ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ದಾರುಣ ಸಾವು

ಕಾರವಾರ, ಡಿಸೆಂಬರ್ 18: ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬೊಮ್ನಳ್ಳಿ ಗ್ರಾಮ ವ್ಯಾಪ್ತಿಯ ಕಾಳಿನದಿಯಲ್ಲಿ ನಡೆದಿದೆ.

ಗ್ರಾಮದ ದೂಳು ದುಂಡು ಗಾವಡೆ (42), ಗಾಯತ್ರಿ ದೂಳು ಗಾವಡೆ (9), ಕೃಷ್ಣಾ ದೂಳು ಗಾವಡೆ (6) ಮತ್ತು ಅವರ ಕುಟುಂಬದ ಸತೀಶ ಬೀರು ಗಾವಡೆ (7) ಮೃತರು.

ದೂಳು ದುಂಡು ಗಾವಡೆ ಅವರ ಪತ್ನಿ ರಾಮಿಬಾಯಿ ಸೋಮವಾರ ಸಂಜೆ (ಡಿಸೆಂಬರ್ 17) ಕಾಳಿ ನದಿಯ ದಂಡೆಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದರು. ಅವರ ಜತೆಗೆ ಬಂದಿದ್ದ ಮೂವರು ಮಕ್ಕಳು ಆಟವಾಡುತ್ತ ಕಾಲುಜಾರಿ ನದಿಗೆ ಬಿದ್ದಾಗ ಅವರನ್ನು ರಕ್ಷಿಸಲು ರಾಮಿಬಾಯಿ ನೀರಿಗೆ ಹಾರಿದರು.

Four people drowned at kali river

ಸಮೀಪದಲ್ಲಿದ್ದ ದೂಳು ದುಂಡು ಗಾವಡೆ ಕೂಡ ನೀರಿನಲ್ಲಿ ಮುಳುಗುತ್ತಿದ್ದವರನ್ನು ಮೇಲೆತ್ತಲು ನದಿಗೆ ಹಾರಿದರು. ರಾಮಿಬಾಯಿಯನ್ನು ರಕ್ಷಿಸಿದ ಅವರು ಕೊಚ್ಚಿಕೊಂಡು ಹೋಗಿದ್ದಾರೆ. ರಾಮಿಬಾಯಿಯನ್ನು ಹುಬ್ಬಳ್ಳಿ ಆಸ್ಪತ್ರೆಗೆ ಕಳುಹಿಸಲಾಗಿದೆ. ನದಿಯಲ್ಲಿ ಮುಳುಗಿದ್ದ ನಾಲ್ಕೂ ಶವವನ್ನ ಹೊರತೆಗೆಯಲಾಗಿದೆ.

ಆರ್.ವಿ.ಡಿ ಭೇಟಿ ಮೃತರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬೆಳಗಾವಿಯ ವಿಧಾನಮಂಡಲದ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಅವರು, ಮಂಗಳವಾರ ಹಳಿಯಾಳಕ್ಕೆ ಬಂದು ಕುಟುಂಬಸ್ಥರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+