ಎಂಥ ಕಾಲ ಬಂತು ನೋಡಿ, ಇಲ್ಲಿ ಓಲಾ ಕ್ಯಾಬ್ ಚಾಲಕರೂ ಸೇಫ್ ಅಲ್ಲ!

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಕೋಲಾರ, ಮೇ 20: ಅಯ್ಯೋ, ಎಂಥ ಕಾಲ ಬಂತು ನೋಡಿ, ಇಲ್ಲಿ ಓಲಾ ಕ್ಯಾಬ್ ಚಾಲಕರೂ ಸೇಫ್ ಅಲ್ಲ! ಹೌದು, ಕೆಲ ವ್ಯಕ್ತಿಗಳು ಪ್ರಯಾಣಿಕರ ಸೋಗಿನಲ್ಲಿ ಬಂದು ಓಲಾಕ್ಯಾಬ್ ಚಾಲಕನ ಚಿನ್ನದ ಸರ, ಮೊಬೈಲ್, ಹಣವನ್ನು ದೋಚಿದ ಘಟನೆ ಕೋಲಾರ ಜಿಲ್ಲೆಯ ನೆರ್ನಳ್ಳಿ ಎಂಬಲ್ಲಿ ನಡೆದಿದೆ.

Anonymous people steal Ola cab driver's belongings in Kolar

ಪ್ರಯಾಣಕ್ಕೆಂದು ಓಲಾ ಕ್ಯಾಬ್ ಬುಕ್ ಮಾಡಿದ್ದ ದುಷ್ಕರ್ಮಿಗಳು, ಮತ್ತು ಭರಿಸುವ ಮಾತ್ರೆ ಬೆರೆಸಿದ ನೀರನ್ನು ಓಲಾ ಕ್ಯಾಬ್ ಚಾಲಕನಿಗೆ ನೀಡಿದ್ದಾರೆ. ನೀರನ್ನು ಕುಡಿದ ಆತ ಮಂಪರು ಹತ್ತಿ ನಿದ್ರಿಸಿದ ಮೇಲೆ ಆತನ ಚಿನ್ನದ ಸರ, ಆತನ ಮೊಬೈಲ್ ಮತ್ತು ಹಣವನ್ನು ದೋಚಿದ್ದಾರೆ.

ಘಟನೆ ನಿನ್ನೆ ರಾತ್ರಿ ನಡೆದಿದ್ದು, ಮತ್ತು ಇಳಿಯುತ್ತಿದ್ದಂತೆಯೇ ಚಾಲಕನಿಗೆ ಎಘಟನೆಯ ಅರಿವಾಗಿ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
ಅಯ್ಯೋ, ಎಂಥ ಕಾಲ ಬಂತು ನೋಡಿ, ಇಲ್ಲಿ ಓಲಾ ಕ್ಯಾಬ್ ಚಾಲಕರೂ ಸೇಫ್ ಅಲ್ಲ! ಹೌದು, ಕೆಲ ವ್ಯಕ್ತಿಗಳು ಪ್ರಯಾಣಿಕರ ಸೋಗಿನಲ್ಲಿ ಬಂದು ಓಲಾಕ್ಯಾಬ್ ಚಾಲಕನ ಚಿನ್ನದ ಸರ, ಮೊಬೈಲ್, ಹಣವನ್ನು ದೋಚಿದ ಘಟನೆ ಕೋಲಾರ ಜಿಲ್ಲೆಯ ನೆರ್ನಳ್ಳಿ ಎಂಬಲ್ಲಿ ನಡೆದಿದೆ
Please Wait while comments are loading...