ಎಂಥವರೂ ಮೆಚ್ಚಲೇಬೇಕು ವಿಕಲಚೇತನ ಸಮರ್ಥನ ಸಾಧನೆ!
ಕಾರವಾರ, ಮೇ 8: ಸ್ಪಷ್ಟವಾಗಿ ಮಾತನಾಡಲು, ಓಡಾಡಲು ಅಸಮರ್ಥನಾದರೂ, ಚದುರಂಗದ ಆಟದಲ್ಲಿ ಸಮರ್ಥನಾಗಿರುವ ಹೊನ್ನಾವರ ತಾಲೂಕಿನ ಎಂಪಿಇ ಸೊಸೈಟಿಯ ಎಸ್ ಡಿಎಂ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ ಸಮರ್ಥ ಜೆ.ರಾವ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಹುಟ್ಟಿದ ಬಳಿಕ ಸೆಲೆಬ್ರಲ್ ಪಾಲ್ಸಿಯಿಂದ ವಿಕಲಚೇತನಕ್ಕೆ ತುತ್ತಾದ ಸಮರ್ಥ, ಸರಾಗವಾಗಿ ನಡೆಯಲಾರ. ಸ್ಪಷ್ಟವಾಗಿ ಮಾತನಾಡಲು ಕೂಡ ಈತನಿಂದ ಅಸಾಧ್ಯ. ತಂದೆ ಅಥವಾ ತಾಯಿಯೇ ಈತನನ್ನು ಹೊತ್ತುಕೊಂಡು ಹೋಗಬೇಕು. ಶಾಲೆ, ಕಾಲೇಜಿಗೂ ಕೂಡ ಹೊತ್ತುಕೊಂಡು ಬಿಟ್ಟು ಬರಬೇಕು.
ಆದರೆ, ಚದುರಂಗದಲ್ಲಿ ಮಾತ್ರ ಈತ ಅಸಾಮಾನ್ಯ ಆಟಗಾರ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಈತ ಪ್ರತಿನಿಧಿಸಿದ್ದ. ಈ ಬಾರಿಯ ಪಿಯು ಪರೀಕ್ಷೆಯಲ್ಲಿ 509 ಅಂಕಗಳಿಸುವುದರೊಂದಿಗೆ (ಶೇ 84.83) ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಮತ್ತೊಂದು ವಿಶೇಷ ಸಾಧನೆ ಮಾಡಿರುವ ಸಮರ್ಥನ ಸಾಧನೆಯ ವಿವರ ಇಲ್ಲಿದೆ...

ಇಂಗ್ಲಿಷ್ ಪತ್ರಿಕೆ ಮರುಮೌಲ್ಯಮಾಪನಕ್ಕೆ
ದ್ವಿತೀಯ ಪಿಯು ಕನ್ನಡದಲ್ಲಿ ಶೇ 86, ಇಂಗ್ಲಿಷ್ ನಲ್ಲಿ ಶೇ 85, ಅರ್ಥಶಾಸ್ತ್ರ ಶೇ 80, ವ್ಯವಹಾರ ಅಧ್ಯಯನ ಶೇ 92, ಲೆಕ್ಕಶಾಸ್ತ್ರ ಶೇ 91, ಸಂಖ್ಯಾಶಾಸ್ತ್ರದಲ್ಲಿ ಶೇ 75 ಹಾಗೂ ಇಂಗ್ಲೀಷ್ ನಲ್ಲಿ ಶೇ 90 ಅಂಕ ಗಳಿಸಿದ್ದಾರೆ. ಆದರೆ, ಇಂಗ್ಲಿಷ್ ಉತ್ತರ ಪತ್ರಿಕೆ ಮರುಮೌಲ್ಯಮಾಪನಕ್ಕೆ ಹಾಕಲು ಪಾಲಕರು ತೀರ್ಮಾನಿಸಿದ್ದಾರೆ.
ಈತ ಎಸ್ಎಸ್ಎಲ್ ಸಿಯಲ್ಲಿ 541 (ಶೇ 86.58) ಅಂಕಗಳನ್ನು ಗಳಿಸಿದ್ದ.

ಫಲಿತಾಂಶದ ಗುಟ್ಟು
ಸಮರ್ಥನದು ಮೂಲತಃ ಉಡುಪಿ ಜಿಲ್ಲೆಯ ಬಸ್ರೂರು. ತಂದೆ ಜಗದೀಶ್ ರಾವ್ ಉತ್ತರಕನ್ನಡ ಜಿಲ್ಲೆಯ ಮಂಕಿಯ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ಉದ್ಯೋಗಿ. ತಾಯಿ ವಿನುತಾ ಭಟ್ ಹೊನ್ನಾವರದ ಐಟಿಐ ಕಾಲೇಜಿನಲ್ಲಿ ಜೆಟಿಒ ಆಗಿದ್ದಾರೆ.
ಹೊನ್ನಾವರ ತಾಲೂಕಿನ ಎಂಪಿಇ ಸೊಸೈಟಿಯ ಎಸ್ ಡಿಎಂ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸಮರ್ಥ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದನು. ಮನೆಯಲ್ಲಿ ಕಡಿಮೆ ಓದುವ ಸಮರ್ಥ ಕಾಲೇಜಿನಲ್ಲಿ ಗಮನವಿಟ್ಟು ಪಾಠ ಕೇಳುತ್ತಾನೆ. ಇದೇ ಆತ ಪರೀಕ್ಷೆಯಲ್ಲಿ ಹೆಚ್ಚು ಫಲಿತಾಂಶ ಗಳಿಸಲು ಕಾರಣವಾಯಿತು ಎನ್ನುತ್ತಾರೆ ಸಮರ್ಥರ ತಂದೆ ಜಗದೀಶ ರಾವ್.

