ಬಸ್ ಮುಷ್ಕರ: ಕೋಲಾರದಲ್ಲಿ ಪ್ರತಿಭಟನೆಗಿಳಿದ ಸಾರಿಗೆ ನೌಕರರು; ಬಂಧನ
ಕೋಲಾರ, ಏಪ್ರಿಲ್ 15: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಬಸ್ ಮುಷ್ಕರ ಸತತ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ.
ಗುರುವಾರದಂದು ಕೋಲಾರದ ಬಸ್ ಡಿಪೋ ಬಳಿ ಸಾರಿಗೆ ನೌಕರರ ಕುಟುಂಬಸ್ಥರಿಂದ ದಿಢೀರ್ ಪ್ರತಿಭಟನೆ ನಡೆಸಲಾಗುತ್ತಿದೆ. ನೌಕರರಿಗೆ ಮಾರ್ಚ್ ತಿಂಗಳ ವೇತನ ನೀಡುವಂತೆ ಆಗ್ರಹಿಸಿ ಪ್ರತಿಭಟಿಸಿದರು.
ಈ ವೇಳೆ ಕೋಲಾರದ ಬಸ್ ಡಿಪೋ ಬಳಿ ಸಾರಿಗೆ ನೌಕರರು ಹಾಗೂ ಪೊಲೀಸರ ಜೊತೆ ಮಾತಿನ ಚಕಮಕಿ ನಡೆದಿದ್ದು, ಪ್ರತಿಭಟನಾಕಾರರನ್ನು ಡಿಪೋ ಒಳಗೆ ಬಿಡದೆ ಗೇಟ್ ಬಳಿ ಪೊಲೀಸರು ತಡೆದಿದ್ದಾರೆ.

ಸಾರಿಗೆ ನೌಕರರ ಜೊತೆ ಮಹಿಳೆಯರು ಮತ್ತು ಮಕ್ಕಳು ಪ್ರತಿಭಟನೆ ನಡೆಸುತ್ತಿದ್ದು, ನಮ್ಮ ನ್ಯಾಯ ನಾವು ಕೇಳುತ್ತಿದ್ದೇವೆ ಒಳಗೆ ಬಿಡಿ ಎಂದು ಪಟ್ಟುಹಿಡಿದಿದ್ದಾರೆ.

ಗಲ್ ಪೇಟೆ ಪೊಲೀಸರಿಂದ ಪ್ರತಿಭಟನಾ ನಿರತ 20 ಜನ ಮಹಿಳೆಯರನ್ನು ಬಂಧಿಸಿದ್ದು, ಬಸ್ ಡಿಪೋ ಬಳಿ 144 ಸೆಕ್ಷನ್ ಜಾರಿ ಹಿನ್ನೆಲೆ ಪ್ರತಿಭಟನೆಗೆ ಅವಕಾಶ ನೀಡದೆ ಬಂಧಿಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ನೌಕರರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಮತ್ತೊಮ್ಮೆ ಬಿಜೆಪಿ ಪರ ಮತ ನೀಡುವುದಿಲ್ಲ ಎಂದು ಕೂಗಿದರು.












Click it and Unblock the Notifications