ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದೇನು ಗ್ರಹಗತಿಯೋ? ಮತ್ತೆ ಯಡಿಯೂರಪ್ಪನವರಿಗೆ ಆಷಾಢ ಸಂಕಷ್ಟ

|
Google Oneindia Kannada News

ಹಲವು ದಿನಗಳ ಊಹಾಪೋಹಗಳಿಗೆ ಕೊನೆಗೂ ತೆರೆಬಿದ್ದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪನವರು ರಾಜೀನಾಮೆ ನೀಡಿದ್ದಾರೆ. ಪದತ್ಯಾಗ ಮಾಡಲು ವರಿಷ್ಠರ ಒತ್ತಡ ಇರಲಿಲ್ಲ ಎಂದು ಬಿಎಸ್ವೈ ಹೇಳಿದ್ದಾರೆ.

ಯಡಿಯೂರಪ್ಪನವರೇ ತಮ್ಮ ವಿದಾಯದ ಭಾಷಣದಲ್ಲಿ ಹೇಳಿದಂತೆ, ರಾಜ್ಯದಲ್ಲಿ ಬಿಜೆಪಿಯಲ್ಲಿ ಕಟ್ಟಿ ಬೆಳೆಸಲು ಅವರ ಪರಿಶ್ರಮ ಅಷ್ಟಿಷ್ಟಲ್ಲ ಎನ್ನುವುದು ಎಲ್ಲರೂ ಒಪ್ಪಿಕೊಳ್ಳುವ ವಿಚಾರ.

Karnataka BJP Crisis Live Updates: ಮುಂದಿನ ಸಿಎಂ ಆಯ್ಕೆಯಲ್ಲಿ ನನ್ನ ಪಾತ್ರ ಇಲ್ಲ- ಯಡಿಯೂರಪ್ಪKarnataka BJP Crisis Live Updates: ಮುಂದಿನ ಸಿಎಂ ಆಯ್ಕೆಯಲ್ಲಿ ನನ್ನ ಪಾತ್ರ ಇಲ್ಲ- ಯಡಿಯೂರಪ್ಪ

ರಾಜ್ಯದ ಪ್ರಶ್ನಾತೀತ ನಾಯಕರಾಗಿರುವ ಯಡಿಯೂರಪ್ಪನವರು, ನಾಲ್ಕು ಬಾರಿ ಮುಖ್ಯಮಂತ್ರಿಯಾದರೂ, ಒಮ್ಮೆಯೂ ಪೂರ್ಣಾವಧಿ ಪೂರೈಸಲು ಅವರಿಂದ ಸಾಧ್ಯವಾಗಲಿಲ್ಲ. ಈ ಬಾರಿಯೂ ಎರಡು ವರ್ಷ ಅವಧಿಯನ್ನು ಮಾತ್ರ ಅವರು ಮುಗಿಸಿದ್ದಾರೆ.

 ರಾಜೀನಾಮೆ ಸಲ್ಲಿಕೆ ನಂತರ ಯಡಿಯೂರಪ್ಪ ಆಡಿದ ಮೊದಲ ಮಾತು... ರಾಜೀನಾಮೆ ಸಲ್ಲಿಕೆ ನಂತರ ಯಡಿಯೂರಪ್ಪ ಆಡಿದ ಮೊದಲ ಮಾತು...

ಇದಕ್ಕೆ ಅವರ ಸ್ವಯಂಕೃತ ಅಪರಾಧ ಕಾರಣವೋ, ಗ್ರಹಗತಿಗಳ ಪ್ರಭಾವವೋ.. ಒಟ್ಟಿನಲ್ಲಿ ಯಡಿಯೂರಪ್ಪ ಮತ್ತೆ ರಾಜೀನಾಮೆ ನೀಡಬೇಕಾಗಿ ಬಂದಿದೆ, ಅದೂ ಆಷಾಢ ಮಾಸದಲ್ಲಿ. ಹೀಗಾಗುತ್ತಿರುವುದು ಇದು ಎರಡನೇ ಬಾರಿ.

 ಸಾಮಾನ್ಯವಾಗಿ ಆಷಾಢದಲ್ಲಿ ಒಳ್ಳೆಯ ಕೆಲಸವನ್ನು ಮಾಡುವ ಕ್ರಮಗಳಿಲ್ಲ

ಸಾಮಾನ್ಯವಾಗಿ ಆಷಾಢದಲ್ಲಿ ಒಳ್ಳೆಯ ಕೆಲಸವನ್ನು ಮಾಡುವ ಕ್ರಮಗಳಿಲ್ಲ

ಸಾಮಾನ್ಯವಾಗಿ ಆಷಾಢದಲ್ಲಿ ಒಳ್ಳೆಯ ಕೆಲಸವನ್ನು ಮಾಡುವ ಕ್ರಮಗಳಿಲ್ಲ, ಇದು ಅನಾದಿ ಕಾಲದಿಂದಲೂ ಆಸ್ತಿಕರು ನಂಬಿಕೊಂಡಂತಹ ಪದ್ದತಿ. ಆದರೂ, ತಮ್ಮ ವೃತ್ತಿ ಜೀವನದ ಪ್ರಮುಖ ನಿರ್ಧಾರವನ್ನು ಯಡಿಯೂರಪ್ಪನವರು ತೆಗೆದುಕೊಳ್ಳಬೇಕಾಗಿ ಬಂದಿದೆ. ಇದಕ್ಕೆ ಅವರ ಮೇಲಿದ್ದ ಒತ್ತಡ ಕಾರಣವೋ.. ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಸಿಗಬಹುದು.

