ಲೋಕಾ ಅಖಾಡದಲ್ಲಿ ಮೊದಲ ಬಾರಿ ಗೆದ್ದ ಸರದಾರನ ಹಿನ್ನೆಲೆ ಏನು ಗೊತ್ತಾ?
Uttara Kaannada Lok Sabha Election 2024 Result: ಉತ್ತರಕನ್ನಡದಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ವಿರುದ್ಧ 3,37,428 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಹಾಗಾದರೆ ಇವರು ರಾಜಕೀಯ ಹಿನ್ನೆಲೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕಳೆ ಮೂರು ದಶಕಗಳಿಂದ ಬಿಜೆಪಿ ಭದ್ರಕೋಟೆ ಆಗಿ ಗುರುತಿಸಿಕೊಂಡಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಭಾರೀ ಪೈಪೋಟಿ ನೀಡಿತ್ತು. ಪ್ರಬುದ್ಧ ಮತದಾರರಿರುವ ಈ ಕ್ಷೇತ್ರದಲ್ಲಿ ಈ ಬಾರಿ ವಿಶ್ಲೇಷಣೆ ಕಷ್ಟಸಾಧ್ಯ ಆಗುವಷ್ಟರ ಮಟ್ಟಿಗೆ ಪೈಪೋಟಿ ಇತ್ತು.

ಈ ಕ್ಷೇತ್ರಕ್ಕೆ ಮೇ 07ರಂದು ಮತದಾನ ನಡೆದಿದ್ದು, ಶೇಕಡಾ 76.53ರಷ್ಟು ಮತದಾನ ಆಗಿತ್ತು. ಇನ್ನು ಇಂದು (ಜೂನ್ 04) ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗೆಲುವಿನ ಹಾರ ಹಾಕಿಕೊಳ್ಳುವ ಮೂಲಕ ಮತ್ತೆ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂದು ಸಾಬೀತುಮಾಡಿದ್ದಾರೆ.
ಬಿಜೆಪಿಯ ಭದ್ರಕೋಟೆಯಾಗಿ ಗುರುತಿಸಿಕೊಂಡಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ, ಕಾಂಗ್ರೆಸ್ ನಡುವೆ ಭಾರೀ ಜಿದ್ದಾಜಿದ್ದಿನ ಹಣಾಹಣೆ ಏರ್ಪಟ್ಟಿದೆ. 28 ವವರ್ಷಗಳ ಬಳಿಕ ಬಿಜೆಪಿ ತನ್ನ ಅಭ್ಯರ್ಥಿ ಬದಲಿಸಲಿದ್ದು, ಆರು ಬಾರಿ ಶಾಸಕರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಕಣಕ್ಕಿಳಿಸಲಾಗಿದ್ದು, ಕಾಂಗ್ರೆಸ್‌ನಿಂದ ಖಾನಾಪುರ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಇಲ್ಲಿಂದ ಮೊದಲ ಬಾರಿ ಸ್ಪರ್ಧಿಸಿದ್ದರು.
1952ರಿಂದ ಕ್ಷೇತ್ರವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಕಾಂಗ್ರೆಸ್ 1996ರಲ್ಲಿ ಸೋಲನುಭವಿಸಿದ್ದು, 1999ರಲ್ಲಿ ಪುನಃ ಗೆಲುವು ಸಾಧಿಸಿದರೂ 2004ರಿಂದ ಕ್ಷೇತ್ರ ಬಿಜೆಪಿಯ ತೆಕ್ಕೆಯಲ್ಲಿತ್ತು. ಬಿಜೆಪಿಯು ಲೋಕಸಭಾ ಚುನಾವಣೆಯಲ್ಲಿ ಹಿಂದುತ್ವದ ಹೆಸರಿನಲ್ಲಿ ಗೆಲುವಿನತ್ತ ಸಾಗುತ್ತಾ ಬಂದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ, ಇದು ತೀವ್ರ ಪೈಪೋಟಿಯ ಕದನಕ್ಕೆ ಸಾಕ್ಷಿಯಾಗಿದ್ದು, ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಹೆಗಡೆ 2019ರ ಸಾರ್ವತ್ರಿಕ ಚುನಾವಣೆಯಲ್ಲಿ 7,86,042 ಮತಗಳನ್ನು ಗಳಿಸುವ ಮೂಲಕ 4,79,649 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಈ ಮೂಲಕ 3,06,393 ಮತಗಳನ್ನು ಪಡೆದ ಜೆಡಿ (ಎಸ್)ನ ಆನಂದ್ ಅಸ್ನೋಟಿಕರ್ ಅವರನ್ನು ಅನಂತ್ ಕುಮಾರ್ ಹೆಗಡೆ ಸೋಲಿಸಿದರು. ಇನ್ನು ಈ ಕ್ಷೇತ್ರದಲ್ಲಿ 2019ರಲ್ಲಿ 74.10 ಮತದಾನವಾಗಿದೆ. ಒಟ್ಟಿನಲ್ಲಿ ಈ ಬಾರಿ ಬಿಜೆಪಿ ಭದ್ರಕೋಟೆಯನ್ನು ಹೊಡೆದು ತಾವು ಬೇರೂರಲು ಕಾಂಗ್ರೆಸ್ ಗ್ಯಾರಂಟಿಗಳ ಬಾಣಗಳನ್ನು ಬಿಟ್ಟಿದೆ.












Click it and Unblock the Notifications