ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಸಿಸ್ ಮುಖವಾಣಿಯಲ್ಲಿ ರುಂಡವಿಲ್ಲದ ಮುರ್ಡೇಶ್ವರದ ಶಿವನ ಪ್ರತಿಮೆ

|
Google Oneindia Kannada News

ಕಾರವಾರ, ನವೆಂಬರ್ 23: ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಭಟ್ಕಳ ತಾಲೂಕಿನ ಮುರ್ಡೇಶ್ವರದ ಶಿವನ ಬೃಹತ್ ಪ್ರತಿಮೆ ಭಂಗಗೊಳಿಸುವ ಫೋಟೋ ಒಂದನ್ನು ಐಸಿಸ್ ಭಯೋತ್ಪಾದಕ ಸಂಘಟನೆಯ ಮ್ಯಾಗಜೀನ್​ನ ಕವರ್ ಪೇಜ್‌ನಲ್ಲಿ ಬಳಸಲಾಗಿದೆ ಎಂದು ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಆರೋಪಿಸಿದ್ದಾರೆ.

ಐಸಿಸ್‌ನ ಮ್ಯಾಗಜೀನ್ ಆಗಿರುವ 'ದಿ ವಾಯ್ಸ್ ಆಫ್ ಹಿಂದ್'ನ (The Voice oF Hind) ಕವರ್ ಪೇಜ್‌ಗೆ ಮುರ್ಡೇಶ್ವರದ ಶಿವನ ಪ್ರತಿಮೆಯ ಫೋಟೋ ಹಾಕಿದ್ದು, ಅದರ ಮೇಲೆ 'Its time to Break False Gods' ಎಂಬ ಬರಹವನ್ನೂ ಮುದ್ರಿಸಲಾಗಿದೆ. ಜೊತೆಗೆ ಶಿವನ ಪ್ರತಿಮೆಯ ರುಂಡವನ್ನು ಕತ್ತರಿಸಿ, ಅದರ ತುತ್ತ ತುದಿಗೆ ಐಸಿಸ್ ಧ್ವಜ ಹಾರಾಡುತ್ತಿರುವಂತೆ ವಿಕೃತಗೊಳಿಸಿದ ಚಿತ್ರವನ್ನು ಬಳಸಿಕೊಳ್ಳಲಾಗಿದೆ.

ಈ ಫೋಟೋ ಮತ್ತು ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತಂತೆ ಕುಮಟಾ ಶಾಸಕ ದಿನಕರ್ ಕೆ.​ ಶೆಟ್ಟಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡು ಈ ಬಗ್ಗೆ ಸರ್ಕಾರ ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ.

Dismantled Murudeshwara Shiva Idol Photo in ISIS Magazine; Kumta MLA Dinakar Keshav Shetty Demands CM to Take Action

ಐಸಿಸ್ ಪ್ರಚಾರ ಮಾಸಿಕ ಆನ್‌ಲೈನ್ ನಿಯತಕಾಲಿಕೆ 'ವಾಯ್ಸ್ ಆಫ್ ಹಿಂದ್'ನ ಉತ್ಪಾದನೆ ಮತ್ತು ಪ್ರಸರಣದಲ್ಲಿ ಸಕ್ರಿಯ ಪಾತ್ರದ ಆರೋಪದ ಮೇಲೆ, ಕಳೆದ ಆಗಸ್ಟ್‌ನಲ್ಲಿ ಉಫ್ರಿ ಜವಾಹರ್ ದಾಮುದಿ ಅಲಿಯಾಸ್ ಅಬು ಹಾಜಿರ್ ಅಲ್ ಬದ್ರಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ರಾಜ್ಯ ಪೊಲೀಸರ ನೇತೃತ್ವದ ಸಂಘಟಿತ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಯಲ್ಲಿ ಭಟ್ಕಳದಲ್ಲಿ ಬಂಧಿಸಲಾಗಿದೆ.

ಈತನ ಮೇಲೆ ಏಪ್ರಿಲ್ 2020ರಿಂದ ಕೇಂದ್ರ ತನಿಖಾ ಸಂಸ್ಥೆಗಳು ನಿಗಾ ಇರಿಸಿದ್ದವು. ಐಸಿಸ್ ಪ್ರಚಾರ ಮತ್ತು ಮಾಧ್ಯಮ ಚಟುವಟಿಕೆಗಳ ಹೊರತಾಗಿ, ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಖರೀದಿ, ಮುಜಾಹಿದ್ದೀನ್‌ಗಳಿಗೆ ನಿಧಿ ಸಂಸ್ಥೆ ಮತ್ತು ನೇಮಕಾತಿ ಸೇರಿದಂತೆ ಲಾಜಿಸ್ಟಿಕಲ್ ಬೆಂಬಲವನ್ನು ಇವನು ನೋಡಿಕೊಂಡಿದ್ದನು.

