ಕುಮಟಳ್ಳಿ ಅದೇನು ಪಾಪ ಮಾಡಿದ್ರೋ, ಬಿಜೆಪಿ ಕಚೇರಿ ಕಸ ಗುಡ್ಸೋದೆ ಪಕ್ಕಾ ಆಯ್ತಾ?
Recommended Video
ಕ್ಷಣಕ್ಕೊಂದು ತಿರುವು ಕೊಡುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಂತೆ, ಯಡಿಯೂರಪ್ಪನವರ ಸಚಿವ ಸಂಪುಟ ವಿಸ್ತರಣೆಯ ಸರ್ಕಸ್, ಹತ್ತು ಶಾಸಕರು ಪ್ರಮಾಣವಚನ ಸ್ವೀಕರಿಸುವ ಮೂಲಕ ಒಂದು ಹಂತಕ್ಕೆ ಬಂದು ನಿಂತಿದೆ.
ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬರಲು ಕಾರಣರಾದ ಹದಿನೇಳು ಅನರ್ಹರಲ್ಲಿ, ಜನಾದೇಶದಲ್ಲಿ ಅರ್ಹಗೊಂಡ ಹನ್ನೆರಡು ಶಾಸಕರಲ್ಲಿ, ಹತ್ತು ಮಂದಿ ಇಂದು (ಫೆ 6) ಸಚಿವರಾಗಿದ್ದಾರೆ. ಅಲ್ಲಿಗೆ, ಒಂದು ಹಂತಕ್ಕೆ ಯಡಿಯೂರಪ್ಪ ಅವರೆಲ್ಲರ ಖುಣ ಸಂದಾಯ ಮಾಡಿದ್ದಾರೆ.
ಇನ್ನು ಅರ್ಹಗೊಂಡ ಇಬ್ಬರಿಗೆ ಸಚಿವ ಸ್ಥಾನ ಸಿಗುತ್ತಿಲ್ಲ. ಅದರಲ್ಲಿ ರಾಣೆಬೆನ್ನೂರು ಶಾಸಕ ಅರುಣ್ ಕುಮಾರ್ ಪೂಜಾರ್ ಅವರ ಹೆಸರು ಸಚಿವ ಸ್ಥಾನದ ಸುತ್ತ ಸುಳಿದಾಡುತ್ತಿರಲೇ ಇರಲಿಲ್ಲ. ಹಾಗಾಗಿ, ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿಕೊಂಡು, ಚುನಾವಣೆ ಗೆದ್ದ ಮಹೇಶ್ ಕುಮಟಳ್ಳಿ ಒಬ್ಬರೇ ಈ ವೈಭೋಗದಿಂದ ಹೊರಗುಳಿಯುವಂತಾಗಿದೆ.
ಮಹೇಶ್ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲ, ಈ ಇಬ್ಬರಿಗೆ ಸಚಿವ ಸ್ಥಾನ ಸಿಗುವುದಿಲ್ಲ ಎನ್ನುವ ಮಾತು ಬುಧವಾರದವರೆಗೂ ಚಾಲ್ತಿಯಲ್ಲಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ ಕಾಗವಾಡದ ಶಾಸಕ ಪಾಟೀಲ್, ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ತನ್ನ ಜೊತೆಗಿದ್ದ ಬಹುತೇಕ ಎಲ್ಲರಿಗೂ ಜಾಕ್ ಪಾಟ್
ತನ್ನ ಜೊತೆಗಿದ್ದ ಬಹುತೇಕ ಎಲ್ಲರಿಗೂ ಜಾಕ್ ಪಾಟ್ ಹೊಡೆದರೂ, ತನಗೆ ಸಚಿವ ಸ್ಥಾನ ಸಿಗದೇ ಇದ್ದಿದ್ದಕ್ಕೆ ಮಹೇಶ್ ಕುಮಟಳ್ಳಿ ಬೇಸರಗೊಂಡಿದ್ದಾರೆ. "ಯಾಕೆ ಹೀಗಾಯಿತು ಎಂದು ಗೊತ್ತಾಗುತ್ತಿಲ್ಲ. ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸುತ್ತೇನೆ" ಎಂದು ಕುಮಟಳ್ಳಿ ಹೇಳಿದ್ದಾರೆ. ಅಥಣಿ ಕ್ಷೇತ್ರದವರೇ ಆದ ಲಕ್ಷ್ಮಣ ಸವದಿ ಡಿಸಿಎಂ ಆಗಿರುವುದರಿಂದ, ಕುಮಟಳ್ಳಿಗೆ ಸ್ಥಾನ ತಪ್ಪಿದೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸುವ ರಾಜಕೀಯ.

