ಪರೇಶ್ ಮೇಸ್ತ ಶವ ಪತ್ತೆ: ಹೊನ್ನಾವರದಲ್ಲಿ ಉದ್ವಿಗ್ನ ವಾತಾವರಣ

Posted By: Nayana
Subscribe to Oneindia Kannada

ಕಾರವಾರ, ಡಿಸೆಂಬರ್ 08 : ಹೊನ್ನಾವರದಲ್ಲಿ ಬುಧವಾರ(ಡಿ.6)ರಂದು ನಡೆದ ಸಂ‍ಘರ್ಷದ ವೇಳೆ ಕಾಣೆಯಾಗಿದ್ದ ಪರೇಶ್ ಮೇಸ್ತ ಶವ ಕೆರೆಯಲ್ಲಿ ಪತ್ತೆ ಹೊನ್ನಾವರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಕೋಮು ಘರ್ಷಣೆ. ಹೊನ್ನಾವರ ಉದ್ವಿಗ್ನ. ಬುಧವಾರ ನಾಪತ್ತೆಯಾಗಿದ್ದ ಪರೇಶ ಮೇಸ್ತ ಶವ ಬಸ್ ನಿಲ್ದಾಣ ಬಳಿ ಕೆರೆಯಲ್ಲಿ ಶುಕ್ರವಾರ ಪತ್ತೆಯಾಗಿದೆ. ಕೆರೆಯಲ್ಲಿ ತೇಲುತ್ತಿರುವುದನ್ನು ಕಂಡು ಸ್ಥಳೀಯರೊಬ್ಬರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

Tension prevail in Honnavar as missing man body found

ಡಿಸಿ ಸಮ್ಮುಖದಲ್ಲಿ ಮಣಿಪಾಲದ ತಜ್ಞರಿಂದ ಶವ ಪರೀಕ್ಷೆ ನಡೆಸಲಾಗಿದೆ. ಪರೇಶ್ ಸಾವಿನ ಹಿಂದಿರುವವರನ್ನು ಬಂಧಿಸುವಂತೆ ಪಾಲಕರು ಪಾಲಕರು, ಸಾರ್ವಜನಿಕರಿಂದ ಆಗ್ರಹಿಸಿದರು.

ಪರೇಶ್ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಈಗಲೇ ಹೇಳಲು ಸಾದ್ಯವಿಲ್ಲ. ತನಿಖೆ ನಂತರ ಸಂಪೂರ್ಣ ಮಾಹಿತಿ ನೀಡುವುದಾಗಿ ಪೊಲೀಸರು ಹೇಳಿದರು. ಹೀಗಾಗಿ ಶುಕ್ರವಾರವೂ ಹೊನ್ನಾವರ ಬಂದ್ ಮುಂದುವರಿಕೆ. ಶಾಲಾ ಕಾಲೇಜಿಗೆ ಶುಕ್ರವಾರವೂ ರಜೆ ಘೋಷಿಸಿದ್ದರು.

ಶಾಸಕಿ ಶಾರದಾ ಶೆಟ್ಟಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿಯ ದಿನಕರ ಶೆಟ್ಟಿ, ಸುನೀಲ ನಾಯ್ಕ, ಕೆ.ಜಿ.ನಾಯ್ಕ ಸ್ಥಳಕ್ಕೆ ಆಗಮಿಸಿದ್ದರು. ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಕಾರ್ಯಕ್ರಮದ ನಿಮಿತ್ತ ಉಡುಪಿಯಲ್ಲಿ ತಂಗಿದ್ದು ಹೊನ್ನಾವರಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ಇನ್ನು ರಾಷ್ಟ್ರೀಯ ಸ್ವಯಂಸೇವಾ ಸಮಘದ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಸಹ ಹೊನ್ನಾವರಕ್ಕೆ ಭೇಟಿ ನೀಡಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tension prevailed in Honnavar town of north canara district. As dead body found in a lake who was missing from yesterday's communal clash between two communities.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