ಕಾರವಾರದಲ್ಲಿ ಅಕ್ರಮ ಸ್ಯಾನಿಟರಿ ಪ್ಯಾಡ್ ಮತ್ತು ಗೋವಾ ಮದ್ಯ ವಶ

ಕಾರವಾರ, ಏಪ್ರಿಲ್ 28: ಅಕ್ರಮವಾಗಿ ವ್ಹಿಸ್ಪರ್ ಕಂಪನಿಯ ಸ್ಯಾನಿಟರಿ ಪ್ಯಾಡ್ ಹಾಗೂ ಗೋವಾ ರಾಜ್ಯದ ಮದ್ಯವನ್ನು ಸಾಗಾಟ ಮಾಡುತ್ತಿದ್ದ ಕಂಟೇನರ್ ಲಾರಿ ಹಾಗೂ ಚಾಲಕನನ್ನು ಅಬಕಾರಿ ಅಧಿಕಾರಿಗಳು ಜೋಯಿಡಾದಲ್ಲಿ ವಶಕ್ಕೆ ಪಡೆದಿದ್ದಾರೆ.

Recommended Video

      ಕೊರೊನದಿಂದ ಗುಣಮುಖರಾಗಿ ಹಿಂತಿರುಗಿದ ಪೊಲೀಸ್‌ಗೆ ಸಿಕ್ತು ಭರ್ಜರಿ ಸ್ವಾಗತ | Oneindia Kannada

      ಗೋವಾದಿಂದ ಬೆಳಗಾವಿ ಮಾರ್ಗವಾಗಿ ಬಂದ ಕಂಟೇನರ್ ಲಾರಿಯನ್ನು ಅನಮೋಡ್ ಚೆಕ್ ಪೋಸ್ಟ್ ಬಳಿ ಅಬಕಾರಿ ಸಿಬ್ಬಂದಿ ತಡೆದು ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತಮಿಳುನಾಡು ನೋಂದಣಿ ಸಂಖ್ಯೆಯ ಈ ಕಂಟೇನರ್ ಲಾರಿಯಲ್ಲಿ ವ್ಹಿಸ್ಪರ್ ಕಂಪೆನಿಯ ಸ್ಯಾನಿಟರಿ ಪ್ಯಾಡ್ ಗಳ ಬಾಕ್ಸ್ ಗಳು ಕಂಡು ಬಂದಿದ್ದವು. ಇವುಗಳ ನಡುವೆಯೇ 43 ಸಾವಿರ ಮೌಲ್ಯದ ಗೋವಾ ಮದ್ಯ ಪತ್ತೆಯಾಗಿದೆ.

      ಇದರಿಂದಾಗಿ ಅನುಮಾನಗೊಂಡ ಸಿಬ್ಬಂದಿ, ಸ್ಯಾನಿಟರಿ ಪ್ಯಾಡ್ ಗಳ ಬಿಲ್ ಗಳನ್ನು ಕೇಳಿದಾಗ ಇದಕ್ಕೂ ಯಾವುದೇ ದಾಖಲೆಗಳನ್ನು ಚಾಲಕ ಸಲ್ಲಿಸುವಲ್ಲಿ ವಿಫಲನಾಗಿದ್ದಾನೆ. ಹೀಗಾಗಿ ಚಾಲಕ, ತಮಿಳುನಾಡಿನ ಕೊಯಮತ್ತೂರು ಮೂಲದ ಸುಂದರರಾಜ್ ರಾಮಸ್ವಾಮಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಲಾರಿಯಲ್ಲಿದ್ದ ಸ್ಯಾನಿಟರಿ ಪ್ಯಾಡ್ ಗಳ ಮೌಲ್ಯ 11.50 ಲಕ್ಷವಾಗಿದ್ದು, ಜಪ್ತಿಯಾದ ಲಾರಿಯ ಅಂದಾಜು ಮೌಲ್ಯ 18 ಲಕ್ಷವಾಗಿದೆ.

      Illegal Sanitary Pad And Goa Liquor Seized In Zoida

      ಅಬಕಾರಿ ಸಬ್ ಇನ್ಸ್ ಪೆಕ್ಟರ್ ರೇಷ್ಮಾ ಬಾನಾವಳಿಕರ್, ರಕ್ಷಕರಾದ ಎಂ.ಕೆ ಮೊಗೇರ, ಸದಾಶಿವ ರಾಠೋಡ, ಟಿ.ಬಿ ಗೊಂಡ, ಉಳ್ಳಪ್ಪ ತಳಸೆ, ದೀಪಕ್ ಬಾರಾಮತಿ ತಪಾಸಣೆ ವೇಳೆ ಇದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+