Get Updates
Get notified of breaking news, exclusive insights, and must-see stories!

ಎರಡು ದಶಕಗಳಿಂದ ತಪ್ಪದ ನರಳಾಟ: ಉ.ಕನ್ನಡದಲ್ಲಿ 1,690 ಮಂದಿ ಎಂಡೋಸಲ್ಫಾನ್ ಪೀಡಿತರು

ಕಾರವಾರ, ಸೆಪ್ಟೆಂಬರ್‌ 30: ಎರಡು ದಶಕಗಳ ಹಿಂದೆ ಎಂಡೋಸಲ್ಫಾನ್ ಔಷಧಿ ಸಿಂಪಡನೆ ಪರಿಣಾಮದಿಂದಾಗಿ ಅಂಗವೈಕಲ್ಯಕ್ಕೊಳಗಾದವರೂ ಇಂದಿಗೂ ನರಕಯಾತನೆಯಲ್ಲಿ ಬದುಕುವಂತಾಗಿದೆ.

ಉತ್ತರ ಕನ್ನಡ ಜಿಲ್ಲೆಯ 6 ತಾಲೂಕುಗಳಲ್ಲಿ ಶೇ.59.4 ರಷ್ಟು ಮಹಿಳೆಯರು ಹಾಗೂ ಶೇ.40.06 ಪುರುಷರು ಸೇರಿ ಒಟ್ಟು 1,690 ಜನರು ತಮ್ಮದಲ್ಲದ ತಪ್ಪಿಗೆ ಇಂದಿಗೂ ತೊಂದರೆಯಲ್ಲಿರುವುದು ಸ್ಕೋಡ್‌ವೆಸ್ ಸಂಸ್ಥೆ ನಡೆಸಿದ ಸಮೀಕ್ಷೆಯೊಂದರಿಂದ ತಿಳಿದುಬಂದಿದೆ.

1,690 People Are Affected By Endosulfan In Uttara Kannada

ಸೊಡ್‌ವೆಸ್ ಸಂಸ್ಥೆ ಜಿಲ್ಲೆಯ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲ, ಶಿರಸಿ ಹಾಗೂ ಸಿದ್ದಾಪುರ ತಾಲೂಕಾ ವ್ಯಾಪ್ತಿಯಲ್ಲಿ ಸರಕಾರ ಗುರುತಿಸಿದ ಎಂಡೋಸಲ್ಫಾನ್ ಪೀಡಿತ ಪ್ರದೇಶಗಳಲ್ಲಿ 2018 ಮೇ ಯಿಂದ ಏಪ್ರಿಲ್ 2019 ರವರೆಗೆ ನಡೆಸಿದ ಸಮೀಕ್ಷೆ ನಡೆಸಿದ್ದು ಇದರ ಸಾಧಕ ಬಾಧಕಗಳು ಹಾಗೂ ಪರಿಹಾರೋಪಾಯದ ವರದಿಯನ್ನು ಸ್ಕೋಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮೂಲಕ ಸರ್ಕಾರರಕ್ಕೆ ಸಲ್ಲಿಸಿದ್ದಾರೆ.

ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಬಾಧಿತರಲ್ಲಿ ಮಾನಸಿಕ ಕಾಯಿಲೆ, ನಿರ್ನಾಳ ಗ್ರಂಥಿ, ಮಕ್ಕಳ ಹೃದಯ ಸಂಬಂಧಿ, ಕಣ್ಣು, ಮೂಳೆ, ನರ ರೋಗ ಹಾಗೂ ಗರ್ಭೀಣಿ ಸ್ತ್ರೀಯರಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಜಿಲ್ಲೆಯ ಶೇ. 80ರಷ್ಟು ಎಂಡೋಸಲ್ಫಾನ್ ಬಾಧಿತರು ವೈದ್ಯಕೀಯ ಚಿಕಿತ್ಸೆಗಾಗಿ ಸರ್ಕಾರದಿಂದ ಗುರುತಿಸಿದ ಉಡುಪಿ ಮತ್ತು ಮಂಗಳೂರಿನ ಆಸ್ಪತ್ರೆಗಳಿಗೆ ತೆರಳುತ್ತಿಲ್ಲ.

