• search
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಪ್ಪು ಬಣ್ಣಕ್ಕೆ ತಿರುಗಿ ಅಚ್ಚರಿ ಮೂಡಿಸಿದ ರವೀಂದ್ರನಾಥ ಟ್ಯಾಗೋರ್ ಕಡಲತೀರ

By ಕಾರವಾರ ಪ್ರತಿನಿಧಿ
|
   ಕಾರವಾರದ ರವೀಂದ್ರನಾಥ ಟಾಗೋರ್ ಬೀಚ್ ಕಪ್ಪು ಬಣ್ಣಕ್ಕೆ ತಿರುಗಿದ್ದಕ್ಕೆ ಕಾರಣ?

   ಕಾರವಾರ, ಜೂನ್.14 : ಎರಡ್ಮೂರು ಬಾರಿ ಹಸಿರು ಬಣ್ಣಕ್ಕೆ ತಿರುಗಿದ್ದ ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರ ಇಂದು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿ ಅಚ್ಚರಿ ಮೂಡಿಸಿದೆ.

   ಕಾರವಾರದ ಅಲಿಗದ್ದಾದಿಂದ ಕೋಡಿಬಾಗದವರೆಗಿನ ಕಡಲತೀರ ಸಂಪೂರ್ಣ ಕಪ್ಪಾಗಿದೆ.

   ಜತೆಗೆ, ಕಡಲತೀರದಲ್ಲಿ ಕಸಕಡ್ಡಿಗಳು ಬಿದ್ದು ಗಲೀಜಾಗಿದೆ. ಇತ್ತೀಚೆಗಷ್ಟೆ ಕಡಲತೀರದಲ್ಲಿ ಹೂಳೆತ್ತಲಾಗಿತ್ತು. ಚೆನ್ನೈನ ಇಂಟರ್ ನ್ಯಾಶನಲ್ ಸೀಫೋರ್ ಎಂ ಕಂಪನಿಯ ಬೃಹತ್ ಹಡಗುಗಳು 2017 ಡಿ.28 ರಂದು ಮೂರು ತಿಂಗಳ ಕಾಲ ಹೂಳೆತ್ತಿದ್ದವು.

   ಸಾಹಿತ್ಯಪ್ರೇಮಿಗಳನ್ನು ಕೈಬೀಸಿ ಕರೆಯುತಿದೆ ಮಲ್ಪೆ ಕಡಲತೀರ

   ವಾಣಿಜ್ಯ ಹಡಗು ಚಲಿಸುವ ಚಾನೆಲ್‌ಗಳಲ್ಲಿ ತುಂಬಿಕೊಂಡಿದ್ದ ಸುಮಾರು 150 ಮೀಟರ್ ಅಗಲ ಹೂಳನ್ನು ಒಟ್ಟು 33 ಕೋಟಿ ರೂ. ವೆಚ್ಚದಲ್ಲಿ ತೆರವುಗೊಳಿಸಲಾಗಿತ್ತು.

   Karwar Ravindranath Tagore Beach has turned black today

   ಕಾರವಾರದ ವಾಣಿಜ್ಯ ಬಂದರಿನ ಮಾರ್ಗ ಹಾಗೂ ಬಂದರು ಧಕ್ಕೆ ಪ್ರದೇಶದಲ್ಲಿದ್ದ 17 ಲಕ್ಷ ಕ್ಯೂಬಿಕ್ ಮೀಟರ್ ಹೂಳನ್ನು ಅರಬ್ಬೀ ಸಮುದ್ರದಲ್ಲಿ 20 ನಾಟಿಕಲ್ ಮೈಲ್ ಚಲಿಸಿ ಸಮುದ್ರದ ಆಳದಲ್ಲಿ ಸುರಿಯಲಾಗಿತ್ತು.

   ಇದೇ ಹೂಳು ಈಗ ದಡಕ್ಕೆ ಬಂದಿದ್ದು, ಇದರಿಂದಲೇ ನೀರು ಕಪ್ಪಾಗಿದೆ ಎನ್ನಲಾಗುತ್ತಿದೆ.

   Karwar Ravindranath Tagore Beach has turned black today

   ಜತೆಗೆ, ಅರಣ್ಯ ಇಲಾಖೆಯವರು ಹಾಗೂ ಸಾರ್ವಜನಿಕರು ಬೇಸಿಗೆ ಕಾಲದಲ್ಲಿ ಬೆಂಕಿ ಹಾಕಿದ್ದರು. ಹೀಗಾಗಿ, ಅಲ್ಲಿ ಸುಟ್ಟಿದ್ದ ಗಿಡಗಳು, ಪ್ಲಾಸ್ಟಿಕ್ ವಸ್ತುಗಳು ಮಳೆಯಿಂದಾಗಿ ಕಾಳಿ ನದಿ ಸೇರಿದಂತೆ ಪಶ್ಚಿಮ ಘಟ್ಟದಿಂದ ಸಮುದ್ರಕ್ಕೆ ಸೇರಿಕೊಂಡಿತ್ತು. ಅವುಗಳು ಕೂಡ ಈಗ ದಡಕ್ಕೆ ಬಂದಿದೆ ಎನ್ನಲಾಗಿದೆ.

   ಪರಿಣಾಮ ಏನು?

   ಈ ಕುರಿತು ಕಡಲ ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ಮಾತನಾಡಿ, ಈ ಕಸಗಳಿಂದ ಸಮುದ್ರದಲ್ಲಿ ಆಲ್ಗೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

   Karwar Ravindranath Tagore Beach has turned black today

   ಆಲ್ಗೆಗಳು ಹೆಚ್ಚಾದರೆ ಕಡಲ ಜೀವಿಗಳಿಗೆ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಕಸದಿಂದ ಆಲ್ಗೆಗಳಿಗೆ ಅಗತ್ಯ ಪೋಷಕಾಂಶಗಳು ಲಭ್ಯವಾಗುವುದು ಅವುಗಳ ಬೆಳವಣಿಗೆಗೆ ಕಾರಣವಾಗಿದೆ ಎನ್ನುತ್ತಾರೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   ಇನ್ನಷ್ಟು ಕಾರವಾರ ಸುದ್ದಿಗಳುView All

   English summary
   Karwar Ravindranath Tagore Beach has turned black today and surprised.The beach is completely dark from the kodibag to allagadda.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more