ನಗರಸಭೆ ವಾಹನಕ್ಕೆ ಸಿಕ್ಕಿ ಒಂದೂವರೆ ವರ್ಷದ ಮಗು ಸಾವು

Posted By: ಡಿ.ಪಿ.ನಾಯ್ಕ
Subscribe to Oneindia Kannada

ಕಾರವಾರ, ನವೆಂಬರ್ 29: ನಗರಸಭೆಯ ಕಸ ಸಂಗ್ರಹಣೆ ವಾಹನಕ್ಕೆ ಸಿಲುಕಿ ಕಾರವಾರದ ದಳವಿವಾಡಾದ ಶಂಕರ ಮಂಜುನಾಥ ಗುಡ್ಡಣ್ಣನವರ್ ಹೆಸರಿನ ಒಂದು ವರ್ಷ ಆರು ತಿಂಗಳ ಮಗು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಮಂಗಳವಾರ (ನವೆಂಬರ್ 29) ನಡೆದಿದೆ.

ಚಿತ್ರದುರ್ಗ : ಭೀಕರ ಅಪಘಾತ, 6 ಸಾವು, ನಾಲ್ವರ ಸ್ಥಿತಿ ಗಂಭೀರ

ಪ್ರತಿದಿನ ಕಸ ಸಂಗ್ರಹಣೆ ವಾಹನ ಮನೆಯ ಬಳಿ ಬಂದಾಗ ಶಂಕರ್ ಓಡಿಬಂದು ವಾಹನದ ಬಳಿ ನಿಲ್ಲುತ್ತಿದ್ದ. ಮಂಗಳವಾರ ಮನೆಯ ಬಳಿ ಬೆಳಿಗ್ಗೆ ಆಟವಾಡುತ್ತಿದ್ದ ಮಗು ಎಂದಿನಂತೆ ವಾಹನದ ಹಿಂಬಾಗದಲ್ಲಿ ಹೋಗಿ ನಿಂತಿತ್ತು. ಈ ವೇಳೆ ಅದರ ಹಿಂಭಾಗದ ಫಲಕ ಆಕಸ್ಮಿಕವಾಗಿ ಮಗುವಿನ ತಲೆಯ ಮೇಲೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಶಂಕರ್ ಮೃತಪಟ್ಟಿದ್ದಾನೆ ಎಂದು ಮೃತ ಮಗುವಿನ ತಂದೆ ಮಂಜುನಾಥ ತಿಳಿಸಿದರು.

1.5 year child died after meting with accident by municipality van

ಮೂಲತಃ ರಾಣೆಬೆನ್ನೂರಿನವರಾದ ಮಂಜುನಾಥ ಸುಮಾರು 6 ತಿಂಗಳ ಹಿಂದೆ ಉದ್ಯೋಗಕ್ಕೆಂದು ಇಲ್ಲಿಗೆ ಬಂದು ಸೈಕಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ದುರದೃಷ್ಟವೆಂದರೆ ಮಂಗಳವಾರ ತಮ್ಮ 2ನೇ ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿದ್ದ ದಂಪತಿಗೆ ಮಗುವಿನ ಸಾವು ಸಿಡಿಲು ಬಡಿದಂತಾಗಿದೆ. ಅಲ್ಲದೆ ಮಗುವಿನ ತಾಯಿಯು ತುಂಬು ಗರ್ಭಿಣಿಯಾಗಿದ್ದು, ಈ ಸಂದರ್ಭದಲ್ಲಿಯೇ ಇಂಥ ಘಟನೆ ನಡೆದಿರುವುದು ಎಲ್ಲರ ಮನ ಕಲಕಿದೆ.

ಕಲಬುರಗಿ: ಜಾತ್ರೆಗೆಂದು ಹೊರಟವರು ಮಸಣ ಸೇರಿದರು

ಮಧ್ಯಾಹ್ನದ ವೇಳೆ ರಾಣೆಬೆನ್ನೂರಿನಿಂದ ಕುಟುಂಬಸ್ಥರು ಶವವನ್ನು ಒಯ್ಯಲು ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬಳಿಕ ಅಂಬ್ಯುಲೆನ್ಸ್ ಮೂಲಕ ಊರಿಗೆ ಸಾಗಿಸಲಾಯಿತು.

1.5 year child died after meting with accident by municipality van

ನಗರಸಭೆಯಿಂದ ಪರಿಹಾರ ವಿತರಣೆ
ನಗರಸಭೆಯ ಕಸವಿಲೇವಾರಿ ವಾಹನಕ್ಕೆ ಸಿಲುಕಿ ಮೃತಪಟ್ಟ ಹಿನ್ನೆಲೆಯಲ್ಲಿ ನಗರಸಭೆಯ ವತಿಯಿಂದ ಮೃತರ ಕುಟುಂಬಕ್ಕೆ 50 ಸಾವಿರ ರೂಪಾಯಿ ಚೆಕ್ ಹಾಗೂ 10 ಸಾವಿರ ರೂಪಾಯಿ ನಗದು ಸೇರಿ ಒಟ್ಟು 60 ಸಾವಿರ ಪರಿಹಾರವನ್ನು ನೀಡಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a tragic incident a One and half year old boy died when backside door of garbage vehicle fell on the head. Most disheartening thing is it was 2nd wedding anniversary of boy's parents. The incident happened in Karwar district on Tuesday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