ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶೇಷ ಆಸಕ್ತಿ: ಮನೆಯನ್ನೇ ಪ್ರಾಚೀನ ವಸ್ತುಗಳ ಸಂಗ್ರಹಾಲಯ ಮಾಡಿದ ಮುಸ್ಲಿಂ ಕುಟುಂಬ

By ಉತ್ತರ ಕನ್ನಡ ಪ್ರತಿನಿಧಿ
|
Google Oneindia Kannada News

ಕಾರವಾರ, ಜನವರಿ 10: ಪ್ಲಾಸ್ಟಿಕ್, ಪೈಬರ್ ಭರಾಟೆ ನಡುವೆ ಪ್ರಾಚೀನ ವಸ್ತುಗಳು ಮರೆಯಾಗಿವೆ. ಮನೆಗಳಲ್ಲಿ ಪೂರ್ವಜರು ಬಳಸುತ್ತಿದ್ದ ವಸ್ತುಗಳು ಮೂಲೆಗುಂಪಾಗಿ ಅತ್ಯಾಧುನಿಕ ಸಲಕರಣೆಗಳು ಅಡುಗೆ ಕೋಣೆ ಸೇರಿಕೊಂಡಿವೆ. ಆದರೆ ಈ ಹಿಂದೆ ಬಳಸುತ್ತಿದ್ದ ಅಪರೂಪದ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಇತರೆ ಪರಿಕರಗಳನ್ನು ಸಂಗ್ರಹಿಸಿದ ಮುಸ್ಲಿಂ ಕುಟುಂಬವೊಂದು ಅವುಗಳ ಪ್ರದರ್ಶನ ನಡೆಸಿದ್ದು ಎಲ್ಲರ ಗಮನ ಸೆಳೆದಿದೆ.

ಆಧುನಿಕತೆ ಬೆಳೆದಂತೆ ನಮ್ಮ‌ಜೀವನ ಶೈಲಿ ಕೂಡ ಬದಲಾಗುತ್ತಿದೆ. ಮಾನವ ತನ್ನ ಜೀವನ ಕ್ರಮಕ್ಕೆ ಅನೂಕೂಲವಾಗುವಂತಹ ವ್ಯವಸ್ಥೆಗೆ ಮಾರು ಹೋಗುತ್ತಿದ್ದಾನೆ. ಅದರಂತೆ ನಮ್ಮ ಪೂರ್ವಜರು ಮನೆ, ಜಮೀನು ಕೆಲಸಗಳಿಗೆ ಹಾಗೂ ಗೃಹೋಪಯೋಗಿ ವಸ್ತುಗಳಾಗಿ ಬಳಸುತ್ತಿದ್ದ ಪುರಾತನ ಹಾಗೂ ಪ್ರಾಚೀನ ವಸ್ತುಗಳು ಇದೀಗ ಸಂಪೂರ್ಣ ಮರೆಯಾಗಿದೆ.

ಮಸೀದಿಗೆ ತೆರಳಿ ಪ್ರಾರ್ಥನೆ ವೀಕ್ಷಿಸಿದ ಸ್ವಾಮೀಜಿ: ಹಿಂದೂ ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಸಹಸ್ರಮಾನೋತ್ಸವಮಸೀದಿಗೆ ತೆರಳಿ ಪ್ರಾರ್ಥನೆ ವೀಕ್ಷಿಸಿದ ಸ್ವಾಮೀಜಿ: ಹಿಂದೂ ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಸಹಸ್ರಮಾನೋತ್ಸವ

ಈ ವಸ್ತುಗಳ ಬದಲಾಗಿ ಇದೀಗ ತರೆವಾರು ಪ್ಲಾಸ್ಟಿಕ್, ಪೈಬರ್, ಗಾಜಿನ ವಸ್ತುಗಳು ಮನೆಗಳಲ್ಲಿ ರಾರಾಜಿಸುತ್ತಿವೆ. ಅತಿ ಕಡಿಮೆ ಬೆಲೆಗೆ ಈ ವಸ್ತುಗಳು ಸಿಗುವುದು ಮಾತ್ರವಲ್ಲದೆ ಹೆಚ್ಚು ಆಕರ್ಷಿತವಾಗುವ ಕಾರಣ ಜನ ಕೂಡ ಮಾರುಹೋಗುತ್ತಿದ್ದಾರೆ. ಈ ಹಿಂದೆ ಬಳಸುತ್ತಿದ್ದ ಪುರಾತನ ವಸ್ತುಗಳು ಇದೀಗ ನೋಡುವುದಕ್ಕೂ ಸಿಗುವುದು ಕಷ್ಟ ಎಂಬಂತಾಗಿದೆ.

ವಸ್ತು ಸಂಗ್ರಹಾಲಯದಲ್ಲಿರುವ ಪ್ರಮುಖ ಆಕರ್ಷಣೆ ಏನು..?

