2018ನೇ ಸಾಲಿನ ಕೊಂಕಣಿ ಅಕಾಡೆಮಿ ಪ್ರಶಸ್ತಿ ಘೋಷಣೆ
ಕಾರವಾರ, ಫೆಬ್ರವರಿ 10: 2018ನೇ ಸಾಲಿನ ಕೊಂಕಣಿ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ 2018ನೇ ಸಾಲಿನ ಪುಸ್ತಕ ಬಹುಮಾನ ಘೋಷಣೆಯಾಗಿದೆ.
ಅಕಾಡೆಮಿಯ ಗೌರವ ಪ್ರಶಸ್ತಿಗೆ ಕೊಂಕಣಿ ಸಾಹಿತ್ಯದಲ್ಲಿ ಜೆ.ಎಫ್.ಡಿಸೋಜಾ, ಕೊಂಕಣಿ ಕಲೆಯಲ್ಲಿ ಕೂಡ್ಲ ಆನಂದು ಮಧುಕರ್ ಶ್ಯಾನಭಾಗ, ಕೊಂಕಣಿ ಜಾನಪದದಲ್ಲಿ ಡಾ.ವಸಂತ ಬಾಂದೇಕರ್ ಆಯ್ಕೆಯಾಗಿದ್ದಾರೆ.
ಕೊಂಕಣಿ ಕವನದಲ್ಲಿ ರೋಶು ಬಜ್ಪೆ ಅವರ 'ತೀಂತ್ ಜಾಲೆಂ ರಗತ್', ಕೊಂಕಣಿ ಸಣ್ಣಕಥೆಯಲ್ಲಿ ಜೆಯಲ್ ಮಂಜರಪಲ್ಕೆ ಅವರ 'ಚಂದ್ರೆಮಾಚಿ ಖತಾಂ', ಕೊಂಕಣಿ ಕಾದಂಬರಿಯಲ್ಲಿ ಲವಿ ಗಂಜಿಮಠ ಅವರ 'ಚುಕ್‍ಲ್ಲಿಂ ಮೆಟಾಂ" ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ.

ಜೆ.ಎಫ್.ಡಿಸೋಜಾ
ಜೋಕಿಮ್ ಫೆಡ್ರಿಕ್ ಡಿ'ಸೋಜಾ ಇವರ ಜನನ ಮಂಗಳೂರು ಮಿಲಾಗ್ರಿಸ್ ನ ಅತ್ತಾವರದಲ್ಲಿ. 1961ರಲ್ಲಿ ಸರಕಾರಿ ಅರಣ್ಯ ಇಲಾಖೆಯಲ್ಲಿ ಸೇವೆಗೆ ಸೇರಿಕೊಂಡು 39 ವರ್ಷಗಳ ಸುದೀರ್ಘ ಸೇವೆ ನೀಡಿ, ಸುಪರಿಟೆಂಡೆಂಟ್ ಪದವಿಯೊಂದಿಗೆ ನಿವೃತ್ತಿ ಹೊಂದಿದ್ದಾರೆ. ಇವರು ಜೆ.ಎಫ್. ಡಿಸೋಜಾ ಅತ್ತಾವರ, ಜೆಫ್ರಿ ಕುಮಾರ್, ಜೆಪ್ಪು ಜೆಫ್ರಿ ಹೆಸರಿನಲ್ಲಿ ಮಕ್ಕಳ ಕತೆ, ಲೇಖನಗಳನ್ನು ಬರೆದಿದ್ದಾರೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕೊಂಕಣಿ, ತುಳು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಈ ರೀತಿ ಕೊಂಕಣಿ, ಕನ್ನಡ, ಇಂಗ್ಲಿಷ್, ತುಳು ಸಾಹಿತ್ಯದಲ್ಲಿಇವರ ಕೆಲಸ ಇಂದಿಗೂ ಸಾಗುತ್ತಲೇ ಇದೆ.
ಕೂಡ್ಲ ಆನಂದು ಮಧುಕರ್ ಶ್ಯಾನಭಾಗ
ಕೂಡ್ಲ ಆನಂದ ಮಧುಕರ್ ಶ್ಯಾನಭಾಗ ಇವರ ಜನನ 1953. ಸುಮಾರು 40 ಕ್ಕೂ ಹೆಚ್ಚು ನಾಟಕದ ನಿರ್ದೇಶನ ಮಾಡಿ ಪ್ರಮುಖ ನಗರ ಉತ್ಸವಗಳಲ್ಲಿ ಪ್ರದರ್ಶನ ನೀಡಿರುತ್ತಾರೆ. 2005-08 ನೇ ಸಾಲಿನಲ್ಲಿ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅನೇಕ ಯುವ ಕಲಾವಿದರನ್ನು ಒಟ್ಟುಗೂಡಿಸಿ ಕೊಂಕಣಿ ನಾಟಕ ಕಲಾ ತರಬೇತಿಯನ್ನು ನಡೆಸುತ್ತಿದ್ದಾರೆ.
