ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ವರ್ಷಾಚರಣೆ: ಕಾರವಾರ, ಗೋವಾದಲ್ಲಿ ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದ ಯುವಕ, ಯುವತಿಯರು

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜನವರಿ, 01: ಎಲ್ಲೆಡೆ ಹೊಸವರ್ಷದ ಸಂಭ್ರಮ ಮುಗಿಲುಮುಟ್ಟಿದೆ. ಕಡಲ ನಗರಿ ಕಾರವಾರದಲ್ಲಿಯೂ ಶನಿವಾರ ಬೆಳಿಗ್ಗೆಯಿಂದ ರಾತ್ರಿವರೆಗೂ ಹೊಸ ವರ್ಷದ ಕಳೆ ಕಟ್ಟಿತ್ತು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಪ್ರವಾಸಿಗರು ಕಡಲತೀರದಲ್ಲಿ ಕುಣಿದು ಕುಪ್ಪಳಿಸುವುದರ ಮೂಲಕ ಸಂಭ್ರಮದಿಂದ ಹೊಸ ವರ್ಷವನ್ನು ಭರಮಾಡಿಕೊಂಡರು.

ನಗರದ ರವೀಂದ್ರನಾಥ ಟ್ಯಾಗೋರ್‌ ಕಡಲತೀರ, ಕಾಳಿ ರಿವರ್ ಗಾರ್ಡನ್, ದೇವಭಾಗ ಜಂಗಲ್ ರೆಸಾರ್ಟ್, ಚರ್ಚ್‌ಗಳಲ್ಲಿ ಪ್ರವಾಸಿಗರು ಶನಿವಾರ ಬೆಳಗ್ಗೆಯಿಂದಲೇ ತುಂಬಿದ್ದರು. ಇನ್ನು ರಾಜ್ಯದ ನಾನಾ ಭಾಗಗಳಿಂದ ಆಗಮಿಸಿ ಗೋವಾ ಪ್ರವಾಸ ಕೈಗೊಂಡಿದ್ದ ಪ್ರವಾಸಿಗರು ಅಲ್ಲಿ ಹೋಟೆಲ್ ಹಾಗೂ ರೆಸಾರ್ಟ್‌ಗಳಲ್ಲಿ ವಸತಿ ವ್ಯವಸ್ಥೆ ಸಿಗದೇ ತಮ್ಮ ಊರುಗಳತ್ತ ಮುಖ ಮಾಡಿದ್ದರು. ನಗರದ ಹೋಟೆಲ್‌ಗಳಿಗೂ ಬೇಡಿಕೆ ಹೆಚ್ಚಿದ್ದು, ಬಹುತೇಕ ಹೋಟೆಲ್‌ಗಳ ಕೊಠಡಿಗಳು ಭರ್ತಿಯಾಗಿದ್ದವು. ಹೊಸ ವರ್ಷಾಚರಣೆಗೆಂದೇ ಪ್ರವಾಸಿಗರು ಸ್ನೇಹಿತರ ಸಹಕಾರದಲ್ಲಿ ತಿಂಗಳ ಮುಂಚೆಯೇ ಮುಂಗಡವಾಗಿ ಕೊಠಡಿಗಳನ್ನು ಕಾದಿರಿಸಿದ್ದು, ಕೊನೆ ಹಂತದಲ್ಲಿ ಪ್ರವಾಸ ಕೈಗೊಂಡವರು ವಸತಿಗಾಗಿ ಪರದಾಡುತ್ತಿರುವುದು ಕಂಡುಬಂದಿತು.

