Yuva Nidhi Scheme 2025: ಯುವನಿಧಿ ಯೋಜನೆಯಲ್ಲಿ ಮಹತ್ವದ ಬದಲಾವಣೆ, ಹೊಸ ನಿಯಮವೇನು ?
Yuva Nidhi Scheme 2025: ಕರ್ನಾಟಕ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಯುವನಿಧಿ ಯೋಜನೆಯೂ ಒಂದಾಗಿದೆ. ಇದೀಗ ಕರ್ನಾಟಕ ಸರ್ಕಾರವು ಯುವನಿಧಿ ಯೋಜನೆಯಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಯುವನಿಧಿ ಯೋಜನೆ; ಫಲಾನುಭವಿಗಳ ಸ್ವಯಂ ಘೋಷಣೆ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಯುವನಿಧಿ' ಯೋಜನೆಯ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳು ತಮ್ಮ ಸ್ವಯಂ ಘೋಷಣೆಯನ್ನು ತ್ರೈಮಾಸಿಕ ಬದಲಾಗಿ ಇನ್ನು ಮುಂದೆ ಪ್ರತಿ ತಿಂಗಳು ಧೃಢೀಕರಿಸಿಕೊಳ್ಳಬೇಕು.

ಯುವನಿಧಿ ಯೋಜನೆಯ ಡಿಬಿಟಿಯನ್ನು ಸತತ 6 ತಿಂಗಳು ಪಡೆಯುತ್ತಿರುವ ಫಲಾನುಭವಿಗಳು ತರಬೇತಿಯನ್ನು ಪಡೆಯಲು https://www.kaushalkar.com ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಾಸಿಕೊಳ್ಳಬೇಕು. ನೋಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ಯುವನಿಧಿ ಯೋಜನೆಯ ಡಿ.ಬಿ.ಟಿಯನ್ನು ನಿಲ್ಲಿಸಲಾಗುವುದಿಲ್ಲ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೂಲಕ ಪ್ರತಿ ತಿಂಗಳೂ ಯುವನಿಧಿ ಯೋಜನೆಯ ಫಲಾನುಭವಿಗಳು ಸ್ವಯಂ ಘೋಷಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ?
ಇನ್ನು ಯುವನಿಧಿ ಯೋಜನೆಗೆ ನೀವು ಅರ್ಜಿ ಸಲ್ಲಿಸುವುದಕ್ಕೆ ಇಚ್ಛಿಸಿದಲ್ಲಿ ನೀವು ಮೊದಲು ಕರ್ನಾಟಕದ ನಿವಾಸಿಯಾಗಿರಬೇಕು. ನಿರುದ್ಯೋಗಿ ಆಗಿದ್ದು, ಉನ್ನತ ಶಿಕ್ಷಣಕ್ಕಾಗಿ ಈ ಸೌಲಭ್ಯ ಇರುವುದಿಲ್ಲ. ಈ ಯೋಜನೆಗೆ ಅರ್ಜಿ ಸಲ್ಲಿಸುವುದಿದ್ದರೆ ನಿಮ್ಮ ಹೆಸರಿನಲ್ಲಿ ಅಥವಾ ನೀವು ಇಎಸ್‌ಐ ಅಥವಾ ಪಿಎಫ್ ಸೌಲಭ್ಯಗಳನ್ನು ಪಡೆಯುತ್ತಿರಬಾರದು.
ಆಧಾರ್ ಕಾರ್ಡ್ ಇ ಕೆವೈಸಿ: ಇನ್ನು ಎರಡನೇ ಹಂತವಾಗಿ ನೀವು ಆಧಾರ್ ಕಾರ್ಡ್ ಇ - ಕೆವೈಸಿ ಮಾಡಿಸಬೇಕು. ಇದು ನೀವು ಕರ್ನಾಟಕದ ನಿವಾಸಿ ಹಾಗೂ ನಿಮ್ಮ ಹೆಸರು, ವಿಳಾಸ ಸೇರಿದಂತೆ ಪ್ರಾಥಮಿಕ ಮಾಹಿತಿಯನ್ನು ಖಚಿತಪಡಿಸುತ್ತದೆ.
ಶೈಕ್ಷಣಿಕ ಮಾಹಿತಿ ವಿವರಗಳು: ಮೂರನೇ ಹಂತದಲ್ಲಿ ನಿಮ್ಮ ಶೈಕ್ಷಣಿಕ ದಾಖಲೆಗಳನ್ನು ಇಲ್ಲಿ ಸಲ್ಲಿಕೆ ಮಾಡಬೇಕಾಗುತ್ತದೆ. ನೀವು ವಿದ್ಯಾಭ್ಯಾಸ ಮಾಡುತ್ತಿರುವ ವಿಶ್ವ ವಿದ್ಯಾಲಯ, ಕಾಲೇ ಜು ವಿವರವನ್ನು ನಮೂದಿಸಬೇಕು. ಅಲ್ಲದೇ Unique Identification Number / ರಿಜಿಸ್ಟರ್ ನಂಬರ್ ಸಂಖ್ಯೆ ನಮೂದಿಸಬೇಕು.
ಅಂತಿಮವಾಗಿ ಎಸ್‌ಎಂಎಸ್ ಅಥವಾ ಇ - ಮೇಲ್ ಮೂಲಕ ಒಟಿಪಿ ನಮೂದಿಸಿ. ಈ ಮಾಹಿತಿಯನ್ನು ದೃಢೀಕರಿಸುತ್ತೇನೆ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.












Click it and Unblock the Notifications