Get Updates
Get notified of breaking news, exclusive insights, and must-see stories!

ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿ: ಹಳೆ ಕಲಿಗಳ ನಡುವೆ ಮತ್ತೆ ಹಣಾಹಣಿ

ಕಾರವಾರ, ಏಪ್ರಿಲ್‌ 13: ಚುನಾವಣೆಗೆ ದಿನಗಣನೆ ಪ್ರಾರಂಭವಾದ ಬೆನ್ನಲ್ಲೇ ಬಹುತೇಕ ಪಕ್ಷಗಳು ತಮ್ಮ‌ ಅಭ್ಯರ್ಥಿಗಳನ್ನು ಫೈನಲ್ ಮಾಡಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಬಿಜೆಪಿಯ ಆರು ಕ್ಷೇತ್ರಗಳಿಲ್ಲಿಯೂ ಹಳಬರನ್ನೆ ಕಣಕ್ಕೆ ಇಳಿಸಿದ್ದರೇ, ಕಾಂಗ್ರೆಸ್ ಕೂಡ ಯಲ್ಲಾಪುರ ಕ್ಷೇತ್ರ ಹೊರತುಪಡಿಸಿ ಅದೇ ಸೂತ್ರ ಅನುಸರಿಸಿದೆ.

ಆದರೆ ಅತಿ ಹೆಚ್ಚು ಆಕಾಂಕ್ಷಿಗಳಿರುವ ಕುಮಟಾ ಕ್ಷೇತ್ರ ಅಭ್ಯರ್ಥಿ ಘೋಷಣೆ ಕಗ್ಗಂಟಾಗಿದ್ದು, ಇತ್ತ ಜೆಡಿಎಸ್ ಕೂಡ ಎರಡು ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಬಾಕಿ ಉಳಿಸಿಕೊಂಡಿದೆ.ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲು ಗಾವು ಹೆಚ್ಚಾಗುತ್ತಿದ್ದಂತೆ ಚುನಾವಣೆ ಕಾವು ಕೂಡ ಹೆಚ್ಚಾಗಿದೆ.

Karnataka Polls 2023 : Uttara Kannada District Assembly Constituencies Party-wise Candidates List

ಜಿಲ್ಲೆಯಲ್ಲಿ ಮೊದಲು ಕಾಂಗ್ರೆಸ್ ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿ ಬಳಿಕ ಮತ್ತೆರಡು ಕ್ಷೇತ್ರಗಳಿಗೆ ಫೈನಲ್ ಮಾಡಿತ್ತು. ಇದೀಗ ಕುಮಟಾ ಕ್ಷೇತ್ರದ ಟಿಕೆಟ್ ಮಾತ್ರ ಬಾಕಿ ಉಳಿದುಕೊಂಡಿದೆ. ಇನ್ನು ಬಿಜೆಪಿಯಲ್ಲಿ ಹಳಬರನ್ನು ಹೊಸಬರಿಗೆ ಈ ಬಾರಿ ಮಣೆಹಾಕಲಾಗುತ್ತಿದೆ ಎಂದೇ ಹೇಳಲಾಗುತಿತ್ತು. ಇದರಿಂದ ಜಿಲ್ಲೆಯಲ್ಲಿ ಸಾಕಷ್ಟು ಕುತೂಹಲಕ್ಕೂ ಕಾರಣವಾಗಿತ್ತು. ಆದರೆ ಅಂತಿಮವಾಗಿ ಮೊದಲ ಪಟ್ಟಿಯಲ್ಲಿ ಬಿಜೆಪಿ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ಈ ಹಿಂದಿನ ಚುನಾವಣೆಗಳಲ್ಲಿ ಗೆದ್ದ ಐವರಿಗೂ ಹಾಗೂ ಹಳಿಯಾಳದಲ್ಲಿ ಮಾಜಿ ಶಾಸಕರಿಗೆ ಟಿಕೆಟ್ ನೀಡಿದೆ.

ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿ:

ಕ್ಷೇತ್ರ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಇತರರು
ಹಳಿಯಾಳ ಸುನೀಲ್ ಹೆಗಡೆ ಆರ್.ವಿ.‌ದೇಶಪಾಂಡೆ ಎಸ್.ಎಲ್ ಘೋಟ್ನೇಕರ್ ಘೋಷಣೆಯಾಗಿಲ್ಲ
ಯಲ್ಲಾಪುರ ಶಿವರಾಂ ಹೆಬ್ಬಾರ್‌ ವಿ.ಎಸ್‌ ಪಾಟೀಲ್‌ ಘೋಷಣೆಯಾಗಿಲ್ಲ ಘೋಷಣೆಯಾಗಿಲ್ಲ
ಕಾರವಾರ ರೂಪಾಲಿ ನಾಯ್ಕ್‌ ಸತೀಶ್‌ ಕೃಷ್ಣ ಸಾಯಿಲ್‌ ಘೋಷಣೆಯಾಗಿಲ್ಲ ಆಶಿಶ್‌ ಪ್ರಭಾಕರ್‌(ಎಎಪಿ)
ಕುಮಟಾ ದಿನಕರ್‌ ಶೆಟ್ಟಿ ಘೋಷಣೆಯಾಗಿಲ್ಲ ಸೂರಜ್ ನಾಯ್ ರೂಪಾ ನಾಯಕ್‌(ಎಎಪಿ)
ಶಿರಸಿ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಭೀಮಣ್ಣ ನಾಯಕ್‌ ಉಪೇಂದ್ರ ಪೈ, ಹಿತೇಂದ್ರ ನಾಯಕ್‌ (ಎಎಪಿ)
ಭಟ್ಕಳ ಸುನೀಲ್‌ ನಾಯ್ಕ್ ಸಿ ಮಾಂಕಲ್‌ ಸುಬ್ಬ ವೈದ್ಯಾ ನಾಗೇಂದ್ರ ನಾಯ್ಕ ನಸೀಮ್‌ ಅಹಮದ್‌ ಖಾನ್‌ (ಎಎಪಿ)

ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗಳು

ಇನ್ನು 2013 ಚುನಾವಣೆ ಬಳಿಕ ಕಾಂಗ್ರೆಸ್ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಶಾಸಕರನ್ನು ಹೊಂದಿ ಭದ್ರಕೋಟೆಯಾಗಿತ್ತು. ಆದರೆ 2018 ರ ಚುನಾವಣೆ ಹಾಗೂ ನಂತರದ ಯಲ್ಲಾಪುರ ಕ್ಷೇತ್ರದ ಉಪ ಚುನಾವಣೆ ಬಳಿಕ ಅದು ಉಲ್ಟಾ ಆಗಿ ಬಿಜೆಪಿ ತೆಕ್ಕೆಗೆ ಸೇರಿದೆ. ಆದರೆ ಈ ಕ್ಷೇತ್ರಗಳನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಹಳಬರಿಗೆ ಹಾಗೂ ಬಿಜೆಪಿ ಅಸಮಾಧಾನಿತರಿಗೆ ಟಿಕೆಟ್ ಘೋಷಣೆ ಮಾಡಿದೆ.

Karnataka Polls 2023 : Uttara Kannada District Assembly Constituencies Party-wise Candidates List

ಹಳಿಯಾಳ-ಜೊಯಿಡಾ ಕ್ಷೇತ್ರದಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಆರ್.ವಿ.‌ದೇಶಪಾಂಡೆ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಮಾಜಿ ಶಾಸಕ ಸತೀಶ್ ಸೈಲ್, ಭಟ್ಕಳ-ಹೊನ್ನಾವರದಲ್ಲಿ ಮಾಜಿ ಶಾಸಕ ಮಂಕಾಳು ವೈದ್ಯ, ಶಿರಸಿ-ಸಿದ್ದಾಪುರದಲ್ಲಿ ಭೀಮಣ್ಣ ನಾಯ್ಕ ಅವರಿಗೆ ಟಿಕೆಟ್ ನೀಡಿ ಆ ಮೂಲಕ ಈ ಹಿಂದಿನ ಅಭ್ಯರ್ಥಿಗಳನ್ನೆ ಕಣಕ್ಕೆ ಇಳಿಸಲಾಗಿದೆ. ಆದರೆ ಯಲ್ಲಾಪುರ ಮುಂಡಗೋಡ ಕ್ಷೇತ್ರದಲ್ಲಿ ಈ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿರುವ ವಿ.ಎಸ್ ಪಾಟೀಲ್ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಕುಮಟಾದಲ್ಲಿ ನಿವೇದಿತ್ ಆಳ್ವಾ ಅವರಿಗೆ ಟಿಕೆಟ್ ಎಂದು ಹೇಳಲಾಗಿತ್ತಾದರೂ ಕ್ಷೇತ್ರದಲ್ಲಿ ಕೆಲಸ ಮಾಡಿದರಿಗೆ ನೀಡದೆ ಬೆರೆಯವರಿಗೆ ಮಣೆ ಹಾಕಲು ಮುಂದಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಟಿಕೆಟ್ ಘೋಷಣೆ ಬಾಕಿ‌ ಉಳಿಸಲಾಗಿದೆ.

ಬದಲಾಗದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

ಉತ್ತರಕನ್ನಡ ಜಿಲ್ಲೆಯ ಭಟ್ಕಳ ಹಾಗೂ ಕುಮಟಾ ಮತ್ತು ಶಿರಸಿ ಕ್ಷೇತ್ರದ ಹಳೆ ಅಭ್ಯರ್ಥಿಗಳನ್ನು ಬದಲಿಸಲಾಗುತ್ತದೆ ಎಂದು ಹೇಳಲಾಗಿತ್ತು. ಇದರಿಂದ ಸಾಕಷ್ಟು ಊಹಾಪೋಹ ಸುದ್ದಿಗಳು ಹರಡಿ ಅಭ್ಯರ್ಥಿಗಳು ಕೂಡ ಗೊಂದಲಕ್ಕೊಳಗಾಗುವಂತಾಗಿತ್ತು. ಆದರೆ ಅಂತಿಮವಾಗಿ ಮೊದಲ ಪಟ್ಟಿಯಲ್ಲಿಯೇ ಜಿಲ್ಲೆಯ ಐದು ಕ್ಷೇತ್ರಗಳಿಗೆ ಕಳೆದ ಬಾರಿ ಟಿಕೆಟ್ ನೀಡಿದವರಿಗೆ ಮತ್ತೊಮ್ಮೆ ಘೋಷಣೆ ಮಾಡಿದೆ.

Karnataka Polls 2023 : Uttara Kannada District Assembly Constituencies Party-wise Candidates List

ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾರವಾರ-ಅಂಕೋಲಾ ಕ್ಷೇತ್ರದಿಂದ ಶಾಸಕಿ ರೂಪಾಲಿ ನಾಯ್ಕ, ಯಲ್ಲಾಪುರ-ಮುಂಡಗೋಡ ಕ್ಷೇತ್ರ ಸಚಿವ ಶಿವರಾಮ್ ಹೆಬ್ಬಾರ್, ಕುಮಟಾ-ಹೊನ್ನಾವರ ಕ್ಷೇತ್ರದಿಂದ ಶಾಸಕ ದಿನಕರ ಶೆಟ್ಟಿ, ಭಟ್ಕಳ-ಹೊನ್ನಾವರ ಕ್ಷೇತ್ರದಿಂದ ಶಾಸಕ ಸುನೀಲ್ ನಾಯ್ಕ, ಹಳಿಯಾಳ ಜೊಯಿಡಾದಿಂದ ಮಾಜಿ ಶಾಸಕ ಸುನೀಲ್ ಹೆಗಡೆ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ಬಿಜೆಪಿ ಹೈಕಮಾಂಡ್ ಜಿಲ್ಲೆಯಲ್ಲಿ ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದಿದೆ.

ಕಾದು ನೋಡುವ ತಂತ್ರದಲ್ಲಿ ಜೆಡಿಎಸ್

ಒಂದು ಕಾಲದಲ್ಲಿ ಜೆಡಿಎಸ್ ಭದ್ರ ನೆಲೆಯಾಗಿದ್ದ ಉತ್ತರಕನ್ನಡದಲ್ಲಿ ಇದೀಗ ಅಸ್ತಿತ್ವಕ್ಕಾಗಿ ಹುಡುಕಾಟ ನಡೆಸಬೇಕಾದ ಸ್ಥಿತಿ ಇದೆ. ಅದರಂತೆ ಈ ಬಾರಿ ಮೂರು ಕ್ಷೇತ್ರಗಳಲ್ಲಿ ಗಟ್ಟಿ ಅಭ್ಯರ್ಥಿಗಳನ್ನು ತಿಂಗಳ ಮುಂಚೆಯೇ ಘೋಷಣೆ ಮಾಡಿ ಪ್ರಚಾರ ಆರಂಭಿಸಿದ್ದ ಜೆಡಿಎಸ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಎರೆಡೆರಡು ಬಾರಿ ಆಹ್ವಾನಿಸಿ ಪ್ರಚಾರ ನಡಿಸಿದೆ.