ಕಾರವಾರದಲ್ಲಿ ಹೊಸ ವರ್ಷ ಆಚರಣೆಗೆ ಪ್ರವಾಸಿ ತಾಣಗಳು, ಇಲ್ಲಿದೆ ವಿವರಕಾರವಾರದಲ್ಲಿ ಹೊಸ ವರ್ಷ ಆಚರಣೆಗೆ ಪ್ರವಾಸಿ ತಾಣಗಳು, ಇಲ್ಲಿದೆ ವಿವರ

ಸಂಜೆಯಾಗುತ್ತಿದ್ದಂತೆಯೇ ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರ ಕಳೆಗಟ್ಟಿತ್ತು. ಸ್ಥಳೀಯರಲ್ಲದೇ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ತೀರದಲ್ಲಿ ಜಮಾಯಿಸಿದ್ದರು. ಅಲ್ಲದೆ ವರ್ಷದ ಕೊನೆಯ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ಜನರು ಮುಗಿಬಿದ್ದಿದ್ದರು. ಕೆಂಪು ಸೂರ್ಯನ ಸೊಬಗನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಮೂಲಕ ಸಂಭ್ರಮಿಸಿದರು.

 ಸಂಭ್ರಮಾಚರಣೆಯಲ್ಲಿ ಮಿಂದೆದ್ದ ಪ್ರವಾಸಿಗರು

ಸಂಭ್ರಮಾಚರಣೆಯಲ್ಲಿ ಮಿಂದೆದ್ದ ಪ್ರವಾಸಿಗರು

ಶನಿವಾರ ಪ್ರವಾಸಿಗರು ಸೇರಿದಂತೆ ಸ್ಥಳೀಯರು ಸ್ನೇಹಿತರೊಂದಿಗೆ ಬೆಳಗ್ಗೆಯಿಂದಲೇ ಹೊಸ ವರ್ಷದ ಸಂಭ್ರಮಾಚರಣೆಗೆ ಸಕಲ ಸಿದ್ದತೆ ಮಾಡಿಕೊಂಡಿದ್ದರು. ಸಂಜೆಯಾಗುತ್ತಿದ್ದಂತೆ ಕಡಲತೀರದಲ್ಲಿ ಸೇರಿದ ಜನರು ಎಲ್ಲೆಡೆ ಪಟಾಕಿ ಸಿಡಿಸುತ್ತಿರುವುದು ಕಂಡುಬಂದಿತು. ಅಲ್ಲದೆ ಕೆಲವು ಭಾಗಗಳಲ್ಲಿ ಮಕ್ಕಳಿಗಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ, ಕೇಕ್ ಕತ್ತರಿಸಲು ಅಣಿಯಾಗಿದ್ದರು. ಹಾಗೆಯೇ ಸಂಜೆ ಹೊತ್ತಿಗೆ ನಗರದ ಹೋಟೆಲ್ ಹಾಗೂ ರೆಸಾರ್ಟ್‌ಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದವು. ನಗರದ ವಿವಿಧ ಇಲಾಖೆಯ ಪ್ರವಾಸಿ ಮಂದಿರಗಳು ಕೂಡ ಭರ್ತಿಯಾಗಿದ್ದವು.

 ನಿಗದಿತ ಅವದಿಯೊಳಗೆ ಸಂಭ್ರಮಾಚರಣೆ

ನಿಗದಿತ ಅವದಿಯೊಳಗೆ ಸಂಭ್ರಮಾಚರಣೆ

ಇನ್ನು ಕೆಲವು ಕಡೆಗಳಲ್ಲಿ ಯುವಕ, ಯುವತಿಯರ ಗುಂಪು ತಮಗೆ ಸೂಕ್ತವೆನಿಸಿದ ಸ್ಥಳಗಳಲ್ಲಿ ಸರಳವಾಗಿ ಪಾರ್ಟಿಗಳನ್ನು ನಡೆಸಿದರೆ, ಇನ್ನು ಕೆಲವರು ತಮ್ಮ ಮನೆಯ ಓಣಿಗಳಲ್ಲಿ ಡಿಜೆ ಹಾಕಿ ಕುಣಿದು ಕುಪ್ಪಳಿಸಿದರು. ಸ್ನೇಹಿತರು, ಕುಟುಂಬದವರ ಜೊತೆ ಸೇರಿ ಸಂಭ್ರಮಿಸಿದರು. ಇನ್ನು ಕೋವಿಡ್ ಅಬ್ಬರ ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಯನ್ನು ಒಂದು ಗಂಟೆಯವರೆಗೆ ಮಾತ್ರ ಆಚರಿಸಲು ಅವಕಾಶವನ್ನು ಕಲ್ಪಿಸಲಾಗಿತ್ತು. ಪೊಲೀಸರು ಕೂಡ ನಗರದ ವಿವಿಧೆಡೆ ಬಂದೋಬಸ್ತ್ ಕೈಗೊಂಡಿದ್ದರು. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಡಳಿತವೂ ಕೂಡ ಎಚ್ಚರಿಸಿತ್ತು. ಆದ್ದರಿಂದ 1 ಗಂಟೆಯಾಗುತ್ತಿದ್ದಂತೆ ಬೀಚ್‌ನಲ್ಲಿದ್ದ ಪ್ರವಾಸಿಗರನ್ನು ಪೊಲೀಸರು ಮನೆಗೆ ಕಳುಹಿಸಲು ಹರಸಾಹಸವೇ ಪಡಬೇಕಾಯಿತು.

