಿದ್ದಾರೆ.

English summary
Drunk person did pooja for bottle in Kolar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X