ಮೊಬೈಲ್ ಬುಕ್ ಮಾಡಿದರೆ ಸೋಪು ಕಳಿಸುತ್ತಿದ್ದವನ ಬಂಧನ!

ಕೋಲಾರ, ಫೆಬ್ರವರಿ 07 : ಅಮೆಜಾನ್ ಮೂಲಕ ಮೊಬೈಲ್ ಬುಕ್ ಮಾಡಿದರೆ ಸೋಪು, ಪೌಡರ್ ಡಬ್ಬಿ ಬರುತ್ತಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಜನರಿಗೆ ವಂಚನೆ ಮಾಡುತ್ತಿದ್ದ ಕಂಪನಿಯ ಉದ್ಯೋಗಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಾಲೂರು ಪೊಲೀಸರು ಅಮೆಜಾನ್ ಉದ್ಯೋಗಿ ಕೆ.ಸೋಮಶೇಖರ್ ಎಂಬುವವರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಪಾಲಾಕ್ಷ ಪರಾಗಿಯಾಗಿದ್ದು, ಪೊಲೀಸರು ಹುಡುಕಾಡ ನಡೆಸುತ್ತಿದ್ದಾರೆ.

ಬಂಧಿತ ಆರೋಪಿ ಮಾಲೂರು ತಾಲೂಕಿನ ನಿದರಮಂಗಲ ಗ್ರಾಮದವನು. ಪಾಲಾಕ್ಷ ಕೆ.ಸೋಮಶೇಖರ್‌ಗೆ ವಂಚನೆ ಮಾಡಲು ಸಹಕಾರ ನೀಡುತ್ತಿದ್ದ. ಹೊಸಕೋಟೆ ಬಳಿ ಸೌಖ್ಯ ರಸ್ತೆಯಲ್ಲಿರುವ ಅಮೆಜಾನ್ ಕಂಪನಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು.

Amazon mobile fraud case company employee nabbed

ವಂಚನೆ ಮಾಡುತ್ತಿದ್ದದ್ದು ಹೇಗೆ? : ಆರೋಪಿಗಳು ಅಮೆಜಾನ್ ಕಂಪನಿಗೆ ಬರುವ ಮೊಬೈಲ್ ಆರ್ಡರ್‌ಗಳನ್ನು ಪಡೆದುಕೊಳ್ಳುತ್ತಿದ್ದರು. ಬಳಿಕ ಡಬ್ಬದಲ್ಲಿ ಸೋಪು, ಪೌಡರ್ ಡಬ್ಬಿಗಳನ್ನು ಇಟ್ಟು ಗ್ರಾಹಕರಿಗೆ ಕಳುಹಿಸುತ್ತಿದ್ದರು. ಬಂಧಿತರಿಂದ 10 ಲಕ್ಷ ಮೌಲ್ಯದ 46 ವಿವಿಧ ಕಂಪನಿ ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ಗ್ರಾಕರಿಗೆ ವಂಚನೆ ಮಾಡುತ್ತಿರುವ ಪ್ರಕರಣಗಳು ಪದೇ ಪದೇ ಕೇಳಿಬರುತ್ತಿತ್ತು. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಕಳ್ಳತನ ಮಾಡಿದ್ದ ಮೊಬೈಲ್‌ಗಳನ್ನು ಕೋಲಾರ, ಮಾಲೂರು ಸೇರಿದಂತೆ ವಿವಿಧ ಕಡೆ ಮಾರಾಟ ಮಾಡುತ್ತಿದ್ದರು.

ಮಾಲೂರು ಪೊಲೀಸರು ಕೆ.ಸೋಮಶೇಖರ್ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಪಾಲಾಕ್ಷ ಬಂಧನಕ್ಕಾಗಿ ಹುಡುಕಾಟ ಆರಂಭಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+