ತೀರಿಹೋದ ಆ ಹುಡುಗನದು ಎಸ್ಸೆಸ್ಸೆಲ್ಸಿಯಲ್ಲಿ 603 ಅಂಕ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಕೆಜಿಎಫ್, ಮೇ 13: ಈ ಹೊತ್ತಿಗೆ ಆ ಮನೆಯಲ್ಲಿ ಸಂಭ್ರಮದ ವಾತಾವರಣ ಇರಬೇಕಿತ್ತು. ಆದರೆ ಈಗ ದುಃಖ ಮಡುಗಟ್ಟಿದೆ. ಇದ್ಯಾವ ಮನೆ, ದುಃಖ ಯಾಕೆ ಅಂತೀರಾ? ನಿಮಗೆ ನೆನಪಿರಬಹುದು ಕೋಲಾರದ ಕೆಜಿಎಫ್ ನಲ್ಲಿರುವ ವಡ್ಡರಹಳ್ಳಿಯ ಅಭಿರಾಮ್ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ ಎಂದು ಸುದ್ದಿಯಾಗಿತ್ತು. ಆತನ ಪೋಷಕರು-ಸಂಬಂಧಿಕರ ದುಃಖ ನೋಡಲು ಸಾಧ್ಯವಾಗುತ್ತಿರಲಿಲ್ಲ.

ಹ್ಞಾಂ, ಅದೇ ಅಭಿರಾಮ್ ಈ ಸಲ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ. 625ಕ್ಕೆ 603 ಅಂಕ ಗಳಿಸಿದ್ದಾನೆ ಅಭಿರಾಮ್. ಕನ್ನಡದಲ್ಲಿ 122, ಇಂಗ್ಲಿಷ್ 100, ಹಿಂದಿ 93, ಗಣಿತ 95. ವಿಜ್ಞಾನ 95, ಸಮಾಜದಲ್ಲಿ 98 ಅಂಕಗಳು ಬಂದಿವೆ. ಅಭಿರಾಮ್ ಚಿಂತಾಮಣಿಯ ವೇಣುಗೋಪಾಲ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ.[ಅಡ್ಜಸ್ಟ್ ಮೆಂಟ್ ರಾಜಕಾರಣ ಗೊತ್ತಿಲ್ಲದ ನಾನು 4 ವರ್ಷ ಜೈಲು ಸೇರಿದೆ: ರೆಡ್ಡಿ]

Deceased boy Abhiram secured 603 marks in SSLC

ರಜಾ ಇತ್ತಾದ್ದರಿಂದ ಊರಿಗೆ ಬಂದಿದ್ದ. ಮೂರು ದಿನ ಕಿವಿ ನೋವು ಬರ್ತಿತ್ತು ಎಂದು ಬೇತಮಂಗಲದ ಶಾರದಾ ಕ್ಲಿನಿಕ್ ನಲ್ಲಿ ತೋರಿಸಲಾಗಿತ್ತು. ಅಲ್ಲಿ ದಂತವೈದ್ಯ ನವೀನ್ ಕುಮಾರ್ ನೀಡಿದ ಚುಚ್ಚುಮದ್ದಿನಿಂದಲೇ ಅಭಿರಾಮ್ ಮೃತಪಟ್ಟ ಎಂದು ಆತನ ಪೋಷಕರು ಆರೋಪಿಸಿದ್ದರು.[ಖಾಸಗಿ ಕ್ಷಣ ಸೆರೆ ಹಿಡಿದು ಬ್ಲ್ಯಾಕ್ ಮೇಲ್, ಪತಿ ವಿರುದ್ಧ ದೂರು]

Deceased boy Abhiram secured 603 marks in SSLC

ನೋಡಿ, ಆ ಹುಡುಗ ಅದ್ಭುತವಾದ ಅಂಕ ಗಳಿಸಿದ್ದಾನೆ. ಆತನ ಪೋಷಕರು ತಮ್ಮ ಬುದ್ಧಿವಂತ ಮಗನನ್ನು ನೆನೆದು, ಮತ್ತಷ್ಟು ದುಃಖಿತರಾಗುತ್ತಿದ್ದಾರೆ. ಆ ಮನೆಯಲ್ಲಿ ಸಂಭ್ರಮ ಉಳಿದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Abhiram, Deceased boy from Bethamangala, KGF, Kolar district secured 603 marks in SSLC.
Please Wait while comments are loading...