ಯಡಿಯೂರಪ್ಪ ಮತ್ತು ಬಿಜೆಪಿಗೆ ಮುಜುಗರ ತರುವುದಿಲ್ಲ
"ನೆಟ್ಟಗಿರುವ ಮರ ಬೇಗ ಉರುಳಿ ಬೀಳುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿಗೆ ಮುಜುಗರ ಉಂಟು ಮಾಡುವ ಕೆಲಸವನ್ನು ನಾನು ಮಾಡುವುದಿಲ್ಲ. ಆದರೆ, ನಾನು ಸಚಿವನಾಗಲು ಏನು ತೊಂದರೆ ಎದುರಾಯಿತೋ ಗೊತ್ತಿಲ್ಲ" ಎಂದಿರುವ ಕುಮಠಳ್ಳಿ ಭರವಸೆಯನ್ನು ನೀಡಿದ್ದಾರೆ. ಆರು ತಿಂಗಳು ಬಿಟ್ಟು ನಿಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು ಎನ್ನುವ ಭರವಸೆ ಮುಖ್ಯಮಂತ್ರಿಗಳಿಂದ ಕುಮಟಳ್ಳಿಗೆ ಸಿಕ್ಕಿದೆ.

ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸೋ ಕೆಲಸ ಕೊಟ್ಟರೂ ಮಾಡುತ್ತೇನೆ
ಕೆಲವು ದಿನಗಳ ಹಿಂದೆ, ನನಗೆ ಮಂತ್ರಿಗಿರಿ ಕೊಡದಿದ್ದರೂ ಪರವಾಗಿಲ್ಲ ಆದರೆ, ಎಚ್. ವಿಶ್ವನಾಥ್ ಅವರನ್ನು ಮಂತ್ರಿ ಮಾಡಿ. ಹಾಗೇ, ನನಗೆ ಕ್ಷೇತ್ರ ಮುಖ್ಯ. ಮಂತ್ರಿ ಸ್ಥಾನ ಸಿಗದಿದ್ದರೂ ಪರವಾಗಿಲ್ಲ. ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸೋ ಕೆಲಸ ಕೊಟ್ಟರೂ ಮಾಡುತ್ತೇನೆ ಎಂದು ಕುಮಟಳ್ಳಿ ಹೇಳಿದ್ದರು.

ರಾಜಕೀಯ ಪ್ರಹಸನದಲ್ಲಿ ಏನೂ ಇಲ್ಲದೇ ಕಳೆದುಕೊಂಡಿದ್ದು ಮಾತ್ರ ಮಹೇಶ ಕುಮಟಳ್ಳಿ
ಹಿಂದೆ ಹೇಳಿರುವ ಮಾತನ್ನು ಸಂಪುಟ ವಿಸ್ತರಣೆಯ ದಿನದಂದು ಮತ್ತೆ ಕುಮಟಳ್ಳಿ ಪುನರುಚ್ಚಿಸಿದ್ದಾರೆ. "ಕಸ ಗುಡಿಸೋ ಕೆಲಸವಾದರೂ ಮಾಡಲು ಸಿದ್ಧನಿದ್ದೇನೆ. ಬಿಜೆಪಿ ವರಿಷ್ಟರ ನಿರ್ಧಾರಕ್ಕೆ ನಾನು ಬದ್ದ ಎಂದು ಜಾರಕಿಹೊಳಿಗೆ ತಿಳಿಸಿದ್ದೇನೆ. ನನಗೆ ಮಂತ್ರಿಸ್ಥಾನ ತಪ್ಪಲು ಯಾರು ಕಾರಣ ಎನ್ನುವ ವಿವರವನ್ನು ಸಿಎಂ ಭೇಟಿ ನಂತರ ತಿಳಿಸುತ್ತೇನೆ. ಮಂತ್ರಿ ಸ್ಥಾನ ಸಿಗದಿದ್ದರೂ ಪರ್ಯಾಯ ಅಧಿಕಾರ ಕೊಡುತ್ತೇನೆಂದು ಯಡಿಯೂರಪ್ಪ ಹೇಳಿದ್ದಾರೆ" ಎಂದು ಕುಮಟಳ್ಳಿ ಹೇಳಿದ್ದಾರೆ. ಒಟ್ಟಿನಲ್ಲಿ, ಇಷ್ಟುದಿನದ ಈ ರಾಜಕೀಯ ಪ್ರಹಸನದಲ್ಲಿ ಏನೂ ಇಲ್ಲದೇ ಕಳೆದುಕೊಂಡಿದ್ದು ಮಾತ್ರ ಮಹೇಶ ಕುಮಟಳ್ಳಿ.
-
ಮಾರ್ಚ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?










Click it and Unblock the Notifications