1,690 People Are Affected By Endosulfan In Uttara Kannada

ಎಂಡೋಸಲಾನ್ ಬಾಧಿತರಲ್ಲದೇ ಕುಟುಂಬದ ಹೆಚ್ಚಿನ ಸದಸ್ಯರಲ್ಲಿಯೂ ಕೂಡ ಮನೋದೈಹಿಕ ಕಾಯಿಲೆಗಳು ಕಂಡುಬಂದಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ರೋಗಕ್ಕೆ ತುತ್ತಾದ ಕುಟುಂಬದವರು ಆದಾಯದ ಶೇ.65ರಷ್ಟು ಹಣವನ್ನು ವೈದ್ಯಕೀಯ ಸೇವೆಗೆ ನೀಡುತ್ತಿದ್ದಾರೆ. ಸುಮಾರು ಶೇ.60ರಷ್ಟು ಜನರಿಗೆ ನಿರ್ದಿಷ್ಟ ದುಡಿಮೆ ಇಲ್ಲ. ಇವರನ್ನು ಸಾಮಾನ್ಯ ವಿಶೇಷ ಚೇತನರಂತೆ ನೋಡಲಾಗುತ್ತಿದೆ. ಹೆಚ್ಚಿನ ಎಂಡೋಸಲಾನ ಬಾಧಿತರು ದೂರದ ಪ್ರದೇಶಗಳಲ್ಲಿ ವಾಸವಾಗಿದ್ದಾರೆ. ಎಂಡೋಸಲ್ಫಾನ ಬಾಧಿತರ ಕುಟುಂಬದವರಲ್ಲಿ ವಯಕ್ತಿಕ ಶುಚಿತ್ವದ ಕೊರತೆಯಿದೆ ಎಂದು ಉಲ್ಲೇಖಿಸಿದ್ದಾರೆ.

ಇನ್ನು ಎಂಡೋಸಲ್ಫಾನ್ ಬಾಧಿತರಿಗೆ ಪುನರ್‌ವಸತಿ ಮತ್ತು ವ್ಯವಸ್ಥೆಗಾಗಿ ಸರಕಾರದ ನೆರವಿನ ಅಗತ್ಯ ಇದೆ. ಶೇ.60ಕ್ಕಿಂತ ಹೆಚ್ಚು ಬಾಧೆಗೊಳಪಟ್ಟ ವ್ಯಕ್ತಿಗಳಿಗೆ 24*7 ಮಾದರಿಯ ನಿಗಾ ಕೇಂದ್ರ ನಿರ್ಮಿಸುವುದು. ಎಂಡೋಬಾಧಿತ ಪದೇಶಗಳಲ್ಲಿ ಗರ್ಭಧಾರಣೆ ಪೂರ್ವದಲ್ಲೇ ದಂಪತಿಗೆ ಮುಂಜಾಗೃತೆ, ಸಮಾಲೋಚನೆ ಮೂಡಿಸುವುದು. ಎಂಡೋಬಾಧಿತ ಪ್ರದೇಶಗಳಲ್ಲಿ ಜನಿಸುವ ಎಲ್ಲಾ ಮಕ್ಕಳ ಮಾಹಿತಿಯನ್ನು ಸಂಬಂಧ ಪಟ್ಟ ಇಲಾಖೆಗಳಲ್ಲಿ ಪ್ರತ್ಯೇಕವಾಗಿ ನಿರ್ವಹಿಸಬೇಕು.

ನಿರಂತರ ವೈದ್ಯಕೀಯ ತಪಾಸಣೆ ಜೊತೆಗೆ ಸೌಲಭ್ಯಗಳನ್ನು ಸ್ಥಳೀಯವಾಗಿಯೇ ಒದಗಿಸುವಂತಾಗಬೇಕು. ಅಂಗವಿಕಲ ಸ್ನೇಹಿ ಸಲಕರಣೆಗಳನ್ನು ಒದಗಿಸಬೇಕು. ಎಂಡೋಬಾಧಿತರ ಬಳಕೆಗೆ ಅನುಕೂಲವಾಗುವಂತಹ ಅಂಗವಿಕಲ ಸ್ನೇಹಿ ಶೌಚಾಲಯ, ಸ್ನಾನಗೃಹ ಹಾಗೂ ನೀರಿನ ವ್ಯವಸ್ಥೆ ಸೌಲಭ್ಯ ಒದಗಿಸಬೇಕು ಎಂದು ವರದಿಯಲ್ಲಿ ಕೋರಿದ್ದಾರೆ.

ಇನ್ನು 38.40 ಕ್ಕಿಂತ ಬಾಧೆಗೊಳಪಟ್ಟ ಬಾಧಿತರಿಗೆ ಅಪರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿರುವ ಪಾಲಕರ ಆದಾಯ ಹೆಚ್ಚಿಸಲು ಉದ್ಯೋಗಾವಕಾಶ ಕಲ್ಪಿಸಬೇಕು. ವಿವಿಧ ರೀತಿಯ ಕೌಶಲ್ಯ ತರಬೇತಿ ನೀಡುವುದು ಹಾಗೂ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯವನ್ನು ಒದಗಿಸಬೇಕು ಎಂಡೋ ಬಾಧಿತರನ್ನು ಯೋಜನಾಬಾಧಿತ ಕುಟುಂಬಗಳೆಂದು ಪರಿಗಣಿಸಿ ಸರಕಾರಿ ಉದ್ಯೋಗ ಸೌಲಭ್ಯಗಳನ್ನು ಒದಗಿಸಬೇಕು.

ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದ ಎಂಡೋಬಾಧಿತರ ಸೌಕರ್ಯಗಳ ಸಮಿತಿ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಬೇಕು. ಬಾಧಿತ ಪ್ರದೇಶಗಳಲ್ಲಿನ ಮಣ್ಣು ಮತ್ತು ನೀರಿನ ಪರೀಕ್ಷೆ ಹಾಗೂ ಅಧ್ಯಯನ ನಡೆಸಿ ವಿಷಕಾರಿ ಅಂಶಗಳನ್ನು ತೆಗೆದುಹಾಕಲು ಅಗತ್ಯ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಸಮೀಕ್ಷೆಯ ಪರಿಹಾರೋಪಾಯದ ಬಗ್ಗೆ ವರದಿ ನೀಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಭರವಸೆ

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಜಿಲ್ಲೆಯಲ್ಲಿ 1741 ಎಂಡೋಸಲ್ಫಾನ್ ಪೀಡಿತರು ಇದ್ದಾರೆ. 2014ರ ನಂತರ ಅವರ ಮರು ಸಮೀಕ್ಷೆ ನಡೆದಿಲ್ಲ. ಅವರಿಗೆ ಈ ಹಿಂದೆ ಇದ್ದ ಸಂಚಾರಿ ಆಸ್ಪತ್ರೆ ಸೌಲಭ್ಯ ಸ್ಥಗಿತವಾಗಿದೆ.

ನ್ಯಾಯಾಲಯದ ಆದೇಶವಿದ್ದರೂ ಅಂಕವಿಕಲ ವೇತನ ಬಿಟ್ಟರೆ ಬೇರೆ ಸೌಲಭ್ಯ ಸಿಗುತ್ತಿಲ್ಲ. ಅವರು ಕಟ್ಟಕಡೆಯ ವ್ಯಕ್ತಿಗಳಾಗಿದ್ದು, ಅವರಿಗೆ ಜಿಲ್ಲೆಯಲ್ಲಿ ಪ್ರತ್ಯೇಕ ಆಸ್ಪತ್ರೆ ತೆರೆಯುವ ಮತ್ತು ಅಗತ್ಯ ಸೌಲಭ್ಯ ಕಲ್ಪಿಸುವ ಬಗ್ಗೆ ಶೀಘ್ರ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಗೇರು ಗಿಡಕ್ಕೆ ಸಿಂಪಡಿಸಿದ್ದ ಔಷಧಿ

ಕಳೆದ ಎರಡು ದಶಕಗಳ ಹಿಂದೆ ಗೇರು ಮರಗಳಿಗೆ ಬಾಧಿಸಿದ್ದ ರೋಗದ ನಿರ್ಮೂಲನೆಗೆ ಹೆಲಿಕಾಪ್ಟರ್ ಮೂಲಕ ಉಡುಪಿ, ಮಂಗಳೂರು, ಉತ್ತರಕನ್ನಡ ಭಾಗದ ಗೇರು ಮರಗಳಿರುವ ಪ್ರದೇಶದಲ್ಲಿ ಎಂಡೋಸಲ್ಫಾನ್ ಔಷಧಿ ಸಿಂಪಡಿಸಲಾಗಿತ್ತು. ಆದರೆ ಇದು ಗೇರು ಗಿಡದ ರೋಗ ವಾಸಿಗಿಂತ ಇದರ ವಿಷ ವರ್ತುಲ ಮನುಷ್ಯರ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಪರಿಣಾಮ ಈ ವಿಷದಿಂದಾಗಿ ಹುಟುವ ಮಕ್ಕಳಲ್ಲಿ ಅಂಗವೈಕಲ್ಯತೆ, ಬುದ್ದಿ ಮಾಂದ್ಯಂತೆ ಸೇರಿದಂತೆ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳೊತ್ತೊಡಗಿತ್ತು. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಈವರೆಗೆ ಸುಮಾರು ಎರಡು ಸಾವಿರ ಮಂದಿ ಎಂಡೋಸಲ್ಪಾನ್ ಪೀಡಿತರಾಗಿದ್ದಾರೆ. ಆದರೆ ಉತ್ತರ ಕನ್ನಡದಲ್ಲಿ 2013-14ನೇ ಸಾಲಿನಲ್ಲಿ ಸಮೀಕ್ಷೆ ನಡೆಸಿ ಕೇವಲ ಶೇ.4ರಷ್ಟು ಪಿಡಿತರನ್ನು ಗುರುತಿಸಿ ಸೌಲಭ್ಯ ಕಲ್ಪಿಸಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+