Get Updates
Get notified of breaking news, exclusive insights, and must-see stories!

ಸತತ 766 ದಿನ ವಿದ್ಯುತ್ ಉತ್ಪಾದಿಸಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಕೈಗಾ

ಕಾರವಾರ, ಜೂನ್.18 : ಕೈಗಾ ಅಣು ವಿದ್ಯುತ್ ಸ್ಥಾವರದ ಒಂದನೇ ಘಟಕವು ಜೂನ್ 17ರವರೆಗೆ ಸತತ 766 ದಿನಗಳವರೆಗೆ ವಿದ್ಯುತ್ ಉತ್ಪಾದಿಸಿ, ದೇಶದಲ್ಲಿ ಪ್ರಥಮ ಹಾಗೂ ಜಾಗತಿಕವಾಗಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

2016ರ ಮೇ 13ರಂದು ಈ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗಿತ್ತು. ಅದು ಜೂ.17ಕ್ಕೆ 766ದಿನ ಪೂರೈಸಿದೆ.

ಈ ಹಿಂದೆಯೂ ಕೂಡ ಈ ಘಟಕ ಸಾಧನೆಯ ಪಟ್ಟಿಗೆ ಸೇರಿತ್ತು. 2007ರ ಸೆಪ್ಟೆಂಬರ್ ನಿಂದ 2009ರ ಜನವರಿಯವರೆಗೆ ನಿರಂತರವಾಗಿ 486 ದಿನ, 2010ರ ಅಕ್ಟೋಬರ್ ನಿಂದ 2011ರ ಅಕ್ಟೋಬರ್ ತನಕ ನಿರಂತರವಾಗಿ 346 ದಿನಗಳು, 2011ರ ಸೆಪ್ಟೆಂಬರ್ ನಿಂದ 2012ರ ಆಗಸ್ಟ್ ತನಕ 323 ದಿನಗಳು ಹಾಗೂ 2012ರ ಸೆಪ್ಟೆಂಬರ್ ತನಕ 315 ದಿನಗಳ ಕಾಲ ಇಲ್ಲಿ ನಿರಂತರವಾಗಿ ವಿದ್ಯುತ್ ಉತ್ಪಾದನೆ ಮಾಡಲಾಗಿತ್ತು.

 One unit of Kaiga nuclear power plant again written a new record.

ವಿದ್ಯುತ್ ಉತ್ಪಾದನೆ ಹಾಗೂ ಸುರಕ್ಷತೆಗಾಗಿ ನೀಡಲಾಗುವ ವಿವಿಧ ಪ್ರಶಸ್ತಿ, ಪುರಸ್ಕಾರಗಳನ್ನು ಈ ಕೈಗಾ ಘಟಕಗಳು ಪಡೆದಿವೆ. ಕೈಗಾದ 1 ಹಾಗೂ 2ನೇ ಘಟಕಗಳಿಗೆ 2011ರಲ್ಲಿ ಸುರಕ್ಷಾ ಪುರಸ್ಕಾರ, 2012ರಲ್ಲಿ ಪವರ್‌ಲೈನ್ ಅವಾರ್ಡ್, 2012ರಲ್ಲಿ ಶ್ರೇಷ್ಠ ಸುರಕ್ಷಾ ಪುರಸ್ಕಾರ, ಕೈಗಾ ಘಟಕಗಳಿಗೆ ಎರಡು ಬಾರಿ ರಾಷ್ಟ್ರೀಯ ಸುರಕ್ಷಾ ಮಂಡಳಿಯಿಂದ ಉನ್ನತ ಸುರಕ್ಷಾ ಪುರಸ್ಕಾರ, 3 ಹಾಗೂ 4ನೇ ಘಟಕಗಳಿಗೆ 2011ರಲ್ಲಿ ಫೈಯರ್ ಸೇಫ್ಟಿ ಅವಾರ್ಡ್, 3 ಹಾಗೂ 4ನೇ ಘಟಕಗಳಿಗೆ 2012ರಲ್ಲಿ ಸುರಕ್ಷಾ ಪುರಸ್ಕಾರ ಲಭಿಸಿದೆ.

ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಕರ್ನಾಟಕ, ಗುಜರಾತ್ ಸೇರಿದಂತೆ ದೇಶದಲ್ಲಿ ಒಟ್ಟು 20ಕ್ಕೂ ಹೆಚ್ಚು ಅಣು ವಿದ್ಯುತ್ ಘಟಕಗಳಿವೆ. 1969ರಲ್ಲಿಯೇ ತಾರಾಪುರದ ಮೂಲಕ ದೇಶದಲ್ಲಿ ಅಣು ವಿದ್ಯುತ್ ಯೋಜನೆ ಆರಂಭವಾಗಿತ್ತು.

 One unit of Kaiga nuclear power plant again written a new record.

ಕೈಗಾದ 1ನೇ ಘಟಕದ ಗುಮ್ಮಟ ಕುಸಿದು ಬಿದ್ದು, ವಿಕಿರಣಪೂರಿತ ನೀರನ್ನು ಕುಡಿದು 40 ಜನರು ಒಮ್ಮೆ ಅಸ್ವಸ್ಥರಾಗಿದ್ದರು. ಕೈಗಾದ ಘಟಕವೊಂದರಲ್ಲಿ ಹೊಗೆ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು. ಇಂಥ ಹಲವು ಆತಂಕಗಳ ನಡುವೆಯೂ ಕೈಗಾ ಅಣು ವಿದ್ಯುತ್ ಘಟಕಗಳು ಅಚ್ಚರಿಯ ಸಾಧನೆಗಳನ್ನು ಮಾಡುತ್ತಿರುವುದು ಗಮನಾರ್ಹವಾಗಿದೆ.

 One unit of Kaiga nuclear power plant again written a new record.

ಕೈಗಾದಲ್ಲಿ ಒಟ್ಟು ನಾಲ್ಕು ಅಣು ವಿದ್ಯುತ್ ಸ್ಥಾವರಗಳಿವೆ. ಇನ್ನೆರಡು ಸ್ಥಾವರ ಸ್ಥಾಪನೆಗೆ ಅನುಮತಿ ಸಿಕ್ಕಿದೆ. ಕೈಗಾದ ಎರಡು ಘಟಕಗಳು 2000 ಹಾಗೂ ಮತ್ತೆರಡು ಘಟಕಗಳು 2007 ಹಾಗೂ 2010ರಲ್ಲಿ ನಿರ್ಮಾಣಗೊಂಡಿದ್ದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+