• search
 • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಕೋಲಾರದಲ್ಲಿ ಖಾಸಗಿ ಬಸ್ ಪಲ್ಟಿ, ದಂಪತಿ ಸಾವು

|
Google Oneindia Kannada News

ಕೋಲಾರ, ಆಗಸ್ಟ್ 17: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿದ್ದು, ಇಬ್ಬರು ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ. ದುರಂತದಲ್ಲಿ 15 ಮಂದಿ ಗಾಯಗೊಂಡಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವಿರೂಪಾಕ್ಷಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಅಪಘಾತ ಸಂಭವಿಸಿದೆ, ಬಸ್‌ನಲ್ಲಿದ್ದ ಆಂಧ್ರಪ್ರದೇಶ ಮೂಲದ ದಂಪತಿ ಮೃತಪಟ್ಟಿದ್ದಾರೆ. ಮೃತರನ್ನು ವಿಜಯವಾಡದ ಮೂಲದ ಷರೀಫ್ ಹಾಗೂ ಮೈಮುನ್ನಿಸಾ ಎಂದು ಗುರುತಿಸಲಾಗಿದೆ.

Breaking: ಕಾಶ್ಮೀರದಲ್ಲಿ ನದಿಗೆ ಉರುಳಿದ ಬಸ್, 6 ಯೋಧರು ಹುತಾತ್ಮBreaking: ಕಾಶ್ಮೀರದಲ್ಲಿ ನದಿಗೆ ಉರುಳಿದ ಬಸ್, 6 ಯೋಧರು ಹುತಾತ್ಮ

15 ಮಂದಿ ಗಾಯಾಳುಗಳಾಗಿದ್ದು, ಅದರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಬಸ್‌ನಲ್ಲಿ‌ ಸುಮಾರು 30 ಮಂದಿ ಪ್ರಯಾಣಿಸುತ್ತಿದ್ದರು.

ಆಂಧ್ರಪ್ರದೇಶದ ನಲ್ಲೂರಿನ ವೇಮೂರಿ-ಕಾವೇರಿ ಟ್ರಾವಲ್ಸ್ ಗೆ ಸೇರಿದ ಬಸ್ ಇದಾಗಿದ್ದು, ಗುಂಟೂರಿನಿಂದ ಬೆಂಗಳೂರು ಕಡೆಗೆ ಬರುತ್ತಿತ್ತು. ಮುಂಜಾನೆ ನಿದ್ದೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಪಲ್ಟಿಯಾಗಿರಬಹುದು ಎಂದು ಹೇಳಲಾಗುತ್ತಿದೆ.

ಗಾಯಾಳುಗಳನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆ ಹಾಗೂ ಕೋಲಾರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಬಸ್ ಪಲ್ಟಿಯಾದ ತಕ್ಷಣ ಬಸ್ ನ ಚಾಲಕ ಮತ್ತು ನಿರ್ವಾಹಕ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರ ಭೇಟಿ ನೀಡಿ‌ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Recommended Video

   Yuvraj Singh ಅಭ್ಯಾಸದಲ್ಲಿ ಯರ್ರಾಬಿರ್ರಿ ಸಿಕ್ಸ್ ಹೊಡೆದರು | *Cricket | Oneindia Kannada
   English summary
   Bus Accident in Kolar : 2 killed and 15 others injured after a private bus overturned near mulbagal virupakshi gate. Know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X