ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ ಕಾಂಗ್ರೆಸ್ ಬಿಕ್ಕಟ್ಟು ಬಗೆಹರಿಸಿದ ಡಿ.ಕೆ.ಶಿವಕುಮಾರ್

|
Google Oneindia Kannada News

Recommended Video

ತಾವು ಟ್ರಬಲ್ ಶೂಟರ್ ಎಂದು ಮತ್ತೆ ಸಾಬೀತು ಮಾಡಿದ ಡಿ ಕೆ ಶಿವಕುಮಾರ್

ಕೋಲಾರ, ಏಪ್ರಿಲ್ 10 : ಕೋಲಾರ ಕಾಂಗ್ರೆಸ್‌ನಲ್ಲಿ ಉಂಟಾಗಿದ್ದ ಬಿಕ್ಕಟ್ಟನ್ನು ಪಕ್ಷದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಬಗೆಹರಿಸಿದ್ದಾರೆ. ಕೆ.ಎಚ್.ಮುನಿಯಪ್ಪ ಮತ್ತು ವಿ.ಮುನಿಯಪ್ಪ ಒಂದಾಗಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬುಧವಾರ ಡಿ.ಕೆ.ಶಿವಕುಮಾರ್ ಅವರು ಕೋಲಾರಕ್ಕೆ ಭೇಟಿ ನೀಡಿದ್ದರು. ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಮತ್ತು ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ ಅವರ ಜೊತೆ ಮಾತುಕತೆ ನಡೆಸಿ ಬಿಕ್ಕಟ್ಟು ಬಗೆಹರಿಸಿದರು.

ಕೋಲಾರ ಕ್ಷೇತ್ರದ ಚುನಾವಣಾ ಪುಟ

ಏಪ್ರಿಲ್ 18ರಂದು ಕೋಲಾರ ಕ್ಷೇತ್ರದ ಲೋಕಸಭಾ ಚುನಾವಣೆ ನಡೆಯಲಿದೆ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಕೆ.ಎಚ್.ಮುನಿಯಪ್ಪ, ಬಿಜೆಪಿಯಿಂದ ಎಸ್.ಮುನಿಸ್ವಾಮಿ ಅವರು ಕಣದಲ್ಲಿದ್ದಾರೆ.

DK Shivakumar solves Kolar Congress trouble

ಕೋಲಾರದಲ್ಲಿ ಏನಾಗಿತ್ತು? : ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಅವರು ಕೆ.ಎಚ್.ಮುನಿಯಪ್ಪ ವಿರುದ್ಧ ಅಸಮಾಧಾನಗೊಂಡಿದ್ದರು. 'ನಾನು ಕೆ.ಎಚ್.ಮುನಿಯಪ್ಪ ಪರ ಮತ ಕೇಳುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತ ಕೇಳುವೆ' ಎಂದು ಹೇಳಿಕೆ ನೀಡಿದ್ದರು.

ಕೋಲಾರ ಲೋಕಸಭಾ ಕ್ಷೇತ್ರ ಪರಿಚಯ: ಚಿನ್ನದ ಜಿಲ್ಲೆಯ ಮುಕುಟ ಯಾರಿಗೆ?ಕೋಲಾರ ಲೋಕಸಭಾ ಕ್ಷೇತ್ರ ಪರಿಚಯ: ಚಿನ್ನದ ಜಿಲ್ಲೆಯ ಮುಕುಟ ಯಾರಿಗೆ?

'ಕೆ.ಎಚ್.ಮುನಿಯಪ್ಪ ಅವರ ಇತ್ತೀಚಿನ ನಡವಳಿಕೆ ನನಗೆ ಸರಿ ಕಾಣುತ್ತಿಲ್ಲ. ಅವರ ಜಮೀನು ಖರೀದಿಸುವ ಖಯಾಲಿ ಇನ್ನಿತರೆ ಚಟುವಟಿಕೆ ಬಗ್ಗೆ ಸೂಚ್ಯವಾಗಿ ಅವರ ಗಮನಕ್ಕೆ ತಂದರೂ ಅವರು ನಡವಳಿಕೆ ಬದಲಿಸಲಿಲ್ಲ. ಹಾಗಾಗಿ ಅವರ ವಿರುದ್ಧ ದೆಹಲಿ ತನಕ ದೂರು ಕೊಂಡೊಯ್ಯಬೇಕಾಯಿತು' ಎಂದು ಹೇಳಿದ್ದರು.

ಇದರಿಂದಾಗಿ ಕೋಲಾರ ಕಾಂಗ್ರೆಸ್‌ನಲ್ಲಿ ಗೊಂದಲ ಸೃಷ್ಟಿಯಾಗಿತ್ತು. ವಿ.ಮುನಿಯಪ್ಪ ಅವರು ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡುವುದಿಲ್ಲವೇ? ಎಂಬ ಗೊಂದಲ ಸೃಷ್ಟಿಯಾಗಿತ್ತು. ಡಿ.ಕೆ.ಶಿವಕುಮಾರ್ ಇದನ್ನು ಬಗೆಹರಿಸಿದ್ದಾರೆ.

ರಾಹುಲ್ ಭೇಟಿ : ಏಪ್ರಿಲ್ 13ರಂದು ಕೋಲಾರಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಕುರಿತು ಡಿ.ಕೆ.ಶಿವಕುಮಾರ್ ಸಭೆಯಲ್ಲಿ ನಾಯಕರ ಜೊತೆ ಚರ್ಚೆ ನಡೆಸಿದರು.

English summary
DK Shivakumar is a trouble-shooter for the Congress. He solved the Kolar Congress trouble after meeting with V.Muniyappa and K.H.Muniyappa. K.H.Muniyappa Congress and JD(S) candidate for Kolar lok sabha seat. Election will be held on April 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X