ಯಡಿಯೂರಪ್ಪ ಸಂಪುಟ ಆಯ್ತು; ಈಗ ಖಾತೆ ಹಂಚಿಕೆ ಕಗ್ಗಂಟು!

ಬೆಂಗಳೂರು, ಆಗಸ್ಟ್ 22 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಿದ್ದಾರೆ. ಆದರೆ, ನೂತನವಾಗಿ ಸಂಪುಟ ಸೇರಿದ 17 ಸಚಿವರಿಗೆ ಇನ್ನೂ ಖಾತೆ ಹಂಚಿಕೆಯಾಗಿಲ್ಲ.

ಸಚಿವ ಸ್ಥಾನ ವಂಚಿತರ ಅತೃಪ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದ್ದರಿಂದ, ಖಾತೆಗಳ ಹಂಚಿಕೆ ಸಾಹಸಕ್ಕೆ ಮುಖ್ಯಮಂತ್ರಿಗಳು ಕೈ ಹಾಕಿಲ್ಲ. ಖಾತೆಗಳ ಹಂಚಿಕೆ ಪ್ರಕ್ರಿಯೆ ಇನ್ನೂ ಎರಡು ದಿನ ತಡವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ.

ಅಳೆದು ತೂಗಿ 17 ಶಾಸಕರನ್ನು ಯಡಿಯೂರಪ್ಪ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಆದರೆ, ಖಾತೆಗಳ ಹಂಚಿಕೆ ಅಷ್ಟು ಸುಲಭವಾಗಿಲ್ಲ. ಅದರಲ್ಲೂ ಅನರ್ಹ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕಿದೆ. ಅವರಿಗೆ ಪ್ರಭಾವಿ ಖಾತೆಗಳನ್ನೇ ನೀಡಬೇಕಾದ ಕಾರಣ ಹಂಚಿಕೆ ವಿಳಂಬವಾಗುತ್ತಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣರಾದ 17 ಶಾಸಕರಲ್ಲಿ ಕೆಲವರು ಮಹತ್ವದ ಖಾತೆಗಾಗಿ ಬೇಡಿಕೆ ಇಟ್ಟಿದ್ದಾರೆ. ಪ್ರಮುಖ ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಳ್ಳಲು ಯಡಿಯೂರಪ್ಪ ಬಯಸಿದ್ದು, ಈ ಚಿಂತನೆಗೆ ಅವಕಾಶ ಸಿಗಲಿದೆಯೇ? ಕಾದು ನೋಡಬೇಕಿದೆ.

ಪ್ರಮುಖ ಖಾತೆಗಳಿಗೆ ಬೇಡಿಕೆ

ಪ್ರಮುಖ ಖಾತೆಗಳಿಗೆ ಬೇಡಿಕೆ

ಯಡಿಯೂರಪ್ಪ ಸಂಪುಟ ಸೇರಿದ ಶಾಸಕರಲ್ಲಿ ಹಿರಿಯರು ಅಧಿಕ. ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಕೆ. ಎಸ್. ಈಶ್ವರಪ್ಪ, ಆರ್. ಅಶೋಕ ಹೀಗೆ ಹಿರಿಯ ಶಾಸಕರಿಗೆ ಪ್ರಭಾವಿ ಖಾತೆಯನ್ನೇ ನೀಡಬೇಕಿದೆ. ಆರ್. ಅಶೋಕ ಗೃಹ ಖಾತೆಗಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಆಪ್ತ ವಲಯದಲ್ಲಿ ಚರ್ಚೆ

ಆಪ್ತ ವಲಯದಲ್ಲಿ ಚರ್ಚೆ

ಯಾರಿಗೆ ಯಾವ ಖಾತೆ ನೀಡಬೇಕು ಎಂದು ಯಡಿಯೂರಪ್ಪ ಆಪ್ತ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಖಾತೆ ಹಂಚಿಕೆ ಪಟ್ಟಿ ಅಂತಿಮಗೊಳಿಸಿದ ಬಳಿಕ ಹೈಕಮಾಂಡ್ ಒಪ್ಪಿಗೆ ಪಡೆದು ಅದನ್ನು ಬಿಡುಗಡೆ ಮಾಡಲಾಗುತ್ತದೆ.

ಅನರ್ಹರಿಗೆ ಪ್ರಮುಖ ಖಾತೆ

ಅನರ್ಹರಿಗೆ ಪ್ರಮುಖ ಖಾತೆ

ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಕಾಂಗ್ರೆಸ್‌ನ 14, ಜೆಡಿಎಸ್‌ನ 3 ಶಾಸಕರಲ್ಲಿ ಹಲವರಿಗೆ ಪ್ರಮುಖ ಖಾತೆಗಳನ್ನು ನೀಡಬೇಕಾಗಿದೆ. ಆದ್ದರಿಂದ, ಖಾತೆ ಹಂಚಿಕೆ ವಿಚಾರದಲ್ಲಿ ಯಡಿಯೂರಪ್ಪ ಎಚ್ಚರಿಕೆ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಖಾತೆಗಳ ಹಂಚಿಕೆ ಇನ್ನೂ ಎರಡು ದಿನ ತಡವಾಗುವ ನಿರೀಕ್ಷೆ ಇದೆ.

ಜಲಸಂಪನ್ಮೂಲ ಖಾತೆಗೆ ಬೇಡಿಕೆ

ಜಲಸಂಪನ್ಮೂಲ ಖಾತೆಗೆ ಬೇಡಿಕೆ

ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ಕೈ ತಪ್ಪಿದೆ. ಯಡಿಯೂರಪ್ಪ ಭೇಟಿ ಮಾಡಿರುವ ಅವರು ಮುಂದಿನ ಬಾರಿ ಸಂಪುಟ ವಿಸ್ತರಣೆ ಮಾಡುವಾಗ ರಮೇಶ್ ಜಾರಕಿಹೊಳಿ ಸೇರಿಸಿಕೊಳ್ಳಬೇಕು. ಜಲಸಂಪನ್ಮೂಲ ಖಾತೆಯನ್ನು ಅವರಿಗೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಯಡಿಯೂರಪ್ಪ ಬಳಿಯೇ ಉಳಿಯಲಿವೆ

ಯಡಿಯೂರಪ್ಪ ಬಳಿಯೇ ಉಳಿಯಲಿವೆ

ಜಲಸಂಪನ್ಮೂಲ, ಇಂಧನ, ವಸತಿ, ಬೆಂಗಳೂರು ಅಭಿವೃದ್ಧಿ, ಗಣಿ, ಸಾರಿಗೆಯಂತಹ ಪ್ರಮುಖ ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡು ಅನರ್ಹ ಶಾಸಕರು ಸಂಪುಟ ಸೇರಿದ ಬಳಿಕ ಹಂಚಿಕೆ ಮಾಡಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಆದರೆ, ಈ ಲೆಕ್ಕಾಚಾರ ಅಂದುಕೊಂಡಷ್ಟು ಸುಲಭವೇನಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+