• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರ ಬಿಡಿಸಿ, ಕಿಟ್ ಪಡೆದು ಬಡವರಿಗೆ ಹಂಚಿದ ಮಕ್ಕಳು!

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜೂನ್ 11; ಕೋವಿಡ್ ಹರಡುವಿಕೆ ತಡೆಗಾಗಿ ಲಾಕ್‌ಡೌನ್ ಜಾರಿಯಲ್ಲಿದೆ. ಇದರಿಂದಾಗಿ ದಿನಗೂಲಿ ನಂಬಿಕೊಂಡಿದ್ದವರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹಲವು ಕುಟುಂಬಗಳು ದುಡಿಯುವ ಕೈಗಳನ್ನೂ ಕಳೆದುಕೊಂಡು ನೋವಿನಲ್ಲಿವೆ, ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿವೆ.

ಹಲವು ಸಂಘ ಸಂಸ್ಥೆಗಳು, ದಾನಿಗಳು ಅಗತ್ಯವಸ್ತುಗಳನ್ನು ಕೆಲವು ಕಡೆ ವಿತರಿಸಿದ್ದಾರೆ. ಆದರೆ ಇದೇ ರೀತಿಯ ಕಿಟ್ ಗಳನ್ನು ವಿತರಿಸಲು ಇಲ್ಲೊಂದು ಯುಕವರ ತಂಡ ವಿಭಿನ್ನ ಕಾರ್ಯಕ್ರಮ ರೂಪಿಸಿತ್ತು. ಮಕ್ಕಳಲ್ಲಿ ಸಹಾಯ ಮನೋಭಾವ ಬೆಳೆಸುವ ಕಾರ್ಯವನ್ನು ಮಾಡಿತು.

ಅಗರ್ ವಾಲ್ ಸಮಾಜದಿಂದ ಮಂಗಳಮುಖಿಯರಿಗೆ ಪಡಿತರ ಕಿಟ್ ವಿತರಣೆಅಗರ್ ವಾಲ್ ಸಮಾಜದಿಂದ ಮಂಗಳಮುಖಿಯರಿಗೆ ಪಡಿತರ ಕಿಟ್ ವಿತರಣೆ

ಹೊನ್ನಾವರದ ಜ್ಞಾನ್ ಇಂಡಿಯಾ ಮತ್ತು ನಮ್ಮ ಹೊನ್ನಾವರ ಸಂಘಟನೆ ಈ ವಿಭಿನ್ನ ಕಾರ್ಯಕ್ರಮ ರೂಪಿಸಿತ್ತು.‌ 'ಬದುಕಿಗೆ ಬಣ್ಣ ಹಚ್ಚೋಣ' ಎಂಬ ಶೀರ್ಷಿಕೆಯಡಿ ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ಮಕ್ಕಳಿಗೆ ಕೋವಿಡ್ ಜಾಗೃತಿ ಮೂಡಿಸುವ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ತಲಾ ಮೂವರು ವಿಜೇತರು ಹಾಗೂ ಇಬ್ಬರು ಸಮಾಧಾನಕರ ಬಹುಮಾನ ವಿಜೇತರನ್ನು ಒಳಗೊಂಡಂತೆ ಒಟ್ಟು 10 ಮಕ್ಕಳನ್ನು ತಂಡ ಆಯ್ಕೆ ಮಾಡಿತು.

ಕಾರವಾರ; ಕೊವ್ಯಾಕ್ಸಿನ್ 2ನೇ ಡೋಸ್ ಪಡೆಯಲು ಜನರ ಹಿಂದೇಟು ಕಾರವಾರ; ಕೊವ್ಯಾಕ್ಸಿನ್ 2ನೇ ಡೋಸ್ ಪಡೆಯಲು ಜನರ ಹಿಂದೇಟು

ಮತ್ತೊಂದು ಕಡೆ ತಂಡ ಅಗತ್ಯವಸ್ತುಗಳನ್ನು ನೀಡಲು ದಾನಿಗಳನ್ನು ಹುಡುಕಿತು. 500ಕ್ಕೂ ಅಧಿಕ ಕಿಟ್‌ಗಳನ್ನು ತಯಾರು ಮಾಡಡಿತು. ದಾನಿಗಳನ್ನೂ ಪ್ರೋತ್ಸಾಹಿಸುವ ಉದ್ದೇಶದಿಂದ 500 ರೂ.ಗಳ 5 ಕಿಟ್ ಪ್ರಾಯೋಜಿಸುವವರಿಗೆ ಸಿಲ್ವರ್ ಡೋನರ್, 10 ಕಿಟ್ ಗಳಿಗೆ ಗೋಲ್ಡನ್, 15 ಕಿಟ್ ಗಳಿಗೆ ಡೈಮಂಡ್ ಹಾಗೂ 20 ಕಿಟ್ ಗಳನ್ನು ಪ್ರಾಯೋಜಿಸುವವರಿಗೆ ಪ್ಲಾಟಿನಮ್ ಡೋನರ್ ಎಂದು ಗುರುತಿಸಲಾಗಿದೆ.

ಕಾರವಾರ: ಮದುವೆ ಹಿಂದಿನ ದಿನವೇ ಕೊರೊನಾ ಸೋಂಕಿಗೆ ವರ ಬಲಿ!ಕಾರವಾರ: ಮದುವೆ ಹಿಂದಿನ ದಿನವೇ ಕೊರೊನಾ ಸೋಂಕಿಗೆ ವರ ಬಲಿ!

