ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗ ತರಬೇತಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 18 : ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಇನ್ನು ಮುಂದೆ ಯೋಗ ಮತ್ತು ಏರೋಬಿಕ್ಸ್ ಪರಿಚಯಿಸಲಾಗುತ್ತದೆ. ವಿದ್ಯಾರ್ಥಿಗಳ ದೈಹಿಕ ಶಕ್ತಿ ಹೆಚ್ಚಿಸಲು ಇಂತಹ ಕಾರ್ಯಕ್ರಮ ಜಾರಿಗೆ ತರಲಾಗುತ್ತದೆ.

ಪ್ರತಿದಿನ ಮುಂಜಾನೆ ಸುಮಾರು 15 ನಿಮಿಷಗಳ ಕಾಲ ಯೋಗ, ಏರೋಬಿಕ್ಸ್ ತರಬೇತಿ ನೀಡಲು ಪ್ರಸ್ತಾವನೆ ಸಿದ್ದವಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಸಚಿವ ಜೊತೆ ಈ ಬಗ್ಗೆ ಚರ್ಚೆ ನಡೆಸಿ, ಅಂತಿಮ ಆದೇಶವನ್ನು ಹೊರಡಿಸಲಿದ್ದಾರೆ.

ಶಾಲಾ-ಕಾಲೇಜುಗಳಲ್ಲಿ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ: ಸಿಐಡಿಗೆ ಪತ್ರಶಾಲಾ-ಕಾಲೇಜುಗಳಲ್ಲಿ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ: ಸಿಐಡಿಗೆ ಪತ್ರ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಅವರು ಈ ಕುರಿತು ಹೇಳಿಕೆ ನೀಡಿದ್ದು, 'ಮಕ್ಕಳನ್ನು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಯೋಜಿಸಲಾಗಿದೆ. ಅವರನ್ನು ದೈಹಿಕವಾಗಿ ಸದೃಢವಾಗಿ ಮಾಡಲು ಯೋಗ ಪರಿಚಯಿಸಲಾಗುತ್ತದೆ' ಎಂದು ಹೇಳಿದ್ದಾರೆ.

ಶಾಲೆಗಳ ದಸರಾ ರಜೆ ಕಡಿತ : 14 ದಿನ ಮಾತ್ರ ರಜೆ!ಶಾಲೆಗಳ ದಸರಾ ರಜೆ ಕಡಿತ : 14 ದಿನ ಮಾತ್ರ ರಜೆ!

Yoga and aerobics in govt schools soon

ಶಾಲೆಯಲ್ಲಿ ಮಕ್ಕಳಿಗೆ ಯೋಗ ತರಗತಿ ನಡೆಸಲು ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ. ಯೋಗ ಮತ್ತು ಏರೋಬಿಕ್ಸ್ ಜೊತೆ ಶಾಲೆಗಳಲ್ಲಿ ಶಾಸ್ತ್ರೀಯ, ಕಥಕ್ ಮುಂತಾದ ನೃತ್ಯದ ತರಗತಿಗಳನ್ನು ಆರಂಭಿಸಲು ಇಲಾಖೆ ಚಿಂತನೆ ನಡೆಸುತ್ತಿದೆ.

ಬಡ ವಿದ್ಯಾರ್ಥಿಗಳಿಗೆ ನೆರವಾಗಲು ಸರ್ಕಾರಿ ಶಾಲೆಯ ಮಾದರಿ ಪದ್ಧತಿಬಡ ವಿದ್ಯಾರ್ಥಿಗಳಿಗೆ ನೆರವಾಗಲು ಸರ್ಕಾರಿ ಶಾಲೆಯ ಮಾದರಿ ಪದ್ಧತಿ

ಶಾಲಾ ಮಕ್ಕಳಿಗೆ ಯೋಗ ಕಲಿಸುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಹ ಒಪ್ಪಿಗೆ ನೀಡಿದ್ದಾರೆ. 'ಯೋಗ ಕಲಿಸುವ ಪ್ರಸ್ತಾವನೆಯನ್ನು ಅವರೇ ಮೊದಲು ಇಲಾಖೆಯ ಅಧಿಕಾರಿಗೆ ತಿಳಿಸಿದ್ದರು' ಎಂದು ಸಚಿವ ಮಹೇಶ್ ಹೇಳಿದ್ದಾರೆ.

English summary
Karnataka Department of Primary and Secondary Education has decided to introduce yoga and aerobics during at least for the first 15 minutes in the morning every day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X