• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒನ್ ವೇನಲ್ಲಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಕಾರ್ ಕಿಟಕಿಯಲ್ಲಿ ಎಳೆದೊಯ್ದು ದೂಡಿದ ಪ್ರವಾಸಿ

By ಕಾರವಾರ ಪ್ರತಿನಿಧಿ
|

ಕುಮಟಾ, ಜುಲೈ 27: ಪ್ರಸಿದ್ಧ ಪ್ರವಾಸಿ ತಾಣ ಗೋಕರ್ಣದಲ್ಲಿ ಪ್ರವಾಸಿ ವಾಹನ ಚಾಲಕನೊಬ್ಬ ಗೃಹ ರಕ್ಷಕ ಸಿಬ್ಬಂದಿಯೊಂದಿಗೆ ಅಮಾನುಷವಾಗಿ ವರ್ತಿಸಿರುವ ಘಟನೆ ಗುರುವಾರ ನಡೆದಿದೆ.

ನಿಯಮ ಉಲ್ಲಂಘಿಸಿ ಒನ್ ವೇನಲ್ಲಿ ಬರುತ್ತಿದ್ದ ಪ್ರವಾಸಿ ವಾಹನವನ್ನು ತಡೆಯಲು ಮುಂದಾದ ಕರ್ತವ್ಯ ನಿರತ ಗೃಹ ರಕ್ಷಕ ಸಿಬ್ಬಂದಿ ಚಿದಾನಂದ್ ಅವರನ್ನು ಪ್ರವಾಸಿ ವಾಹನ ಚಾಲಕ, ವಾಹನದ ಕಿಟಕಿಯ ನಡುವೆ ಸಿಲುಕಿಸಿ ವೇಗವಾಗಿ ಕೆಲ ದೂರದವರೆಗೆ ವಾಹನ ಚಲಾಯಿಸಿದ್ದಾನೆ. ಬಳಿಕ ರಸ್ತೆ ಮೇಲೆ ಆತನನ್ನು ದೂಡಿ ಪರಾರಿಯಾಗಿದ್ದಾನೆ.

 ಸೇನೆಯನ್ನು ಬೆದರಿಸಲು 12 ವರ್ಷದ ಬಾಲಕನನ್ನು ಒತ್ತೆಯಿರಿಸಿ ಕೊಂದ ಉಗ್ರರು ಸೇನೆಯನ್ನು ಬೆದರಿಸಲು 12 ವರ್ಷದ ಬಾಲಕನನ್ನು ಒತ್ತೆಯಿರಿಸಿ ಕೊಂದ ಉಗ್ರರು

ಘಟನೆ ಗೋಕರ್ಣದ ಕಡಲ ತೀರದ ರಸ್ತೆಯಲ್ಲಿ ನಡೆದಿದ್ದು, ರಸ್ತೆಯಂಚಿನ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸಿಬ್ಬಂದಿಯನ್ನು ಎಳೆದೊಯ್ಯುತ್ತಿರುವ ದೃಶ್ಯ ಸೆರೆಯಾಗಿದೆ.

ಚಿದಾನಂದ್ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ವಾಹನ ಸಿಕ್ಕಮೇಲೆ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

English summary
Car driver treated home guard inhuman way at a famous tourist spot Gokarna.Chidanand, who was on duty as a home guard, tried to stop a tourist vehicle coming in one way. Car driver stuck the home guard in window of the vehicle and drove quickly for some distance, thrown him on road and escaped.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X