ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಟಾ ಉಪ್ಪಿಗೆ ಪಾರಂಪರಿಕ ಮಾನ್ಯತೆ; ಯೋಜನೆ ಸಿದ್ಧತೆಗೆ ಸೂಚನೆ

|
Google Oneindia Kannada News

ಕಾರವಾರ, ನವೆಂಬರ್ 30: ಕುಮಟಾ ತಾಲೂಕಿನ ಸಾಣಿಕಟ್ಟಾ ಪ್ರದೇಶದಲ್ಲಿ ಉತ್ಪಾದಿಸಲಾಗುವ ಉಪ್ಪನ್ನು ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಳಿಸಲು ಯೋಜನೆ ಸಿದ್ಧಗೊಂಡಿದೆ.

ಸ್ವಾತಂತ್ರ್ಯ ಪೂರ್ವದಿಂದಲೂ ಇಲ್ಲಿ ತಯಾರಿಸಲಾಗುವ ಉಪ್ಪು ತನ್ನದೇ ವೈಶಿಷ್ಟ್ಯ ಹೊಂದಿದೆ. ಉಪ್ಪು ತಯಾರಿಕೆ ನೇರವಾದ ಕೃಷಿ ಕಾರ್ಯವಲ್ಲದಿದ್ದರೂ ಈ ಭಾಗದ ಗ್ರಾಮೀಣ ಜನರಿಗೆ ಉದ್ಯೋಗ ನೀಡುವಂತಹ ಗ್ರಾಮೀಣ ಉದ್ಯಮ ಎನಿಸಿಕೊಂಡಿದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಪಾರಂಪರಿಕ ಪಟ್ಟಿಗೆ ಸೇರಿಸಿ ಮಾನ್ಯತೆ ನೀಡಲು ಯೋಜನೆ ರೂಪುಗೊಳ್ಳುತ್ತಿದೆ.

 ಪಾರಂಪರಿಕ ಪಟ್ಟಿಗೆ ಸೇರುವುದೇ ಕುಮಟಾದಲ್ಲಿ ತಯಾರಾದ ಉಪ್ಪು? ಪಾರಂಪರಿಕ ಪಟ್ಟಿಗೆ ಸೇರುವುದೇ ಕುಮಟಾದಲ್ಲಿ ತಯಾರಾದ ಉಪ್ಪು?

ಈ ಬಗ್ಗೆ ರಾಜ್ಯ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆಸಿ, ಸಾಣಿಕಟ್ಟಾ ಉಪ್ಪನ್ನು ಪಾರಂಪರಿಕ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

Uttara Kannada: Plans Are Being Made To Add Kumata Salt To Heritage List

ಕುಮಟಾ ತಾಲೂಕಿನ ಗೋಕರ್ಣದ ಸಾಣಿಕಟ್ಟಾದಲ್ಲಿ ಪ್ರಾಕೃತಿಕವಾಗಿ ಬೆಳೆಯುವ ಉಪ್ಪು ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲೂ ಅತಿ ಹೆಚ್ಚು ಬೇಡಿಕೆ ಹೊಂದಿದೆ. ಇಲ್ಲಿನ ಸುತ್ತಮುತ್ತಲಿನ 50 ಎಕರೆ ಪ್ರದೇಶದಲ್ಲಿ ಉತ್ಪಾದಿಸಲಾಗುತ್ತಿದ್ದ ಉಪ್ಪು, ಇದೀಗ 1952ರಲ್ಲಿ ಆರಂಭಗೊಂಡ ನಾಗರಬೈಲ್ ಉಪ್ಪು ತಯಾರಕರ ಸಹಕಾರಿ ಸಂಘದ ಮೂಲಕ ಸುಮಾರು 450 ಎಕರೆ ಪ್ರದೇಶದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಇಲ್ಲಿ ಉತ್ಪಾದನೆಯಾದ ಉಪ್ಪನ್ನು ಉತ್ತರಕನ್ನಡ, ಗದಗ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಗೋವಾ ಭಾಗಗಳಿಗೆ ರಪ್ತು ಮಾಡಲಾಗುತ್ತದೆ.

ಈ ಎಲ್ಲಾ ಅಂಶಗಳಿಂದ ಕುಮಟಾದಲ್ಲಿ ಉತ್ಪಾನೆಯಾಗುತ್ತಿರುವ ಉಪ್ಪು ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಳ್ಳಲು ಸಜ್ಜಾಗುತ್ತಿದೆ.

English summary
Plans are being made to add salt produced in the Sanikatta region of Kumata taluk to the heritage list,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X