ಕಾರವಾರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಿಐಟಿಯು ಕಾರ್ಯಕರ್ತರ ಬಂಧನ
ಕಾರವಾರ, ಜನವರಿ 09: ಭಾರತ್ ಬಂದ್ ಹಿನ್ನೆಲೆಯಲ್ಲಿ ನಗರದ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸುತ್ತಿದ್ದ ಐವರು ಸಿಐಟಿಯು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಕಾರ್ಯಕರ್ತರು ಬಸ್ ತಡೆಗೆ ಮುಂದಾಗಿದ್ದರು. ಹೀಗಾಗಿ ಅವರ ಮನವಲಿಸಲು ಪ್ರಯತ್ನಿಸಿದೆವು. ಆದರೂ ಅವರು ಹಿಂದೆ ಸರಿಯದ ಕಾರಣ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೆಳಗ್ಗೆ ನಗರದ ಬಸ್ ನಿಲ್ದಾಣದ ಎದುರು ಸಿಐಟಿಯುವಿನಿಂದ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೆವು. ಈ ವೇಳೆ ಪೋಲಿಸರು ಏಕಾಏಕಿ ಬಂದು ನಮ್ಮನ್ನು ಬಂಧಿಸಿದ್ದು ಖಂಡನೀಯವಾಗಿದೆ ಎಂದು ಬಂಧನದಲ್ಲಿರುವ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಯಮುನಾ ಗಾಂವ್ಕರ್ ಹೇಳಿದ್ದಾರೆ.











Click it and Unblock the Notifications