Karnataka Polls 2023 : Uttara Kannada District Assembly Constituencies Party-wise Candidates List

ಸದ್ಯ ಕುಮಟಾ ಹೊನ್ನಾವರದಲ್ಲಿ ಸೂರಜ್ ನಾಯ್ಕ ಸೋನಿ, ಶಿರಸಿ ಸಿದ್ದಾಪುರದಲ್ಲಿ ಉಪೇಂದ್ರ ಪೈ, ಹಳಿಯಾಳ ಜೊಯಿಡಾದಲ್ಲಿ ಎಸ್.ಎಲ್ ಘೋಟ್ನೇಕರ್, ಭಟ್ಕಳ ಹೊನ್ನಾವರದಲ್ಲಿ ನಾಗೇಂದ್ರ ನಾಯ್ಕ ಅವರನ್ನು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಆದರೆ ಕಾರವಾರ ಅಂಕೋಲಾ‌ ಕ್ಷೇತ್ರದಲ್ಲಿ ಈ ಹಿಂದಿನ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಇನ್ನು ಕೂಡ ಯಾವುದೇ ನಿರ್ಧಾರ ಪ್ರಕಟಿಸದ ಹಿನ್ನೆಲೆಯಲ್ಲಿ ಕಾದುನೋಡುವ ತಂತ್ರಕ್ಕೆ ಮುಂದಾಗಿದೆ. ಯಲ್ಲಾಪುರ ಮುಂಡಗೋಡದಲ್ಲಿಯೂ ಯಾವುದೇ ಗಟ್ಟಿ ಅಭ್ಯರ್ಥಿಗಳು ಇಲ್ಲದಿರುವ ಕಾರಣ ಹುಡುಕಾಟ ಮುಂದುವರಿಸಿದೆ.

ಕಾಂಗ್ರೆಸ್ ಬಿಜೆಪಿಗೆ ಒಳ ಏಟಿನ ಭಯ

ಇನ್ನು ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಈ ಹಿಂದಿನ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ. ಆದರೆ ಹೊಸ ಮುಖಗಳಿಗೆ ಮಣೆ ಹಾಕುವ ನಿಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಆಯಾ ಕ್ಷೇತ್ರದಲ್ಲಿ ಒಂದಿಷ್ಟು ಮಂದಿ ಅರ್ಜಿ ಹಾಕಿ 2 ಲಕ್ಷ ಹಣ ಕೂಡ ತುಂಬಿದ್ದರು. ಆದರೆ ಇದೀಗ ಹಳಬರಿಗೆ ಮಣೆ ಹಾಕಿದ್ದು ಕಾರವಾರ, ಮುಂಡಗೋಡ, ಶಿರಸಿ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಬಹಿರಂಗವಾಗಿಯೇ ಬಂಡಾಯವೆದಿದ್ದಾರೆ. ಅಲ್ಲದೆ ಕುಮಟಾದಲ್ಲಿಯೂ ಯಾರಿಗೆ ಟಿಕೆಟ್ ನೀಡಿದರು ಅಭ್ಯರ್ಥಿ ಬಂಡಾಯ ಇಲ್ಲವೇ ಒಳ ಏಟು ಎದುರಿಸುವುದು ನಿಶ್ಚಿತವಾಗಿದೆ.

ಇನ್ನು ಬಿಜೆಪಿಯಲ್ಲಿ ಬಹಿರಂಗ ಬಂಡಾಯ ಇಲ್ಲದೆ ಇದ್ದರೂ ಹಳಿಯಾಳ ಹೊರತುಪಡಿಸಿ ಬಹುತೇಕ ಕಡೆಗಳಲ್ಲಿ ಅಭ್ಯರ್ಥಿಗಳು ಇತರೆ ಆಕಾಂಕ್ಷಿಗಳಿಂದ ಒಳ ಏಟು ಎದುರಿಸಬೇಕಾದ ಸ್ಥಿತಿ ಇದೆ. ಪಕ್ಷದಲ್ಲಿ ಬಹಿರಂಗ ಅಸಮಾಧಾನ ಹೊರ ಹಾಕದೆ ಇದ್ದರು ಕೂಡ ಆಕಾಂಕ್ಷಿತರು ಅಭ್ಯರ್ಥಿ ವಿರುದ್ಧ ಕೆಲಸ ಮಾಡುವ ಸಾಧ್ಯತೆಯೇ ದಟ್ಟವಾಗಿದೆ ಎನ್ನುತ್ತಿವೆ ಪಕ್ಷದ ಮೂಲಗಳು.

ಎಲ್ಲೆಲ್ಲಿ ಎಷ್ಟೆಷ್ಟು ಮತದಾರರರು?

