• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್ ಆಗಿದ್ದ ಕ್ಲಾಸ್ ರೂಂನಿಂದ ಬರುತ್ತಿತ್ತು ಶಬ್ದ; ಅಸಲಿ ನಡೆದಿದ್ದಾದರೂ ಏನು?

|
Google Oneindia Kannada News

ಕಾರವಾರ, ಡಿಸೆಂಬರ್ 02: ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿದ್ದರೂ ಒಳಗಿನಿಂದ ಬಾಗಿಲು ಬಡಿದ ಶಬ್ದ ಕೇಳಿಸುತ್ತಿತ್ತು. ಅದನ್ನು ಕಂಡ ಅಲ್ಲಿನ ಜನರು ಕೋಣೆಯೊಳಗೆ ಯಾರೋ ಬಂಧಿಯಾಗಿದ್ದಾರೆಂದು ಗಾಬರಿಗೊಂಡು ಪೊಲೀಸರನ್ನು ಕರೆಸಿದರು. ಆದರೆ ಅಲ್ಲಿ ಆಗಿದ್ದೇ ಬೇರೆ. ಹಾಗಿದ್ದರೆ ನಿಜಕ್ಕೂ ಅಲ್ಲಿ‌ ನಡೆದಿದ್ದೇನು? ನೋಡೋಣ ಬನ್ನಿ...

ಕಾರವಾರ ನಗರದ ಬಾಡ ಶಿವಾಜಿ ಪ್ರೌಢಶಾಲೆಯಲ್ಲಿ ಹೀಗೊಂದು ಸಂಗತಿ ನಡೆದಿದೆ. ಶಾಲೆಯ ತರಗತಿಗೆ ಹೊರಗಿನಿಂದ ಚಿಲಕ ಹಾಕಲಾಗಿತ್ತು. ಆದರೆ ಯಾರೋ ಒಳಗಿನಿಂದ ಶಬ್ದ ಮಾಡುತ್ತ, ಹೊರ ಬರಬೇಕೆಂಬ ಸೂಚನೆ ನೀಡುತ್ತಿದ್ದರು. ಈ ಶಬ್ದ ಎಷ್ಟೋ ಹೊತ್ತಿನವರೆಗೂ ಕೇಳಿಸುತ್ತಿದ್ದರಿಂದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದರು.

Fact Check: ಹೈದರಾಬಾದಿನಲ್ಲಿ ರಸ್ತೆ ದಾಟಿದ ಟ್ರಾಫಿಕ್ ಸಿಗ್ನಲ್?Fact Check: ಹೈದರಾಬಾದಿನಲ್ಲಿ ರಸ್ತೆ ದಾಟಿದ ಟ್ರಾಫಿಕ್ ಸಿಗ್ನಲ್?

ಸ್ಥಳಕ್ಕೆ ಬಂದವರು, ಯಾರೋ ಯುವತಿ ಒಳಗೆ ಬಂಧಿಯಾಗಿದ್ದಾಳೆಂದು ಯಾರು ನೀನು, ನಿನ್ನ ಹೆಸರೇನು... ಮಾತಾಡು ಹುಡುಗಿ ಎಂದೆಲ್ಲ ಪ್ರಶ್ನಿಸಿದ್ದಾರೆ. ಆದರೆ ಆ ಕಡೆಯಿಂದ ಒಂದೂ ಉತ್ತರವಿಲ್ಲ. ಆತಂಕ ಇನ್ನಷ್ಟು ಹೆಚ್ಚಾಯಿತು. ಪೊಲೀಸರನ್ನೂ ಸ್ಥಳಕ್ಕೆ ಕರೆಯಿಸಿದ್ದಾರೆ. ಎಷ್ಟೇ ಪ್ರಶ್ನೆಗಳನ್ನಿಟ್ಟರೂ ಒಳಗಿನಿಂದ ಯಾರೂ ಮಾತನಾಡುತ್ತಿಲ್ಲ. ಶಬ್ದ ಮಾತ್ರ ಕೇಳಿಸುತ್ತಲೇ ಇತ್ತು. ಕೊನೆಗೆ ಶಾಲೆಯಿಂದ ಚಾವಿ ಪಡೆದು ಬಾಗಿಲು ತೆರೆದಾಗ ಅಚ್ಚರಿ ಜೊತೆಗೆ ತಮಾಷೆಯ ಸಂಗತಿ ನಡೆದಿದೆ.

ಕೋಣೆಯೊಳಗೆ ಬಂಧಿಯಾಗಿದ್ದು ಯುವತಿಯಲ್ಲ, ಬೀದಿ ನಾಯಿ ಎಂಬುದು ಗೊತ್ತಾಗಿದೆ. ಬಾಗಿಲು ತೆರೆಯುತ್ತಿದ್ದಂತೆ ಬಾಲ ಅಲ್ಲಾಡಿಸಿಕೊಂಡು ನಾಯಿ ಹೊರ ಬರುತ್ತಿದ್ದಂತೆ, ಭಯದಲ್ಲಿದ್ದ ಸ್ಥಳೀಯರು ಮುಸುಮುಸು ನಕ್ಕಿದ್ದಾರೆ. ಸ್ಥಳೀಯರಲ್ಲಿ ಆತಂಕ ತಂದಿದ್ದ ಈ ಘಟನೆಯ ಒಂದು ಭಾಗದ ವಿಡಿಯೋವಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಇನ್ನಷ್ಟು ಆತಂಕ ಕೂಡ ಕಾರವಾರ ತಾಲೂಕಿನಾದ್ಯಂತ ಸೃಷ್ಟಿಯಾಗಿತ್ತು.

Recommended Video

   DJ Halli ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ಕಾರ್ಪೋರೇಟರ್ ಜಾಕೀರ್ ಬಂಧನ | Oneindia Kannada

   ಕೊನೆಗೆ ಎರಡನೇ ಭಾಗವೂ ಹರಿದಾಡಿ ತಮಾಷೆಯ ಸಂಭಾಷಣೆಗೂ ಘಟನೆ ಕಾರಣವಾಯಿತು.

   English summary
   A sound from karwar bada high school class room created anxiety among people. But incident turned to humor and that video went viral,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X