Karwar: ಕಾರವಾರದ ಕದಂಬ ನೌಕಾನೆಲೆಯಲ್ಲಿ ಟಗ್ ಬೋಟ್ ಇಂಜಿನ್‌ನಲ್ಲಿ ಬೆಂಕಿ ಅವಘಡ
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಯ ಡಾಕ್‌ಯಾರ್ಡ್‌ನಲ್ಲಿ ಟಗ್ ಬೋಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಗುರುವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದ್ದು, ದೊಡ್ಡ ಗಾತ್ರದ ದೋಣಿಗಳನ್ನು ನೌಕಾನೆಲೆಗೆ ತರಲು ಬಳಸುತ್ತಿದ್ದ ತೇಜ್ ಹೆಸರಿನ ಟಗ್‌ಬೋಟ್‌ನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಯುದ್ಧದ ಹಡಗನ್ನು ದುರಸ್ತಿ ಮಾಡಲು ದಡಕ್ಕೆ ಎಳೆದು ತರಲು ಹೋಗಿದ್ದ ಸಂದರ್ಭದಲ್ಲಿ ಟಗ್‌ಬೋಟ್‌ನ ಇಂಜಿನ್‌ನಲ್ಲಿ ಸಮಸ್ಯೆ ಉಂಟಾಗಿದೆ. ಕೆಲ ಹೊತ್ತಿನಲ್ಲೇ ಇಂಜಿನ್‌ಗೆ ಬೆಂಕಿ ತಗುಲಿದ್ದು, ಬೋಟ್‍ನ ಇಂಜಿನ್ ಸಂಪೂರ್ಣ ಸುಟ್ಟು ಹೋಗಿದೆ. ಏಕಾಏಕಿ ಘಟನೆ ನಡೆದ ಪರಿಣಾಮ ನೌಕಾ ನೆಲೆಯ ಡಾಕ್ ಯಾರ್ಡ್‍ನಲ್ಲಿ ಬಾರೀ ಹೊಗೆ ಆವರಿಸಿಕೊಂಡು ಕೆಲ ಕಾಲ ಜನರಲ್ಲಿ ಆತಂಕ ಮೂಡಿಸಿತ್ತು.

ಡೀಸೆಲ್ ಟ್ಯಾಂಕ್ ಮತ್ತು ಇತರ ಪ್ರದೇಶಗಳಿಗೆ ಬೆಂಕಿ ವೇಗವಾಗಿ ಹರಡಿತು. ಬೆಂಕಿಯ ತೀವ್ರತೆಯನ್ನು ಗಮನಿಸಿದ ನೌಕಾಪಡೆಯು ಕಾರವಾರದಿಂದ ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಸಿಕೊಂಡಿದೆ. ಅಗ್ನಿಶಾಮಕ ದಳ ನೌಕಾ ನೌಕಾನೆಲೆಗೆ ಧಾವಿಸಿ ಬೆಂಕಿಯನ್ನು ನಂದಿಸಲು ಗಂಟೆಗಳ ಕಾಲ ಹರಸಾಹಸಪಟ್ಟರು.
The fire mishap which burnt down a #TagBoat in INS #KadambaNavalBase in #UttaraKannada on Friday damaging crores of rupees worth machineries. pic.twitter.com/VoRjCD8fNO
— Subhash Chandra NS (@ns_subhash) August 10, 2023
ನಂತರ ಅಗ್ನಿಶಾಮಕ ಸಿಬ್ಬಂದಿ ಮತ್ತು ನೌಕಾದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಯಾರೊಬ್ಬರು ಗಾಯಗೊಂಡಿಲ್ಲ, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
ಆದರೆ ಈ ದುರ್ಘಟನೆಯಿಂದ ನೌಕಾಪಡೆಗೆ ಕೋಟ್ಯಂತರ ರೂಪಾಯಿ ಹಾನಿಯಾಗಿದೆ. ಇದೇ ಮೊದಲ ಬಾರಿಗೆ ಕಾರವಾರದ ಅಗ್ನಿಶಾಮಕ ದಳದವರು ಬೆಂಕಿ ಹರಡದಂತೆ ನೌಕಾಪಡೆಗೆ ನೆರವು ನೀಡಿದ್ದಾರೆ. ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಈ ಘಟನೆ ನಡೆದಿದೆ.












Click it and Unblock the Notifications