ಜಿಲ್ಲೆಯಲ್ಲಿ ಒಟ್ಟೂ 11,911,99 ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 5,97,902 ಪುರುಷರು, 5,93,290 ಮಹಿಳೆಯರು ಹಾಗೂ ಏಳು ಮತದಾರರು ತೃತೀಯ ಲಿಂಗಿಗಳಾಗಿದ್ದಾರೆ. ಜಿಲ್ಲೆಯ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟೂ 18,0308 ಮತದಾರರಿದ್ದು ಇದರಲ್ಲಿ 90,777 ಪುರಷ ಮತದಾರರು ಹಾಗೂ 89,529 ಮಹಿಳೆ ಹಾಗೂ ಇಬ್ಬರು ತೃತೀಯ ಲಿಂಗಿ ಮತದಾರರಿದ್ದಾರೆ. ಕಾರವಾರ-ಅಂಕೋಲಾ ವಿಧಾನ ಸಭೆ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

1,07,860 ಪುರುಷ ಮತದಾರರಾದರೆ 1,10,780 ಮಹಿಳೆಯರಾಗಿದ್ದಾರೆ. ಕುಮಟಾ ಕ್ಷೇತ್ರದಲ್ಲಿ 94,102 ಪುರುಷ ಹಾಗೂ 94,309 ಮಹಿಳೆಯರಾದರೆ ಮೂವರು ತೃತಿಯ ಲಿಂಗಿಯಾಗಿದ್ದಾರೆ. ಭಟ್ಕಳ ಕ್ಷೇತ್ರದಲ್ಲಿ 1,12,747 ಪುರುಷ ಹಾಗೂ 1,09,408 ಮಹಿಳೆಯರು, ಶಿರಸಿ ಕ್ಷೇತ್ರದಲ್ಲಿ 1.00,457 ಪುರುಷ ಹಾಗೂ 99,474 ಮಹಿಳೆ, ಇಬ್ಬರು ತೃತೀಯ ಲಿಂಗಿಗಳು, ಉಳಿದಂತೆ ಯಲ್ಲಾಪುರ ಕ್ಷೇತ್ರದಲ್ಲಿ 91,959 ಪುರುಷ ಹಾಗೂ 89,790 ಮಹಿಳಾ ಮತದಾರರಿದ್ದಾರೆ. ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಕಾರ್ಯ ಕೂಡ ನಾಮಪತ್ರ ಸಲ್ಕೆಯಾಗುವ ಕೊನೆಯ ದಿನದವರೆಗೂ ಇರುವುದರಿಂದ ಬದಲಾವಣೆ ಆಗಲಿದೆ.

ಚುನಾವಣೆಗೆ ಅಂತಿಮ ಸಿದ್ಧತೆ

ವಿಧಾನಸಭೆ ಚುನಾವಣೆಗೆ ಕೆಲವೇ ದಿನ ಬಾಕಿ ಇದ್ದು ಈಗಾಗಲೆ ಸಿದ್ಧತೆಗಳು ಆರಂಭಗೊಂಡಿದೆ. ಚುನಾವಣಾ ಆಯೋಗದ ಸೂಚನೆ ಮೇರೆಗೆ ಅಧಿಕಾರಿಗಳು ಮತಗಟ್ಟೆ ಸಿದ್ಧಪಡಿಸುವಿಕೆ, ಸಿಬ್ಬಂದಿ ನೇಮಕಾತಿ, ಮುಂತಾದ ವಿಷಯಗಳ ಕುರಿತು ನಿರಂತರ ಸಭೆ ನಡೆಸತೊಡಗಿದ್ದಾರೆ.‌ ಮುಂಬರುವ ವಿಧಾನಸಭೆ ಚುನಾವಣೆ ಸಲುವಾಗಿ ಜಿಲ್ಲೆಗೆ 2,693 ಕಂಟ್ರೋಲ್ ಯುನಿಟ್, 1,891 ಬ್ಯಾಲೆಟ್ ಯುನಿಟ್, 2,043 ವಿವಿಪ್ಯಾಟ್‌ಗಳು ಹಂಚಿಕೆಯಾಗಿವೆ. ಹೈದರಾಬಾದ್ ಮೂಲದ ತಂತ್ರಜ್ಞರು ಜಿಲ್ಲೆಯಲ್ಲಿನ ಮತದಾನ ಯಂತ್ರಗಳ ಪರಿಶೀಲನೆ ನಡೆಸಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+