ಎಸಿಬಿ ಬಲೆಗೆ ಹಳಿಯಾಳ ನೀರಾವರಿ ಇಲಾಖೆಯ ಲ್ಯಾಬ್ ಅಸಿಸ್ಟೆಂಟ್ ಹುಲಿ
ಹಳಿಯಾಳ (ಉತ್ತರ ಕನ್ನಡ), ಜನವರಿ 1: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಸಣ್ಣ ನೀರಾವರಿ ಇಲಾಖೆಯ ಲ್ಯಾಬ್ ಅಸಿಸ್ಟೆಂಟ್ ಭ್ರಷ್ಟಚಾರ ನಿಗ್ರಹ ದಳದ ಅಧಿಕಾರಿಗಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಹಳಿಯಾಳದ ಸಣ್ಣ ನೀರಾವರಿ ಇಲಾಖೆಯ ಲ್ಯಾಬ್ ಅಸಿಸ್ಟೆಂಟ್ ಆಗಿರುವ ಮಹಾರುದ್ರ ಹುಲಿ ಎನ್ನುವರು ಗುತ್ತಿಗೆದಾರ ಗುತ್ತಿಗೆದಾರ ಮಾಧವ ನಾಯಕ್ ಎನ್ನುವರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕರು.

ಪ್ರಭಾರಿ ಸಹಾಯಕ ಇಂಜಿನಿಯರ್ ವಿಶ್ವನಾಥ್ ಎಚ್ ಪೋನ್ ಮೂಲಕ ಲಂಚ ನೀಡುವಂತೆ ಹೇಳಿದ್ದರು. ಅದರಂತೆ ಮಹಾರುದ್ರ ಹುಲಿ 30 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಡಿವೈಎಸ್ ಪಿ ಗಿರೀಶ್, ಇನ್ಸ್ ಪೆಕ್ಟರ್ ಮುಲ್ಲಾ, ರಮೇಶ ನೇತೃತ್ವದ ತಂಡ ದಾಳಿ ನಡೆಸಿದೆ.












Click it and Unblock the Notifications