ವಸ್ತು ಸಂಗ್ರಹಾಲಯದಲ್ಲಿರುವ ಪ್ರಮುಖ ಆಕರ್ಷಣೆ ಏನು..?

ಭಟ್ಕಳ ಪಟ್ಟಣದ ಚಿನ್ನದಪಳ್ಳಿ ಬಳಿ ವಾಸವಿರುವ ನವಾಯತ್ ಮೆಹೆಫಿಲ್ ಎಂಬ ಕುಟುಂಬದವರು ಪ್ರಾಚೀನ ವಸ್ತು ಸಂಗ್ರಹಿಸಿ ಇದೀಗ ತಮ್ಮ ಮನೆಯನ್ನೆ ಈ ವಸ್ತುಗಳ ಸಂಗ್ರಹಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಹಳೆ ಕಾಲದ ಹಿತ್ತಾಳೆ, ಕಂಚಿನ ಪಾತ್ರೆ, ಪಿಂಗಾಣಿ ಭರಣಿ, ಕಂಚೀನ ದೀಪ, ಮಹಿಳೆಯರ ಅಲಂಕಾರಿಕಾ ವಸ್ತುಗಳ ಸಂಗ್ರಹದ ಮರದ ಪೆಟ್ಟಿಗೆ, ರೆಡೀಯೋ, ಸುಗಂಧ ದೃವ್ಯ ಸಿಂಪಡನೆಯ ವಸ್ತುಗಳು ಹೀಗೆ ಪ್ರತಿಯೊಂದನ್ನು ಇಲ್ಲಿ ಸಂಗ್ರಹ ಮಾಡಲಾಗಿದೆ.

ವಿವಿಧ ಪ್ರಾಚೀನ ವಸ್ತುಗಳ ಪ್ರದರ್ಶನ

ವಿವಿಧ ಪ್ರಾಚೀನ ವಸ್ತುಗಳ ಪ್ರದರ್ಶನ

ಭಟ್ಕಳದ ಜಮಾತುಲ್ಲಾ ಮುಸ್ಲಿಮೀನ್ ಸಂಸ್ಥೆಯು ಒಂದು ಸಾವಿರ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಹಸ್ರ ಶತಮಾನೋತ್ಸವ ಆಚರಣೆ ಮಾಡಲಾಗುತ್ತಿದ್ದು ಈ ಸಂದರ್ಭದಲ್ಲಿ ಈ ವಸ್ತುಗಳನ್ನು ಪ್ರದರ್ಶನ ಮಾಡಿ ಆಮೂಲಕ ಹಳೆಯ ವಸ್ತುಗಳ ಬಗ್ಗೆ ಜನರಿಗೆ ಮಾಹಿತಿ ಕೊಡಲಾಗುತ್ತಿದೆ. ಜನ ಕೂಡ ಮುಗ್ಗಿ ಬಿದ್ದು ಅಪರೂಪದ ವಸ್ತುಗಳ ವೀಕ್ಷಣೆ ನಡೆಸಿದ್ದಾರೆ. ಹಳೆಕಾಲದ ತೊಟ್ಟಿಲು, ನೇಗಿಲು, ಚರಕ, ಬುಟ್ಟಿ, ಭತ್ತ ಕುಟ್ಟುವ ಕಲ್ಲು, ಒನಕೆ ಸೇರಿದಂತೆ ಅಪರೂಪದ ವಸ್ತುಗಳು ಇಲ್ಲಿದೆ. ಇಂದು ಇವೆಲ್ಲವೂ ಎಷ್ಟೇ ದುಡ್ಡುಕೊಟ್ಟರು ದೊರೆಯುವುದಿಲ್ಲ. ಆರೋಗ್ಯಕರವಾಗಿದ್ದ ಈ ವಸ್ತುಗಳ ಬದಲಾಗಿ ಪ್ಲಾಸ್ಟಿಕ್ ವಸ್ತುಗಳು ಬಂದಿದೆ ಎನ್ನುತ್ತಾರೆ ಆಯೋಜಕರಾದ ಶಬೀರ್ ಅಜೀಬ್.

ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸಿದ ಅಪರೂಪದ ವಸ್ತುಗಳು

ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸಿದ ಅಪರೂಪದ ವಸ್ತುಗಳು

ಇನ್ನು ಜಮಾತುಲ್ಲಾ ಮುಸ್ಲಿಮೀನ್ ಸಂಸ್ಥೆಯ ಸಹಸ್ರ ಶತಮಾನೋತ್ಸವಕ್ಕೆ ಆಗಮಿಸಿದ ಬಹುತೇಕರು ಈ ಪ್ರಾಚೀನ ವಸ್ತುಗಳ ಸಂಗ್ರಹಾಲಯ ವೀಕ್ಷಣೆ ನಡೆಸಿದರು. ವಿದ್ಯಾರ್ಥಿಗಳು, ಶಾಲಾ ಕಾಲೇಜು ಶಿಕ್ಷಕರು ಭಾಗವಹಿಸಿ ಅಪರೂಪದ ವಸ್ತುಗಳನ್ನು ಕಂಡು ಆಯೋಜನಕರಿಂದ ಮಾಹಿತಿ ಪಡೆದರು. ಅಲ್ಲದೆ ಎಂದೂ ನೋಡಿರದ ಅಪರೂಪದ ವಸ್ತುಗಳು ನೋಡುಗರಲ್ಲಿ ಕೂತೂಹಲಹುಟ್ಟಿಸುವಂತೆ ಮಾಡಿತ್ತು.