Dismantled Murudeshwara Shiva Idol Photo in ISIS Magazine; Kumta MLA Dinakar Keshav Shetty Demands CM to Take Action

ಹೀಗಾಗಿ ಅಬು ಹಾಜಿರ್ ಅಲ್ ಬದ್ರಿ ಬಂಧನ ಐಸಿಸ್‌ಗೆ ದೊಡ್ಡ ಹೊಡೆತ ಎಂದು ಅಂದೇ ಬಿಂಬಿಸಲಾಗಿತ್ತು. ಈತನ ಬಂಧನದಿಂದಾಗಿ ಸೇಡು ತೀರಿಸಿಕೊಳ್ಳಲು ಐಸಿಸ್ ಸಜ್ಜಾಗಿದೆಯೇ? ಎಂಬ ಅನುಮಾನ ಮ್ಯಾಗಜೀನ್ ಕವರ್ ಪೇಜ್‌ನಿಂದಾಗಿ ಮೂಡಿದೆ.

ಸರ್ಕಾರ ಹಾಗೂ ಭದ್ರತಾ ಇಲಾಖೆಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಆ ಮೂಲಕ ಮುಂದಾಗಬಹುದಾದ ಅನಾಹುತಗಳನ್ನು ತಡೆಯಬೇಕಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಾಮಾಜಿಕ ಜಾಲತಾಣ ಖಾತೆಗೆ ಟ್ಯಾಗ್​ ಮಾಡಿ ಶಾಸಕ ದಿನಕರ್​ ಶೆಟ್ಟಿ ಒತ್ತಾಯಿಸಿದ್ದಾರೆ.

Dismantled Murudeshwara Shiva Idol Photo in ISIS Magazine; Kumta MLA Dinakar Keshav Shetty Demands CM to Take Action

ದಿನಕರ್​ ಶೆಟ್ಟಿ ಆಗ್ರಹವೇನು?
ಐಎಸ್ಐಎಸ್ (ISIS) ಉಗ್ರ ಸಂಘಟನೆಯ "ವಾಯ್ಸ್ ಆಫ್ ಹಿಂದ್" (VOICE OF HIND) ಎಂಬ ಪತ್ರಿಕೆಯೊಂದು ನಮ್ಮ ಮುರ್ಡೇಶ್ವರ ದೇವಸ್ಥಾನದ ಶಿವನ ಮೂರ್ತಿಯನ್ನು ಕೆಡವಿದಂತೆ ತನ್ನ ಮುಖಪುಟದಲ್ಲಿ ಘೋಷಣೆ ಮಾಡಿಕೊಂಡಿರುವುದು ಸಾಮಾಜಿಕ ಜಾಲತಾಣದ ಮೂಲಕ ನನ್ನ ಗಮನಕ್ಕೆ ಬಂದಿದೆ. ಹಿಂದೂ ದೇವಾಲಯಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ನಮ್ಮ ಪಕ್ಷದ ಹಾಗೂ ನನ್ನ ತತ್ವ ಸಿದ್ಧಾಂತಗಳಲೊಂದಾಗಿದೆ.

ಉಗ್ರ ಸಂಘಟನೆಯ ಹೆಡೆಮುರಿಕಟ್ಟಲು ನಮ್ಮ ರಕ್ಷಣಾ ಇಲಾಖೆಯು ಸದೃಢ ಮತ್ತು ಸಶಕ್ತವಾಗಿದೆ. ಇಂತಹ ಪೊಳ್ಳು ಬೆದರಿಕೆಗೆ ಹೆದರುವ ಆಡಳಿತ ವ್ಯವಸ್ಥೆ ಈಗಿಲ್ಲ. ಈ ಸಂಬಂಧ ಈಗಾಗಲೇ ಗೃಹ ಮಂತ್ರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ನೀಡಲಾಗಿದ್ದು, ಶೀಘ್ರವೇ ಮುಖತಃ ಭೇಟಿಯಾಗಿ ಮುರ್ಡೇಶ್ವರ ದೇವಸ್ಥಾನದ ಸುತ್ತಮುತ್ತ ಹೆಚ್ಚಿನ ಭದ್ರತೆ ವದಗಿಸಲು ಕ್ರಮ ವಹಿಸಲಾಗುವುದು ಎಂದು ಕುಮಟಾ ಕ್ಷೇತ್ರದ ಶಾಸಕ ದಿನಕರ್ ಕೆ. ಶೆಟ್ಟಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

English summary
Dismantled Murudeshwara Shiva Idol Photo in ISIS Magazine of The Voice of Hind; BJP Kumta MLA Dinakar Keshav Shetty demands CM Basavaraj Bommai to take action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X