ಪಾನಮತ್ತ ಚಾಲಕನ ಅವಾಂತರ:ಕಾರು ಡಿಕ್ಕಿ ಹೊಡೆದು ಪಾದಚಾರಿ ಸಾವು
ಕೋಲಾರ, ಆಗಸ್ಟ್ 3: ಕುಡಿದ ಮತ್ತಿನಲ್ಲಿ ಕಾರು ಚಲಾವಣೆ ಮಾಡಿ ಜೀವಕ್ಕೆ ಕುತ್ತು ತಂದುಕೊಂಡ ಘಟನೆ ಕೋಲಾರದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಪರಿಣಾಮ ಬಸ್ ತಂಗುದಾಣಕ್ಕೆ ಡಿಕ್ಕಿ ಹೊಡೆದು, ತಂದುದಾಣದಲ್ಲಿ ಕುಳಿತಿದ್ದ ಓರ್ವ ವೃದ್ಧ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರಿಗೆ ಗಂಭಿರ ಗಾಯಗಳಾಗಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನ ಉರಿಗಾಂ ನ ಸತ್ತಾರ್ ಸರ್ಕಲ್ ನಲ್ಲಿ ನಡೆದಿದೆ.
ಕೆಜಿಎಫ್ ಚಾಂಪಿಯನ್ ಬಡಾವಣೆಯ ಜಯವೇಲು(70) ಮೃತ ವೃದ್ಧ, ಸುರೇಶ್ ಬಾಬು ಹಾಗೂ ಥಾಮಸ್ ಗೆ ಗಂಭಿರ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಜಿಎಫ್ ಬೆಮೆಲ್ ನಗರ ನಿವಾಸಿ ದೀಪನ್ ಕುಡಿದು ಚಾಲನೆ ಮಾಡಿದ ಕಾರು ಚಾಲಕನಾಗಿದ್ದು ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಉರಿಗಾಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕುಡಿದು ವಾಹನ ಚಲಾಯಿಸಬೇಡಿ ಎಂದು ಪೊಲೀಸರು ಎಷ್ಟೇ ಅಭಿಯಾನಗಳನ್ನು ಕೈಗೊಂಡರೂ ಕೂಡ ಜನರ ಮನಸ್ಸಿಗೆ ಇನ್ನೂ ನಾಟುತ್ತಿಲ್ಲ. ಪ್ರತಿದಿನ ನೂರಾರು ಮಂದಿ ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದಾರೆ.ಇಂತಹ ಘಟನೆಗಳನ್ನು ನೋಡಿದ ಬಳಿಕವಾದರೂ ಜನರು ಎಚ್ಚೆತ್ತುಕೊಂಡು ನಿಮ್ಮ ಪ್ರಾಣವನ್ನು ಉಳಿಸಿಕೊಳ್ಳಿ.












Click it and Unblock the Notifications