 ಕಡಲ ತೀರದಲ್ಲಿ ಪ್ರವಾಸಿಗರದ್ದೇ ದರ್ಬಾರ್‌

ಕಡಲ ತೀರದಲ್ಲಿ ಪ್ರವಾಸಿಗರದ್ದೇ ದರ್ಬಾರ್‌

ಇನ್ನು ನೆರೆಯ ಗೋವಾದಲ್ಲಿ ಹೊಸ ವರ್ಷವನ್ನು ಅದ್ದೂರಿಯಾಗಿ ಹಾಡಿ, ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮದಿಂದ ಭರಮಾಡಿಕೊಳ್ಳಲಾಯಿತು. ಗೋವಾದ ಕಾಣಕೋಣ, ಪೊಳೇಮ್, ಭಾಘಾ ಕಡಲತೀರದಲ್ಲಿ ದೇಶ, ವಿದೇಶಿ ಪ್ರವಾಸಿಗರ ದಂಡೇ ನೆರೆದಿತ್ತು. ಆದ್ದರಿಂದ ಬೀಚ್ ಬಹುತೇಕ ಪ್ರವಾಸಿಗರಿಂದಲೇ ತುಂಬಿಕೊಂಡಿತ್ತು.

 ತುಂಬಿ ತುಳುಕುತ್ತಿದ್ದ ಹೋಟೆಲ್‌, ರೆಸಾರ್ಟ್‌ಗಳು

ತುಂಬಿ ತುಳುಕುತ್ತಿದ್ದ ಹೋಟೆಲ್‌, ರೆಸಾರ್ಟ್‌ಗಳು

ಬೆಳಗ್ಗೆಯಿಂದಲೇ ನೆರೆದಿದ್ದ ಜನರು ನೂತನ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಸಿದ್ದತೆ ನಡೆಸಿದ್ದರು. ಅದರಂತೆಯೇ 12 ಗಂಟೆ ಆಗುತ್ತಿದ್ದಂತೆಯೇ ಸಿಡಿಮದ್ದು ಸಿಡಿಸಿ ಡಿಜೆ ಹಾಡಿಗೆ ಕುಣಿಯುತ್ತಾ ಹೊಸ ವರ್ಷವನ್ನಯ ಬರಮಾಡಿಕೊಂಡರು. ಹೊಸ ವರ್ಷಾಚರಣೆಗೆ ಇಲ್ಲಿನ ಬಹುತೇಕ ಕಡಲತೀರದ ಹೋಟೆಲ್‌ಗಳು ವ್ಯವಸ್ಥೆ ಮಾಡಿದ್ದವು. ಹೀಗೆ ಗೋವಾದಲ್ಲಿ ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿದಂತೆ ವಿದೇಶಿಗರೂ ಆಗಮಿಸಿ ಸಂಭ್ರಮಾಚರಣೆಯಲ್ಲಿ ಮಿಂದೆದ್ದಿದ್ದರು.

English summary
Grand New Year celebration by tourists in Karwar, goa, Here see full information, tourists New year celebration in Karwar, goa know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X