ಡಾ.ವಸಂತ ಬಾಂದೇಕರ್
ಡಾ. ವಸಂತ ಬಾಂದೇಕರ್ ರವರ ಜನನ 1947. ಕೊಂಕಣಿ ಏಕ್‍ವ್ಯಕ್ತಿ ಸೇವೆಯ ಜೊತೆಗೆ ನಶಿಸಿ ಹೋಗುತ್ತಿರುವ ಕೊಂಕಣಿ ಜಾನಪದ ಕಲೆಗಳನ್ನು, ಸಾಹಿತ್ಯವನ್ನು ಲಿಖಿತವಾಗಿ ಛಾಯಾ ಚಿತ್ರದ ಮುಖಾಂತರ ಆಡಿಯೋ-ವೀಡಿಯೋ ಮೂಲಕ ಸಂಗ್ರಹಿಸಿ ಯುವಕ ಯುವತಿಯರಿಗೆ ತರಬೇತಿ ನೀಡಿ ವಿವಿಧ ಕಲಾತಂಡಗಳನ್ನು ಕಾರವಾರ ಕರಾವಳಿ ಉತ್ಸವ- ಕೊಂಕಣಿ ಸಾಹಿತ್ಯ ಅಕಾಡೆಮಿ ಉತ್ಸವ-ಜಾಗೃತಿ ಅಭಿಯಾನ-ಮಾಂಡ ಸೋಬಾಣ ಆಯೋಜಿತ ಉತ್ಸವ ಹೀಗೆ ಹಲಾವಾರು ಉತ್ಸವಗಳಲ್ಲಿ ಇವರ ನೇತೃತ್ವದ ಜೊತೆಗೆ ಕಲಾತಂಡಗಳ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೀಡಿರುತ್ತಾರೆ.
ಪುಸ್ತಕ ಬಹುಮಾನ ಪುರಸ್ಕೃತರು
ರೋಶು ಬಜ್ಪೆ ಎಂ.ಕಾಮ್. ಪದವೀಧರಾಗಿದ್ದು, ಸಣ್ಣ ಕತೆ, ವಿನೋದ, ವಿಡಂಬನಾ, ಲೇಖನಾಂ ಲಲಿತಪ್ರಬಂಧಗಳನ್ನು ಬರೆದಿದ್ದಾರೆ.
ಜೆಯಲ್ ಮಂಜರಪಲ್ಕೆ ಹೆಸರಲ್ಲಿ ಕೊಂಕಣಿಯಲ್ಲಿ ಬರೆಯುತ್ತಿರುವ ಜ್ಯೋತಿ ಲೊರಿನ್ ಡಿಸಿಲ್ವಾ ಮೂಲತ: ಬೆಳ್ಮಣ್ಣಿನವರು. ಎಂ.ಎ. ಬಿ.ಎಡ್ ಮಾಡಿ ಕುಂದಾಪುರದ ಸಂತ ಮೇರಿಸ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಅವರ ಕಥೆಗಳು ಕೊಂಕಣಿಯ ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟವಾಗುತ್ತಿವೆ.
ತಾರಾ ಲವೀನಾ ಫೆರ್ನಾಂಡಿಸ್, ಎಂ.ಎ. ಬಿ.ಎಡ್ ಪದವೀಧರೆಯಾಗಿದ್ದು, ಕಿನ್ನಿಕಂಬಳ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಲವಿ ಗಂಜಿಮಠ ಹೆಸರಿನಲ್ಲಿ ಕೊಂಕಣಿ ಸಾಹಿತ್ಯ ರಚನೆ ಮಾಡುತ್ತಿರುವ ಇವರು ಅಮ್ಚೊ ಯುವಕ್ ಪತ್ರಿಕೆಯಲ್ಲಿ ಪ್ರಕಟವಾದ ವಿಧಿಚಿ ದಾವ್ಲಿ ಎನ್ನುವ ಸಣ್ಣ ಕಥೆಯ ಮೂಲಕ ಸಾಹಿತ್ಯ ಸಂಸಾರಕ್ಕೆ ಕಾಲಿಟ್ಟರು.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications