• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಪುಟ ವಿಸ್ತರಣೆ ದಿನಾಂಕ ಫಿಕ್ಸ್‌: ಇಲ್ಲಿದೆ ಸಂಭಾವ್ಯ ಪಟ್ಟಿ

|

ಬೆಂಗಳೂರು, ಆಗಸ್ಟ್ 15: ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ 20 ದಿನಗಳಾಗುತ್ತಾ ಬಂದಿದ್ದರೂ ಇನ್ನೂ ಸಂಪುಟ ಸಚಿವರ ನೇಮಕ ಆಗಿಲ್ಲ. ಸರ್ಕಾರಕ್ಕೆ ಯಡಿಯೂರಪ್ಪ ಅವರೊಬ್ಬರೇ ಏಕಚಕ್ರಾಧಿಪತಿ ಆಗಿದ್ದಾರೆ.

ಯಡಿಯೂರಪ್ಪ ಅವರ ಏಕಚಕ್ರಾದಿಪತ್ಯ ಶೀಘ್ರದಲ್ಲೇ ಅಂತ್ಯವಾಗಲಿದ್ದು, ಆಗಸ್ಟ್ 18 ಅಥವಾ 19 ರಂದು ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಆಗಸ್ಟ್‌ 16 ರಂದು ದೆಹಲಿಗೆ ತೆರಳಲಿರುವ ಯಡಿಯೂರಪ್ಪ ಅವರು ಆಗಸ್ಟ್ 19ಕ್ಕೆ ಸಚಿವ ಸಂಪುಟ ಸೇರಲಿರುವವ ಪಟ್ಟಿ ಬಿಡುಗಡೆ ಮಾಡಲಿದ್ದಾರೆ.

ಬ್ರೇಕಿಂಗ್ ನ್ಯೂಸ್: ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿ

ಸಚಿವ ಸಂಪುಟಕ್ಕೆ ಸೇರಲಿರುವವರ ಪಟ್ಟಿಯನ್ನು ಯಡಿಯೂರಪ್ಪ ಅವರು ಹೈಕಮಾಂಡ್‌ಗೆ ಈಗಾಗಲೇ ರವಾನಿಸಿದ್ದಾರೆ. ಯಡಿಯೂರಪ್ಪ ಅವರು ರವಾನಿಸಿರುವ ಪಟ್ಟಿಯ ಜೊತೆ ಇನ್ನೂ ಎರಡು ಪಟ್ಟಿಗಳು ಹೈಕಮಾಂಡ್‌ ನಾಯಕರ ಮೇಜಿನ ಮೇಲಿದೆ. ಆಗಸ್ಟ್‌ 16 ರಂದು ಈ ಬಗ್ಗೆ ಚರ್ಚೆ ನಡೆದು ಪಟ್ಟಿ ಅಂತಿಮಗೊಳ್ಳಲಿದೆ.

ಎರಡು ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವ ನಿರೀಕ್ಷೆ ಇದೆ. ಮೊದಲ ಹಂತದಲ್ಲಿ ಪಕ್ಷದ ಹಿರಿಯರಿಗೆ ಅವಕಾಶ ನೀಡಿ. ನಂತರ ಉಳಿದ ಸ್ಥಾನಗಳಿಗೆ ಕಿರಿಯರನ್ನು 'ತುಂಬುವ' ಸೂತ್ರವನ್ನು ಬಿಜೆಪಿ ಅನುಸರಿಸಲಿದೆ. ಯಡಿಯೂರಪ್ಪ ಅವರ ಸಂಪುಟ ಸೇರಲಿರುವರ ಸಂಭಾವ್ಯ ಪಟ್ಟಿ ಇಲ್ಲಿದೆ.

ಪವರ್‌ ಫುಲ್‌ ಗೃಹ ಇಲಾಖೆ ಯಾರಿಗೆ?

ಪವರ್‌ ಫುಲ್‌ ಗೃಹ ಇಲಾಖೆ ಯಾರಿಗೆ?

ಈಶ್ವರಪ್ಪ-ಕಂದಾಯ, ಆರ್.ಅಶೋಕ್-ಗೃಹ ಇಲಾಖೆ, ಜಗದೀಶ ಶೆಟ್ಟರ್- ಲೋಕೋಪಯೋಗಿ, ಗೋವಿಂದ ಕಾರಜೋಳ- ಸಮಾಜ ಕಲ್ಯಾಣ, ವಿ. ಸೋಮಣ್ಣ-ನಗರಾಭಿವೃದ್ಧಿ, ಜೆ.ಸಿ. ಮಾಧುಸ್ವಾಮಿ-ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಸುರೇಶ್ ಕುಮಾರ್-ಕಾನೂನು ಸಂಸದೀಯ ವ್ಯವಹಾರ, ಸಿಟಿ ರವಿ- ಕೃಷಿ.

ಶ್ರೀರಾಮುಲುಗೆ ಪವರ್‌ಫುಲ್ ಖಾತೆ?

ಶ್ರೀರಾಮುಲುಗೆ ಪವರ್‌ಫುಲ್ ಖಾತೆ?

ಬಿ. ಶ್ರೀರಾಮುಲು- ಇಂಧನ, ಉಮೇಶ್ ಕತ್ತಿ-ಸಾರಿಗೆ, ಡಾ.ಅಶ್ವತ್ಥ್ ನಾರಾಯಣ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಶಿಕಲಾ ಜೊಲ್ಲೆ- ಮಹಿಳಾ ಮತ್ತು ಮಕ್ಕಳ ಕಲ್ಯಾಣ, ರೇಣುಕಾಚಾರ್ಯ-ಪೌರಾಡಳಿತ ಖಾತೆ, ಬಾಲಚಂದ್ರ ಜಾರಕಿಹೊಳಿ-ಕಾರ್ಮಿಕ ಇಲಾಖೆ.

ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್, ಯಾರಿಗೆ ಸಚಿವ ಸ್ಥಾನದ ಭಾಗ್ಯ?

ಬೋಪಯ್ಯಗೆ ಯಾವ ಖಾತೆ?

ಬೋಪಯ್ಯಗೆ ಯಾವ ಖಾತೆ?

ಶಿವನಗೌಡ ನಾಯಕ್-ಸಣ್ಣ ಕೈಗಾರಿಕೆ ಖಾತೆ, ಬಸವರಾಜ ಬೊಮ್ಮಾಯಿ-ಸಣ್ಣ ನೀರಾವರಿ, ಬೋಪಯ್ಯ-ಉನ್ನತ ಶಿಕ್ಷಣ, ಕೋಟಾ ಶ್ರೀನಿವಾಸ ಪೂಜಾರಿ- ಮುಜರಾಯಿ ಮತ್ತು ಯೋಜನೆ. ಇದು ಪ್ರಾಥಮಿಕ ಪಟ್ಟಿಯಷ್ಟೆ ಆಗಿದೆ.

ಹೊಸ ಹೆಸರುಗಳು ಸೇರಲಿವೆ

ಹೊಸ ಹೆಸರುಗಳು ಸೇರಲಿವೆ

ಈ ಮೇಲಿನ ಪಟ್ಟಿ ಪ್ರಾಥಮಿಕ ಪಟ್ಟಿಯಷ್ಟೆ ಆಗಿದೆ. ಇದರ ಜೊತೆಗೆ ಪ್ರೀತಂ ಗೌಡ, ಕುಡಚಿ ಶಾಸಕ ಪಿ ರಾಜೀವ್, ಅಭಯ್ ಪಾಟೀಲ್, ಎಸ್.ಅಂಗಾರ, ವೀರಣ್ಣ ಚಿರಂತಿಮಠ, ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಉದಾಸಿ, ಕುಮಾರ ಬಂಗಾರಪ್ಪ, ಹಾಲಾಡಿ ಶ್ರೀನಿವಾಸ ಶೆಟ್ಟಿ ಜೊತೆಗೆ ಇನ್ನೂ ಕೆಲವು ಅಚ್ಚರಿಯ ಹೆಸರುಗಳು ಇರಲಿವೆ.

English summary
Yeddyurappa may expand his cabinet on August 18 or 19. Here is the probable list of BJP MLAs who were going to be minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X