ಬೆಂಗಳೂರಿನ ವ್ಯಕ್ತಿ ಅರೆಸಾಮಿ ಕೆರೆಯಲ್ಲಿ ಶವವಾಗಿ ಪತ್ತೆ!
ಕಾರವಾರ, ಮೇ 24 : ಹೊನ್ನಾವರ ತಾಲೂಕಿನ ರಾಮತೀರ್ಥ ಸಮೀಪ ಇರುವ ಅರೆಸಾಮಿ ಕೆರೆಯಲ್ಲಿ ವ್ಯಕ್ತಿಯೊಬ್ಬರ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.
ಮೃತನನ್ನು ಬೆಂಗಳೂರು ಗ್ರಾಮಾಂತರದ ಹೊಸಕೋಟೆ ನಿವಾಸಿ ಎಚ್.ವಿ.ವಿಜಯಕುಮಾರ್ (40) ಎಂದು ಗುರುತಿಸಲಾಗಿದೆ.
ವಿಜಯಕುಮಾರ್ ಮೂಲತಃ ಬೆಂಗಳೂರಿನವರಾಗಿದ್ದು, ಹೊನ್ನಾವರ ತಾಲೂಕಿನ ರಾಯಲಕೇರಿಯಲ್ಲಿ ಕಳೆದ ಹತ್ತು ವರ್ಷಗಳಿಂದ ವಾಸವಾಗಿದ್ದರು. ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಮೇ 22 ರಂದು ವಿಜಯಕುಮಾರ್ ರಾಯಲಕೇರಿಯ ಮನೆಯಿಂದ ಬೈಕಿನಲ್ಲಿ ಹೊರಟಿದ್ದವರು ತಿರುಗಿ ಮನೆಗೆ ಬಂದಿರಲಿಲ್ಲ. ಆದರೆ ಅವರ ಶವ ಕೆರೆಯಲ್ಲಿ ಪತ್ತೆಯಾಗಿದೆ. ಇದು ಅನುಮಾನ ಹುಟ್ಟಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಮೃತನ ತಂದೆ ಎಚ್.ಸಿ.ವೆಂಕೋಬರಾವ್ ಪೊಲೀಸರಿಗೆ ದೂರು ನೀಡಿದ್ದಾರೆ.
ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.












Click it and Unblock the Notifications