"ಈ ಸಲನಾದ್ರೂ ಮದುವೆ ಮಾಡ್ಸು ದೇವ್ರೆ" ಬಾಳೆಹಣ್ಣಲ್ಲಿ ಹೀಗೊಂದು ಕೋರಿಕೆ
ಕಾರವಾರ, ಫೆಬ್ರವರಿ 26: ದೇವರ ಬಳಿ ತಮ್ಮ ಕೋರಿಕೆಗಳನ್ನು ಈಡೇರಿಸುವಂತೆ ಭಕ್ತರು ಯಾವ್ಯಾವ ಪರಿಯಲ್ಲಿ ಬೇಡಿಕೊಳ್ಳಬಹುದು? ಯಾವ್ಯಾವ ಹರಕೆಗಳನ್ನು ಕಟ್ಟಿಕೊಳ್ಳಬಹುದು? ಕೆಲವರು ಮನಸ್ಸಿನಲ್ಲಿ ಬೇಡಿಕೊಂಡು, ನನ್ನ ಈ ಕೋರಿಕೆ ಈಡೇರಿದರೆ ಇಂಥದ್ದನ್ನು ಕೊಡುತ್ತೇನೆ ಎಂದು ಹರಕೆ ಕಟ್ಟಿಕೊಳ್ಳುತ್ತಾರೆ. ಇನ್ನೂ ಕೆಲವರು ಚೀಟಿಯಲ್ಲಿ ಬರೆದು, ದೇವರಿಗೆ ಅದನ್ನು ಅರ್ಪಿಸಿ, ಆ ಕೋರಿಕೆ ಈಡೇರುವಂತೆ ಬೇಡಿಕೊಳ್ಳುತ್ತಾರೆ.
ಆದರೆ ಗೋಕರ್ಣದಲ್ಲಿ ಬಾಳೆಹಣ್ಣಿನ ಮೂಲಕ ಭಕ್ತರು ಇಂಥ ಕೆಲವು ಕೋರಿಕೆಗಳನ್ನು ದೇವರಿಗೆ ತಲುಪಿಸಿದ್ದಾರೆ. ಬಾಳೆಹಣ್ಣಿನ ಮೂಲಕ ತಮ್ಮ ಮನದ ಈ ಇಂಗಿತಗಳನ್ನು ಈಡೇರಿಸುವಂತೆ ಕೇಳಿಕೊಂಡಿದ್ದಾರೆ.
"ಈ ಸಲನಾದ್ರು ಮದುವೆ ಮಾಡಿಸು ದೇವರೇ" ಎಂದು ಗೋಕರ್ಣದ ಮಹಾಬಲೇಶ್ವರ ಬಳಿ ಕೇಳಿಕೊಂಡಿದ್ದಾರೆ ಒಬ್ಬರು. ಇದೇ ಸೋಮವಾರ ಗೋಕರ್ಣದಲ್ಲಿ ಮಹಾಬಲೇಶ್ವರ ದೇವಸ್ಥಾನದಲ್ಲಿ ರಥೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ರಥಬೀದಿಯಲ್ಲಿ ತೇರು ಕೂಡ ಸಾಗಿತ್ತು. ಈ ವೇಳೆ ತಮ್ಮ ಕೋರಿಕೆಗಳನ್ನು ಬಾಳೆ ಹಣ್ಣಿನ ಮೇಲೆ ಬರೆದು ಭಕ್ತರು ತೇರಿಗೆ ಎಸೆದಿದ್ದಾರೆ. ಈ ಸಂದೇಶವಿರುವ ಬಾಳೆಹಣ್ಣುಗಳು ನಂತರ ಸಿಕ್ಕಿವೆ.

ಈ ಸಲನಾದ್ರು ಮದುವೆ ಮಾಡಿಸು ದೇವರೇ ಎಂದು, ನನ್ನ ಹುಡುಗಿ ನನಗೆ ಸಿಗಲಿ ಎಂದು, ಒಂದು ದಿನನಾದ್ರು ಒಳ್ಳೆದಾಗಲಿ, ದುಡ್ಡು ಇಲ್ಲ ದೇವರೇ ಎಂದು ಸಂದೇಶಗಳನ್ನು ಬರೆದು ಹಾಕಿದ್ದಾರೆ.












Click it and Unblock the Notifications