ವಿಲ್ಲಾ ಸಿಎನ್ ಸಿ, ಮಂತ್ರಾ, ಟೆಕ್ ಮಹೀಂದ್ರ ಫೌಂಡೇಶನ್, ಲೆಟ್ಸ್ ಡೂ ಸಮಥಿಂಗ್ ಗುಡ್ ಫೌಂಡೇಶನ್‌ಗಳು ಕೂಡ ಸಹಕಾರ ನೀಡಿದವು. ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ, ಬಹುಮಾನದ ಜೊತೆಗೆ ದಾನಿಗಳಿಂದ ಪಡೆದ ತಲಾ 5 ಕಿಟ್ ಗಳಂತೆ ವಿತರಿಸಲಾಗಿದೆ.

ಕಿಟ್ ಪಡೆದ ಮಗು ತನ್ನ ಸುತ್ತಮುತ್ತಲಿನ, ಪರಿಚಿತ ಅತಿ ಕಷ್ಟದಲ್ಲಿರುವವರನ್ನು ಗುರುತಿಸಿ ಆ ಕಿಟ್ ಗಳನ್ನು ವಿತರಿಸಲಿದೆ. ಹೀಗೆ 50 ಕಿಟ್‌ಗಳನ್ನು ಮಕ್ಕಳ ಮೂಲಕವೇ ವಿತರಿಸಿ, ಮಕ್ಕಳ ಹಾಗೂ ಅವರ ಪಾಲಕರಲ್ಲಿ ದಾನ ಮತ್ತು ನೆರವಿನ ಮಹತ್ವ ಹಾಗೂ ಮನೋಭಾವ ಮೂಡಿಸುವ ಪ್ರಯತ್ನ ಮಾಡಿದೆ.

Painting Competition Kids Won Food Kit And Hand Over To Poor Family

ಇದನ್ನು ಹೊರತುಪಡಿಸಿ ತಂಡದ ಸದಸ್ಯರೇ ಸುಮಾರು 400ಕ್ಕೂ ಅಧಿಕ ಕಿಟ್ ಗಳನ್ನು ಹೊನ್ನಾವರ ಗ್ರಾಮೀಣ ಭಾಗಗಳಲ್ಲಿ ವಿತರಿಸಿದ್ದಾರೆ. ಇನ್ನು ಈ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ರೈಲ್ವೆ ಎಡಿಜಿಪಿ ಭಾಸ್ಕರರಾವ್ ಆಗಮಿಸಿ, ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.

"ದುಡ್ಡಿದ್ದವನೇ ದೊಡ್ಡಪ್ಪನಲ್ಲ. ಕೊಡುವ ಮನಸ್ಸು ಇರುವ ಪ್ರತಿಯೊಬ್ಬನೂ ದೊಡ್ಡಪ್ಪನೇ. ಮಕ್ಕಳಲ್ಲಿ ನಾವು ಮಾನವೀಯತೆ ಬೆಳೆಸಬೇಕೆ ಹೊರತು ಸ್ಪರ್ಧೆಯನ್ನಲ್ಲ.‌ ಸ್ಪರ್ಧೆಯಲ್ಲೂ ಮಾನವೀಯ ಮೌಲ್ಯ ಇರಬೇಕು. ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವ ಮಾತಿನಂತೆ ನಾವು ನಮ್ಮಲ್ಲಿ ಏನಿದೆಯೋ, ಇಲ್ಲವೋ. ಮಕ್ಕಳಲ್ಲಿ ಸಹಾಯ ಮಾಡುವ, ಹಂಚಿ ತಿನ್ನುವ ಮನೋಭಾವವನ್ನು ಹುಟ್ಟು ಹಾಕಬೇಕಿದೆ"ಎಂದು ಜ್ಞಾನ್ ಇಂಡಿಯಾದ ಸಂಸ್ಥಾಪಕ ದೀಪಕ್ ನಾಯ್ಕ್ ಹೇಳಿದರು.

   ಯಾವ್ಯಾವ ಜಿಲ್ಲೆಗಳು Unlock: ಹೊಸ ಮಾರ್ಗಸೂಚಿಯಲ್ಲೇನಿದೆ? | CM Yediyurappa | Oneindia Kannada

   "ಕೊರೊನಾ 2ನೇ ಅಲೆಯ ಈ ಕಾಲದಲ್ಲಿ ಉತ್ತರಕನ್ನಡ ಜಿಲ್ಲೆಯ ಗುಡಿಸಲುಗಳಿಗೆ ತಿಂಗಳ ರೇಷನ್ ತಲುಪಿಸುವ ಮತ್ತು ಮಕ್ಕಳಲ್ಲಿ ಸಹಾಯದ ಗುಣ ಬೆಳೆಸುವ ಪ್ರಯತ್ನ ನಮ್ಮದಾಗಿತ್ತು. ಇದಕ್ಕೆ ಸಹಕರಿಸಿದ ಪ್ರತಿ ದಾನಿ, ಸ್ವಯಂಸೇವಕರು ಮತ್ತು ಗೆಳೆಯರಿಗೆ ಧನ್ಯವಾದಗಳು" ಎಂದು ಜ್ಞಾನ್ ಇಂಡಿಯಾದ ಸಹ ಸಂಸ್ಥಾಪಕ ಪ್ರಶಾಂತ್ ನಾಯ್ಕ್ ಕರ್ಕಿ ಹೇಳಿದ್ದಾರೆ.

   English summary
   Unique idea to help poor people in the time of Covid lockdown. Kids won food kit as prize in painting competition and hand over the kit to poor family.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X