• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ಕೂಬಾ ಡೈವ್ ಮಾಡಿ ಕಡಲಾಳದಲ್ಲಿ ಸಲ್ಯೂಟ್ ಮಾಡಿದ ಐಜಿಪಿ ರೂಪಾ ಮೌದ್ಗಿಲ್

|

ಕಾರವಾರ, ಡಿಸೆಂಬರ್ 19: ತಮ್ಮ ಇಲಾಖೆಯ ಕೆಲಸ ಕಾರ್ಯಗಳಲ್ಲಿ ಸದಾ ಬ್ಯುಸಿಯಾಗಿರುವ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಬುಧವಾರ (ಡಿ.18) ಭಟ್ಕಳ ತಾಲೂಕಿನ ನೇತ್ರಾಣಿ ಗುಡ್ಡದ ಬಳಿ ಅರಬ್ಬೀ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ನಡೆಸಿ ಸಮುದ್ರದಾಳದ ವಿಸ್ಮಯವನ್ನು ಕಣ್ತುಂಬಿಕೊಂಡರು.

ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾದ ಕರ್ನಾಟಕದ ಮೊದಲ ಮಹಿಳೆ ಎಂಬ ಖ್ಯಾತಿ ಹೊಂದಿರುವ ರೂಪಾ ಮೌದ್ಗಿಲ್ ಅವರು ರೈಲ್ವೇ ಇಲಾಖೆಯಲ್ಲಿ ಕರ್ನಾಟಕದ ಐಜಿಪಿ ಆಗಿದ್ದು, ದಕ್ಷ ಅಧಿಕಾರಿಯೆಂದೇ ಗುರುತಿಸಿಕೊಂಡವರು. ಸದಾ ತಮ್ಮ ಪೊಲೀಸ್ ವೃತ್ತಿಯ ನಡುವೆ ಬ್ಯುಸಿಯಾಗಿರುತ್ತಿದ್ದ ಅವರು ಬುಧವಾರ ತಮ್ಮ ಕುಟುಂಬದೊಂದಿಗೆ ಮುರುಡೇಶ್ವರದ ಸಾಗರದಾಳಕ್ಕೆ ಧುಮುಕುವ ಸಾಹಸಕ್ಕೆ ಕೈ ಹಾಕಿದ್ದರು.

ಮೀಟೂ ಕತೆಗಳ ಬಗ್ಗೆ ದಿಟ್ಟ ಪೊಲೀಸ್ ಅಧಿಕಾರಿ ರೂಪಾ ಮೌದ್ಗಿಲ್ ಪ್ರತಿಕ್ರಿಯೆ

ತಮ್ಮ ಮಗ ಹಾಗೂ ಮಗಳೊಂದಿಗೆ ಬಂದ ಅವರು ಇಲ್ಲಿನ ಸ್ಕೂಬಾ ಡೈವಿಂಗ್ ಸಂಸ್ಥೆ ನೇತ್ರಾಣಿ ಅಡ್ವೆಂಚರ್ಸ್ ನ ನುರಿತ ತರಬೇತುದಾರರಿಂದ ಸ್ಕೂಬಾ ಡೈವಿಂಗ್ ಮಾಡಿ ಸಮುದ್ರಾಳದ ಸೊಬಗನ್ನು ಕಂಡರು. ತರಬೇತುದಾರ ಗಣೇಶ ಹರಿಕಂತ್ರ ಅವರು ಡಿ. ರೂಪಾ ಅವರಿಗೆ ಸ್ಕೂಬಾ ಡೈವಿಂಗ್ ತರಬೇತಿ ನೀಡಿ ಸಹಕರಿಸಿದರು.

ಪೊಲೀಸ್ ವೃತ್ತಿ ಪುರುಷ ಪ್ರಧಾನ: ರೂಪಾ ಮೌದ್ಗಿಲ್

ಬೆಳಿಗ್ಗೆಯೇ ನೇತ್ರಾಣಿ ದ್ವೀಪದ ಬಳಿ ತೆರಳಿದ್ದ ಇವರ ತಂಡ ತರಬೇತಿ ಬಳಿಕ ಸ್ಕೂಬಾ ಡೈವಿಂಗ್ ನಡೆಸಿ ಮಧ್ಯಾಹ್ನದ ಹೊತ್ತಿಗೆ ವಾಪಸ್ಸಾದರು. ಸ್ಕೂಬಾ ಡೈವಿಂಗ್ ಬಳಿಕ ರೂಪಾ ಅವರು ತರಬೇತುದಾರರ ಕಾರ್ಯವನ್ನೂ ಪ್ರಶಂಸಿಸಿದರು. ಪ್ರವಾಸಿಗರಿಗೆ ಇದೇ ರೀತಿ ಉತ್ತಮ ಸೇವೆ ನೀಡಿ ಎಂದು ಪ್ರೋತ್ಸಾಹಿಸಿದರು.

English summary
D. Rupa Maudgil, an IPS officer who is always busy with his department works, went scuba diving in the Arabian Sea on Wednesday (Dec. 18) near Bhatkal Taluk,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X