ಒಂದೇ ಸಮಯದಲ್ಲಿ ಹೃದಯಾಘಾತ; ಸಾವಿನ ಮನೆಗೆ ಒಟ್ಟಿಗೆ ಹೊರಟುಬಿಟ್ಟರು ಹೊನ್ನಾವರದ ಈ ದಂಪತಿ

ಹೊನ್ನಾವರ, ನವೆಂಬರ್ 26: ಕರ್ಕಿ ನಿವಾಸಿ ವೆಂಕಟೇಶ ಕೊಡಿಯಾ ಅವರಿಗೆ ಇದ್ದಕ್ಕಿದ್ದಂತೆ ಇಂದು ಬೆಳಗ್ಗಿನ ಜಾವ ನಾಲ್ಕರ ಹೊತ್ತಿಗೆ ಎದೆ ನೋವು ಕಾಣಿಸಿಕೊಂಡಿದೆ. ಮನೆಯವರು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯದಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ.

ಇತ್ತ ಮದುವೆ ಸಮಾರಂಭಕ್ಕೆಂದು ಮಗಳ ಮನೆಗೆ ಬಂದಿದ್ದ ವೆಂಕಟೇಶ ಹೆಂಡತಿ ಮಾದೇವಿಗೂ ಅದೇ ಸಮಯಕ್ಕೆ ನಿದ್ದೆಯಿಂದ ಎಚ್ಚರವಾಗಿದೆ. ಕನಸಿನಿಂದ ಬೆಚ್ಚಿಬಿದ್ದು ಎದ್ದ ಅವರನ್ನು ಮನೆಯವರು ಸಮಾಧಾನಪಡಿಸಿ ಹಾಸಿಗೆ ಮೇಲೆ ಮಲಗಿಸಿದ್ದಷ್ಟೆ, ಮತ್ತೆ ಅವರು ಏಳಲೇ ಇಲ್ಲ.

ಜೀವನದುದ್ದಕ್ಕೂ ಒಂದಾಗಿದ್ದ ಈ ದಂಪತಿ ಹೀಗೆ ಸಾವಿನಲ್ಲಿಯೂ ಜೊತೆಯಾಗಿರುವ ಘಟನೆ ಹೊನ್ನಾವರ ತಾಲೂಕಿನ ಹಳದಿಪುರ ಕರಿಮುಲೆಯಲ್ಲಿ ನಡೆದಿದೆ.

Couple Died Same Day By Heartattack In Honnavar

ತಾಲೂಕಿನ ಕರ್ಕಿಯ ನಿವಾಸಿಯಾದ ವೆಂಕಟೇಶ ಕೊಡಿಯಾ ಹಾಗೂ ಮಾದೇವಿ ಕೊಡಿಯಾ ಇಬ್ಬರು ಒಂದೇ ದಿನ ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ಸೋಮವಾರ ಸಂಭವಿಸಿದೆ. ಕರ್ಕಿ ಬಳಿ ಕ್ಷೌರಿಕ ವೃತ್ತಿ ನಡೆಸುತ್ತಿದ್ದ 58 ವಯಸ್ಸಿನ ವೆಂಕಟೇಶ ಕೊಡಿಯಾ ಅವರಿಗೆ ಕರಿಮುಲೆಯಲ್ಲಿನ ತಮ್ಮ ಮನೆಯಲ್ಲಿ ಬೆಳಗಿನ ಜಾವ ಎದೆನೋವು ಕಾಣಿಸಿಕೊಂಡಿತ್ತು. ಆದರೆ ಆಸ್ಪತ್ರೆಗೆ ಕರೆದೊಯ್ಯುವಾಗ ಕರ್ಕಿ ಸಮೀಪವೇ ಸಾವನ್ನಪ್ಪಿದ್ದರು.

ಈ ಮಧ್ಯೆ ಅವರ ಹೆಂಡತಿ ಮಾದೇವಿ ಕೊಡಿಯಾ ಸಾಗರದಲ್ಲಿನ ತನ್ನ ಮಗಳ ಮನೆಯಲ್ಲಿದ್ದರು. ಬೆಳಗಿನ ಜಾವ 4ರ ಹೊತ್ತಿಗೆ ಕೆಟ್ಟ ಕನಸು ಬಿದ್ದಿದೆ ಎಂದು ಬೆಚ್ಚಿದ ಅವರನ್ನು ಸಮಾಧಾನಪಡಿಸುವಾಗ ತೀವ್ರ ಎದೆ ನೋವಿನಿಂದ ಕ್ಷಣಾರ್ಧದಲ್ಲೇ ಸಾವನ್ನಪ್ಪಿದ್ದಾರೆ.

ಹಳದಿಪುರದಲ್ಲಿ ವೆಂಕಟೇಶ್ ಸತ್ತ ಸುದ್ದಿಯನ್ನು ಮಾದೇವಿ ಅವರಿಗೆ ಇನ್ನೂ ತಿಳಿಸಿರಲಿಲ್ಲ. ಆ ವಿಷಯ ಮುಟ್ಟುವ ಮುನ್ನವೇ ಅವರು ಕೂಡ ಗಂಡನ ಜೊತೆ ನಡೆದಿದ್ದರು. ವಿಧಿಯಾಟಕ್ಕೆ ಅಚ್ಚರಿ ಪಡುತ್ತಲೇ ಸಾವಿನಲ್ಲಿಯೂ ಜೊತೆಯಾದ ಈ ದಂಪತಿ ನೋಡಿ ಕಂಬನಿ ಮಿಡಿಯದವರೇ ಇಲ್ಲ.

ಈ ದಂಪತಿಯ ಹಿರಿಯ ಮಗ ಕೂಡ ವರ್ಷದ ಹಿಂದಷ್ಟೆ ಸಾವನ್ನಪ್ಪಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+