 ಈ ಬಾರಿಯ ಆಷಾಢ ಮಾಸ ಮುಗಿಯಲು ಆಗಸ್ಟ್ ಎಂಟರವರೆಗೆ ಕಾಯಬೇಕಿದೆ

ಈ ಬಾರಿಯ ಆಷಾಢ ಮಾಸ ಮುಗಿಯಲು ಆಗಸ್ಟ್ ಎಂಟರವರೆಗೆ ಕಾಯಬೇಕಿದೆ

ಈ ಬಾರಿಯ ಆಷಾಢ ಮಾಸ ಮುಗಿಯಲು ಆಗಸ್ಟ್ ಎಂಟರವರೆಗೆ ಕಾಯಬೇಕಿದೆ. ಆಷಾಢ ಶುದ್ದ ತೃತೀಯಾ ದಿನದಂದು ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಇನ್ನೆರಡು ವಾರದ ಸಮಯಾವಕಾಶ ನೀಡಲು ಬಿಜೆಪಿ ಹೈಕಮಾಂಡ್ ನಿರಾಕರಿಸಿತೇ ಎನ್ನುವುದಿಲ್ಲಿ ಪ್ರಶ್ನೆ. ಯಾಕೆಂದರೆ, ಯಡಿಯೂರಪ್ಪನವರು ಇದರಲೆಲ್ಲಾ ಬಹಳ ನಂಬಿಕೆಯನ್ನು ಇಟ್ಟುಕೊಂಡವರು.

 ಯಡಿಯೂರಪ್ಪನವರು ಹಿಂದೆ ರಾಜೀನಾಮೆ ನೀಡಿದ ಸಮಯ

ಯಡಿಯೂರಪ್ಪನವರು ಹಿಂದೆ ರಾಜೀನಾಮೆ ನೀಡಿದ ಸಮಯ

ಯಡಿಯೂರಪ್ಪನವರು ಹಿಂದೆ ರಾಜೀನಾಮೆ ನೀಡಿದ ಸಮಯವನ್ನು ನೋಡಿದಾಗ, ಅವರಿಗೆ ಆಷಾಢ ಸಂಕಷ್ಟವಿದೆಯೇ ಎನ್ನುವ ಪ್ರಶ್ನೆ ಕಾಡುವುದು ಸಹಜ. ಯಾಕೆಂದರೆ, ಕಳೆದ ಬಾರಿ ಜುಲೈ 31, 2011ರಂದು ಯಡಿಯೂರಪ್ಪನವರು ರಾಜೀನಾಮೆ ನೀಡಿದ್ದರು. ಅಂದರೆ, ಆಷಾಢ ಮುಗಿದು ಒಂದು ದಿನದ ನಂತರ ರಾಜೀನಾಮೆಯನ್ನು ಒಗಾಯಿಸಿದ್ದರು.

Recommended Video

BSY ನೋವಿನಿಂದ ಕಣ್ಣೀರು ಹಾಕಿದ್ದಕ್ಕೆ ಬಿಜೆಪಿಗಿಂತ ಹೆಚ್ಚು ಮರುಗಿದ ಕಾಂಗ್ರೆಸ್ | Oneindia Kannada
 2011ರ ಜುಲೈ 28ಕ್ಕೆ ರಾಜೀನಾಮೆ ನೀಡಲು ಹೈಕಮಾಂಡ್ ಅವರಿಗೆ ಸೂಚಿಸಿತ್ತು

2011ರ ಜುಲೈ 28ಕ್ಕೆ ರಾಜೀನಾಮೆ ನೀಡಲು ಹೈಕಮಾಂಡ್ ಅವರಿಗೆ ಸೂಚಿಸಿತ್ತು

ಕಳೆದ ಬಾರಿ ಅಂದರೆ 2011ರ ಜುಲೈ 28ಕ್ಕೆ ರಾಜೀನಾಮೆ ನೀಡಲು ಹೈಕಮಾಂಡ್ ಅವರಿಗೆ ಸೂಚಿಸಿತ್ತು. ಲೋಕಾಯುಕ್ತ ವರದಿ ಹಿನ್ನಲೆಯಲ್ಲಿ ರಿಸೈನ್ ಮಾಡುವಂತೆ ವರಿಷ್ಠರು ಸೂಚಿಸಿದ್ದರು. ಆಗ ಆಷಾಢ ಮುಗಿದ ಕೂಡಲೇ ರಾಜೀನಾಮೆ ಕೊಡುತ್ತೇನೆ ಎಂದ ಯಡಿಯೂರಪ್ಪ, ಜುಲೈ 30ರಂದು ರಾಜೀನಾಮೆ ನೀಡಿದ್ದರು. ಈಗಲೂ ಆಷಾಢ ಮಾಸದಲ್ಲೇ ರಾಜೀನಾಮೆಯ ನಿರ್ಧಾರಕ್ಕೆ ಬಿಎಸ್ವೈ ಬಂದಿದ್ದಾರೆ.

English summary
BS Yediyurappa Resigned as CM of Karnataka: Yediyurappa is the victim of Ashada and Planetary Changes. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X