ಮನೆಯನ್ನೇ ವಸ್ತು ಸಂಗ್ರಹಾಲಯ ಮಾಡಿದ ಕುಟುಂಬ

ಮನೆಯನ್ನೇ ವಸ್ತು ಸಂಗ್ರಹಾಲಯ ಮಾಡಿದ ಕುಟುಂಬ

ಇನ್ನು ಭಟ್ಕಳಕ್ಕೆ ಬರುವ ಮೊದಲು ಇಲ್ಲಿನ ನವಾಯಿತಿ ಮುಸ್ಲಿಂ ಸಮುದಾಯದವರು ಶ್ರೀಲಂಕಾ, ಯೆಮೆನ್, ಮಲೇಷಿಯಾ ಭಾಗದಲ್ಲಿ ವಾಸವಿದ್ದರು. ಸಾವಿರ ವರ್ಷಗಳ ಹಿಂದೆ ವ್ಯಾಪಾರಕ್ಕಾಗಿ ಮೊದಲು ನವಾಯಿತಿಗಳು ಕಾಲಿಟ್ಟಿದ್ದು ಈ ಹಿಂದೆ ಹೊನೂರು ಎಂದು ಕರೆಸಿಕೊಳ್ಳುತ್ತಿದ್ದ ಈಗಿನ ಹೊನ್ನಾವರದ ಮಂಕಿಯಲ್ಲಿ. ಅಲ್ಲಿಂದ ಬಳಿಕ ಭಟ್ಕಳಕ್ಕೆ ಬಂದರು. ಇಲ್ಲಿ ಎರಡು ಮೂರು ತಿಂಗಳು ಉಳಿದುಕೊಂಡು ಇಲ್ಲಿಂದ ಕೇರಳದತ್ತ ಪ್ರಯಾಣಿಸಿದರು. ಹೀಗೆ ಭಟ್ಕಳಕ್ಕೆ ಆಗಮಿಸಿದ ಮುಸ್ಲಿಂ ಸಮುದಾಯದವರು ದುಬೈನೊಂದಿಗೆ ಹೆಚ್ಚು ವ್ಯವಹರಿಸುತ್ತಾರೆ. ಅಲ್ಲಿಂದ ಬಗೆ ಬಗೆಯ ವಸ್ತುಗಳನ್ನು ಇಲ್ಲಿಗೆ ತಂದು ಕಡಿಮೆ ಬೆಲೆಗೆ ಮಾರುವ ಕಾರಣ ಈ ಭಾಗದಲ್ಲಿ ಹಳೆಯ ವಸ್ತುಗಳು ಸಿಗುವುದು ಕಷ್ಟ ಎನ್ನುವಂತಾಗಿದೆ. ಆದರೆ ಇದೀಗ ಮುಸ್ಲಿಂ ಕುಟುಂಬ ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಿ ಮನೆಯನ್ನೇ ಪ್ರಾಚೀನ ವಸ್ತು ಸಂಗ್ರಹಾಲಯವನ್ನಾಗಿ ಮಾಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ಸ್ಥಳೀಯರಾದ ಅಬ್ದುಲ್ ಮೊಹರಮ್ ಮೊತಿಶ್ಯಾಮ್ ಹೇಳಿದ್ದಾರೆ.

ಇಂದಿನ ಆಧುನಿಕ ಯುಗದಲ್ಲಿ ಮಾನವ ತನ್ನ ಸುಖದಾಯಕ ಜೀವನಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವ ಕಾರಣ ಅದೆಷ್ಟೋ ಪ್ರಾಚೀನ ವಸ್ತುಗಳು ಮೂಲೆಗುಂಪಾಗಿದೆ. ಆದರೆ ಹೀಗೇ ಮೂಲೆಗುಂಪಾದ ವಸ್ತುಗಳನ್ನು ಮುಸ್ಲಿಂ ಕುಟುಂಬವೊಂದು ಸಂಗ್ರಹ ಮಾಡತೊಡಗಿದ್ದು ಇದೀಗ ಅವುಗಳ ಪ್ರದರ್ಶನ ಏರ್ಪಡಿಸಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

English summary
Uttara Kannada Bhatkal Muslim family made their house as Antiquities Museum. they collect more than 100 Antiquities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X