ಡಯಾಲಿಸಿಸ್ ಸಿಬ್ಬಂದಿ ಪ್ರತಿಭಟನೆ: ಕಾರವಾರದಲ್ಲಿ ಚಿಕಿತ್ಸೆ ಸಿಗದೆ ವ್ಯಕ್ತಿ ಸಾವು

ಕಾರವಾರ, ಡಿಸೆಂಬರ್‌ 05: ಸಕಾಲದಲ್ಲಿ ಡಯಾಲಿಸಿಸ್ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ವ್ಯಕ್ತಿಯ ಮನೆಗೆ ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ಕಾರವಾರ ತಾಲೂಕಿನ ಗುಂಜಾವತಿ ಗ್ರಾಮದ ಸೈಯದ ಮಹ್ಮದ್ ಗೌಸ್ (58) ಎನ್ನುವವರು ಎರಡು ದಿನಗಳ ಹಿಂದೆ ಡಯಾಲಿಸಿಸ್ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದರು. ಇವರು ಕೆಲ ತಿಂಗಳದಿಂದ ಮುಂಡಗೋಡ ತಾಲೂಕು ಆಸ್ಪತ್ರೆಯ ಡಯಾಲಿಸಿಸ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಮುಂಜಾನೆ ಸೈಯದ್ ಅವರಿಗೆ ದೇಹದಲ್ಲಿ ಸಮಸ್ಯೆ ಆಗಿದ್ದರಿಂದ ಕುಟುಂಬಸ್ಥರು ತಾಲೂಕು ಆಸ್ಪತ್ರೆಗೆ ಬಂದಿದ್ದರು.

A Person Died Due To Without Getting Dialysis treatment In Karwar

ಸಮರ್ಪಕವಾಗಿ ವೇತನ ನೀಡದ ಕಾರಣ ಡಯಾಲಿಸಿಸ್ ವಿಭಾಗದ ಸಿಬ್ಬಂದಿ ರಾಜ್ಯಾದ್ಯಂತ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಬೆಂಬಲಿಸಿ ಕಾರವಾರ ತಾಲೂಕು ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರಾಗಿ ಸೆಂಟರ್‌ನ್ನು ಬಂದ್ ಮಾಡಿದ್ದರು. ಹೀಗಾಗಿ ಸಕಾಲದಲ್ಲಿ ಸೈಯದ್ ಅವರಿಗೆ ಡಯಾಲಿಸಿಸ್ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದರು ಎಂಬ ಆರೋಪವನ್ನು ಕುಟಂಬಸ್ಥರು ಮಾಡಿದ್ದಾರೆ

ಇನ್ನು ವಿಷಯ ತಿಳಿದ ಆರೋಗ್ಯ ಇಲಾಖೆಯ ಜಿಲ್ಲಾ ಆರ್.ಸಿ.ಎಚ್ ಡಾ.ನಟರಾಜ್, ಜಿಲ್ಲಾ ಸರ್ವೇಕ್ಷಣಾ ಆಧಿಕಾರಿ ಡಾ.ಅರ್ಚನಾ ನಾಯಕ, ತಾಲೂಕು ಆರೋಗ್ಯ ಅಧಿಕಾರಿ, ತಾಲೂಕು ಆಸ್ಪತ್ರೆಯ ವೈದ್ಯರಾದ ಡಾ.ನರೇಂದ್ರ ಪವಾರ್, ಡಾ.ಭರತ, ಸತೀಶ ಗೌಡ್ರ, ಡಯಾಲಿಸಿಸ್ ಸಿಬ್ಬಂದಿ ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಸಮುದ್ರ ಮಧ್ಯದಲ್ಲಿ ಬೋಟ್ ಇಂಜಿನ್ ಹಾಳು: ಅಪಾಯದಲ್ಲಿದ್ದ 27 ಮೀನುಗಾರರ ರಕ್ಷಣೆ!

ಕಾರವಾರ: ಹವಮಾನ ವೈಪರಿತ್ಯದಿಂದ ಅರಬ್ಬಿ ಸಮುದ್ರದಲ್ಲಿ ದಾರಿ ತಪ್ಪಿ ಅಪಾಯದಲ್ಲಿದ್ದ 27 ಮೀನುಗಾರರು ಹಾಗೂ ಬೋಟ್‌ನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ಮಂಗಳವಾರ ಪತ್ತೆ ಮಾಡಿದ್ದಾರೆ.

ಗೋವಾದ ಪಣಜಿ ಮೂಲದ ಕ್ರಿಸ್ಟೋ ರೇ ಹೆಸರಿನ ಮೀನುಗಾರಿಕಾ ಬೋಟು ನವೆಂಬರ್ 27ರಿಂದ ನಾಪತ್ತೆಯಾಗಿತ್ತು. ಹವಾಮಾನ ವೈಪರಿತ್ಯದಿಂದ ಇಂಜಿನ್‌ನಲ್ಲಿ ಸಮಸ್ಯೆಯಾಗಿ ದಾರಿ ತಪ್ಪಿದ್ದ ಮೀನುಗಾರಿಕಾ ಬೋಟ್‌ ಅನ್ನು ಅಂಕೋಲಾದ ಬೇಲಿಕೇರಿ ಬಂದರಿನಿಂದ 30 ನಾಟಿಕಲ್ ಮೈಲ್ ದೂರದಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಪತ್ತೆ ಮಾಡಿದ್ದಾರೆ.

ಬೋಟಿನಲ್ಲಿ 27 ಮಂದಿ ಮೀನುಗಾರರು ಇದ್ದು ಅದೇ ಬೋಟ್ ಮೂಲಕ ಎಲ್ಲರನ್ನು ಸುರಕ್ಷಿತವಾಗಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಬೇಲಿಕೇರಿ ಬಂದರಿಗೆ ಕರೆತರಲಾಗುತ್ತಿದೆ. ಬೋಟ್ ಎಂಜಿನ್ ಸಮಸ್ಯೆಯಿಂದಾಗಿ ಮೀನುಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಸದ್ಯ ಕೋಸ್ಟ್‌ಗಾರ್ಡ್ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಪತ್ತೆ ಮಾಡಿ ರಕ್ಷಣೆ ಮಾಡಿದ್ದರಿಂದ ಮೀನುಗಾರರು ನಿರಾಳರಾರಾಗುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+