ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಆಸ್ತಿ ಡಬಲ್

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ ಏಪ್ರಿಲ್ 24 : ಮಾಜಿ ಸಚಿವ, ಹಾಲಿ ಕಾರವಾರ- ಅಂಕೋಲಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಒಟ್ಟು 130,72,93,005 ರೂ. ಆಸ್ತಿ ಹೊಂದಿದ್ದಾರೆ.

ಸೋಮವಾರ ನಾಮಪತ್ರ ಸಲ್ಲಿಸಿರುವ ಅವರು, ತಮ್ಮ ಆಸ್ತಿ ವಿವರವನ್ನು ಅಫಿಡವಿಟ್ ಮೂಲಕ ಸಲ್ಲಿಸಿದ್ದಾರೆ. ಕಳೆದ 2013 ರ ವಿಧಾನಸಭಾ ಚುನಾವಣೆಯಲ್ಲಿ 16.74 ಕೋಟಿ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು. ಅದರಲ್ಲಿ ಕಳೆದ ಐದು ವರ್ಷಗಳಲ್ಲಿ 113 ಕೋಟಿ ರೂ. ಹೆಚ್ಚಳವಾಗಿದೆ.

ಡಿಕೆಶಿ ಆಸ್ತಿ ಹೆಚ್ಚಾಗಿದ್ದು ಹೇಗೆ? ಅವರೇ ನೀಡಿದ್ದಾರೆ ಉತ್ತರ ಡಿಕೆಶಿ ಆಸ್ತಿ ಹೆಚ್ಚಾಗಿದ್ದು ಹೇಗೆ? ಅವರೇ ನೀಡಿದ್ದಾರೆ ಉತ್ತರ

ಗೋವಾದ ವಿವಿಧೆಡೆಗಳಲ್ಲಿ ಆನಂದ್ ಫ್ಲಾಟ್ ಹೊಂದಿದ್ದಾರೆ. ಬೆಂಗಳೂರಿನ ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಪತ್ನಿಯ ಹೆಸರಿನಲ್ಲಿ ಗೋವಾದ ಕಂಪೆನಿಗಳಲ್ಲಿ ಶೇರ್‌ಗಳನ್ನು ಕೂಡ ಹೊಂದಿದ್ದಾರೆ. ಒಟ್ಟಾರೆ, 65,15,05,576 ರೂ. ಚರಾಸ್ಥಿ, 65,57,87429 ರೂ. ಸ್ಥಿರ ಆಸ್ತಿ ಹೊಂದಿರುವ ಅವರ ಹೆಸರಿನಲ್ಲಿ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ.

Anand Asnotikars property is rise double in 5 years

2013ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಆನಂದ ಅಸ್ನೋಟಿಕರ್ ಭಾರಿ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. ಆನಂತರ ಅವರು ಕ್ಷೇತ್ರದಿಂದಲೇ 'ಕಣ್ಮರೆ'ಯಾಗಿ ಉದ್ಯಮದತ್ತ ವಾಲಿದ್ದರು. ಇತ್ತ ಬಿಜೆಪಿಯ ಯಾವುದೇ ವೇದಿಕೆಯಲ್ಲಾಗಲಿ ಅಥವಾ ಸಂಘಟನೆಯಲ್ಲಾಗಲಿ ಕಾಣಿಸಿಕೊಳ್ಳಲಿಲ್ಲ.

ಚಿಕ್ಕ ವಯಸ್ಸಿನಲ್ಲಿ ರಾಜಕೀಯ ಪ್ರವೇಶ ಮಾಡಿದ ಆನಂದ ಅವರು ಶಾಸಕ ಹಾಗೂ ಸಚಿವರಾಗಿ ಅನೇಕ ಜನಪರ ಯೋಜನೆಗಳನ್ನು ಜಿಲ್ಲೆಗೆ ತಂದಿದ್ದಾರೆ. ಹೀಗಾಗಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು ಎಂದು ಬೆಂಬಲಿಗರು ಅವರ ಮೇಲೆ ಒತ್ತಡ ತಂದಿದ್ದರಿಂದ ಇತ್ತೀಚೆಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಸಮ್ಮುಖದಲ್ಲಿ ಜೆಡಿಎಸ್ ಗೆ ಸೇರ್ಪಡೆಗೊಂಡರು.

English summary
Former BJP Minister Anand Asnotikar's property is rise double in 5 years. He disclosed in filed nomination.He declared total asset Rs 16.74 crore in 2013. But now his total asset 130,72,93,005.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X