ಕಾರವಾರ: ಅಕ್ರಮವಾಗಿ ಸಾಗಿಸುತ್ತಿದ್ದ 1.15 ಲಕ್ಷ ಮೌಲ್ಯದ ಗೋವಾ ಮದ್ಯ ವಶ

Posted By: ಕಾರವಾರ ಪ್ರತಿನಿಧಿ
Subscribe to Oneindia Kannada

ಕಾರವಾರ, ಅಕ್ಟೋಬರ್ 25: ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 1.15 ಲಕ್ಷ ರು. ಮೌಲ್ಯದ ಗೋವಾ ಮದ್ಯವನ್ನು ಉತ್ತರಕನ್ನಡ ಜಿಲ್ಲೆಯ ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗೋವಾ ರಾಜ್ಯದಿಂದ ಬರುತ್ತಿದ್ದ ವಾಹನಗಳನ್ನು ಅನಮೋಡ ತಪಾಸಣಾ ಠಾಣೆಯಲ್ಲಿ ತಪಾಸಣೆ ಮಾಡುತ್ತಿದ್ದ ವೇಳೆ ಕೆಎ- 31 5619 ಲಾರಿಯಲ್ಲಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ.

ಲಾರಿಯಲ್ಲಿ ಸುಮಾರು 16 ಟನ್ ಕಟ್ಟಿಗೆಯ ತುಂಡುಗಳ ಒಳಗೆ ಅಕ್ರಮವಾಗಿ 373 ಲೀಟರ್ ಗೋವಾ ಮದ್ಯ ಹಾಗೂ 168 ಲೀಟರ್ ಬಿಯರ್‌ ಅನ್ನು ಅಡಗಿಸಿಡಲಾಗಿತ್ತು.

Worth 1.15 lakh Goa liquor seized in Karwar

ರಾಯಲ್ ಸ್ಟ್ಯಾಗ್ ವಿಸ್ಕಿ, ರೀಯಲ್ ವಿಸ್ಕಿ, ಓಲ್ಡ್ ಬಿಲ್ ವಿಸ್ಕಿ, ಕಿಂಗ್ ಫಿಶರ್ ಸ್ಟ್ರಾಂಗ್ ಬಿಯರ್ ಬಾಟಲಿಗಳನ್ನು ಪೆಟ್ಟಿಗೆಯಲ್ಲಿ ತುಂಬಿ ಅಡಗಿಸಿಡಲಾಗಿತ್ತು.

ಈ ವೇಳೆ ತಪಾಸಣೆ ನಡೆಸಿರುವ ಅಬಕಾರಿ ಸಿಬ್ಬಂದಿ ಅಕ್ರಮ ಒಂದೂವರೆ ಲಕ್ಷ ಮೌಲ್ಯದ ಗೋವಾ ಮದ್ಯ, 1.60 ಲಕ್ಷ ರು. ಮೌಲ್ಯದ ಕಟ್ಟಿಗೆ ತುಂಡುಗಳು ಹಾಗೂ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

ಹಾಗೂ ಲಾರೊ ಚಾಲಕ ಕೃಷ್ಣಾ ಮಾರುತಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಸ್ವತ್ತುಗಳು ರಾಮನಗರದ ಹುಸೇನಸಾಬ್ ಮುಲ್ಲಾ ಹಾಗೂ ಸಂತೋಷ ವಸಂತ ಮಿರಾಶಿ ಎಂಬುವವರಿಗೆ ಸಂಬಂಧಿಸಿರುವುದು ಎಂದು ಬಂಧಿತ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ,

ಕಾರ್ಯಚರಣೆಯಲ್ಲಿ ಅನಮೋಡ ತನಿಖಾ ಠಾಣೆಯ ಅಬಕಾರಿ ಉಪ ನಿರೀಕ್ಷಕ ಕೆ.ಮನೋಹರ, ಶ್ರೀಕಾಂತ ಅಸೋದೆ, ಸಿಬ್ಬಂದಿ ಎಂ.ಎಚ್.ಅನಮಟ್ಟಿ, ಪುಷ್ಪಾ ಜೊಗಳೇಕರ, ಎಸ್.ಬಿ.ಬನ್ಸೋಡೆ, ಶ್ರೀಕಾಂತ ಜಾಧವ ಮತ್ತು ಯಲ್ಲಾಪುರ ಉಪ ವಿಭಾಗದ ಅಬಕಾರಿ ನಿರೀಕ್ಷಕ ಜಿ.ಎಸ್.ನಾಯ್ಕ ಪಾಲ್ಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Uttara Kannada Excise police have seized Goa liquor worth 1.15 lakh at anamoda check post.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