ತಾಯಿಯೇ ಗುರು
ಸಮರ್ಥನಿಗೆ ಅವರ ತಾಯಿ ವಿನುತಾ ಭಟ್ಟರೇ ಮೊದಲ ಗುರು. ಅವನಲ್ಲಿದ್ದ ಚೆಸ್ ಬಗೆಗಿನ ಆಸಕ್ತಿಯನ್ನು ಗುರುತಿಸಿದವರು. ಇಂದು ಭಾರತವನ್ನು ಪ್ರತಿನಿಧಿಸುವ ಮಟ್ಟಿಗೆ ತಳಪಾಯ ಹಾಕಿದವರು. ಶಾಲೆಯಲ್ಲಿ ಎಲ್ಲ ಮಕ್ಕಳೂ ಆಡಲು ಹೋದಾಗ ಸಮರ್ಥ ಮಾತ್ರ ಬಾಗಿಲ ಬಳಿ ನಿಂತು ಏನನ್ನೋ ಯೋಚನೆ ಮಾಡುತ್ತಾ ಇತರರ ಆಟವನ್ನು ನೋಡುತ್ತಾ ಕುಳಿತಿರುತ್ತಿದ್ದ.
ಈ ಬಗ್ಗೆ ತಿಳಿದ ತಾಯಿ ವಿನುತಾ, ಅವನಿಗೆ ಚೆಸ್ ಆಡಲು ಹೇಳಿಕೊಟ್ಟರು. ಶೈಕ್ಷಣಿಕವಾಗಿಯೂ ಸಮರ್ಥನಿಗೆ ಆಕೆಯೇ ನೆರವಾಗುತ್ತಾಳೆ. 6ನೇ ತರಗತಿ ಉತ್ತೀರ್ಣಳಾಗಿರುವ ಅವನ ತಂಗಿ ನೋಟ್ಸ್ ಬರೆದುಕೊಡುವಲ್ಲಿ ಸಹಾಯ ಮಾಡುತ್ತಾಳೆ.

ಸಮರ್ಥನ ಸಾಧನೆಗಳು
ಸಮರ್ಥ 2015ರ ಏಪ್ರಿಲ್ ನಲ್ಲಿ ತಿರುಚಿಯಲ್ಲಿ ನಡೆದ ವಿಶೇಷ ಚೇತನರ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಹುಬ್ಬಳ್ಳಿಯಲ್ಲಿ ನಡೆದ ಅಂತಾರಾಜ್ಯ ಸ್ಪರ್ಧೆಯಲ್ಲಿ 3 ನೇ ಸ್ಥಾನ, ಮೈಸೂರಿನಲ್ಲಿ ನಡೆದ 16 ವರ್ಷದೊಳಗಿನವರ ಸ್ಪರ್ಧೆಯಲ್ಲಿ ದ್ವಿತೀಯ, ಫಿಡೆ(ವರ್ಲ್ಡ್ ಚೆಸ್ ಫೆಡರೇಶನ್) 1,260ನೇ ಶ್ರೇಣಿ.
ಅಮೇರಿಕಾದ ಫ್ಲೋರಿಡಾದಲ್ಲಿ ಈ ವರ್ಷ ಜೂನ್ ನಲ್ಲಿ ನಡೆದ ಪ್ರಥಮ ವಿಶ್ವ ಫಿಡೇ ಕಿರಿಯ ದೈಹಿಕ ಅಸಮರ್ಥರ ಚದುರಂಗ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ಅಷ್ಟೇ ಅಲ್ಲದೇ 2017ರ ಡಿಸೆಂಬರ್ ತಿಂಗಳಲ್ಲಿ ನಡೆದ ಪ್ಯಾರಾ ಒಲಿಂಪಿಕ್ ಸ್ಪರ್ಧೆಯಲ್ಲಿಯೂ ಸಮರ್ಥ ಭಾಗವಹಿಸಿದ್ದ.
-
ಇರಾನ್ನ ವಾಯುನೆಲೆ, ಶಸ್ತ್ರಾಸ್ತ್ರ ಡಿಪೋ ಮೇಲೆ ಯುಎಸ್ ಜಂಟಿ ದಾಳಿ, ರಷ್ಯಾ ಬೆಂಬಲ? ಇಲ್ಲಿವೆ ಪ್ರಮುಖಾಂಶಗಳು -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ












Click it and Unblock the Notifications