• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜನವರಿಯಲ್ಲಿ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ?

|

ಬೆಂಗಳೂರು, ಡಿಸೆಂಬರ್ 11 : 15 ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ವಿಸ್ತರಣೆ ಯಾವಾಗ ಮಾಡಲಿದ್ದಾರೆ?, ಯಾರಿಗೆ ಯಾವ ಖಾತೆ ಸಿಗಲಿದೆ ಎಂಬ ಲೆಕ್ಕಾಚಾರ ಆರಂಭವಾಗಿದೆ.

ಸದ್ಯದ ಮಾಹಿತಿ ಪ್ರಕಾರ ಒಟ್ಟು ಎರಡು ಹಂತದಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ. ಈಗ ಕೆಲವು ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಜನವರಿಯಲ್ಲಿ ಮತ್ತೊಂದು ಹಂತದ ಸಂಪುಟ ವಿಸ್ತರಣೆ ನಡೆಸಲು ಬಿಜೆಪಿ ಚಿಂತನೆ ನಡೆಸುತ್ತಿದೆ.

ಮಾಜಿ ಅನರ್ಹರನ್ನು ಬಿಟ್ಟು, ಮತ್ಯಾರು ಸೇರಲಿದ್ದಾರೆ ಯಡಿಯೂರಪ್ಪ ಸಂಪುಟ?

ಯಡಿಯೂರಪ್ಪ ಈಗಿರುವ ಖಾತೆಗಳಲ್ಲಿ ಯಾವುದೇ ಬದಲಾವಣೆ ಮಾಡದೇ ಹೆಚ್ಚುವರಿಯಾಗಿರುವ ಖಾತೆಗಳನ್ನು ಹೊಸ ಶಾಸಕರಿಗೆ ನೀಡಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಉಪ ಚುನಾವಣೆಯಲ್ಲಿ ಸೋತ ಎಚ್. ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್‌ಗೆ ಸಹ ಸಚಿವ ಸ್ಥಾನದ ಭಾಗ್ಯ ಒಲಿದು ಬರಲಿದೆ.

ಯಡಿಯೂರಪ್ಪಗೆ ತಲೆನೋವಾದ ಸಂಪುಟ ವಿಸ್ತರಣೆ: ಆಕಾಂಕ್ಷಿಗಳು ಯಾರ್ಯಾರು?

ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಥಾನವನ್ನು ಭದ್ರಪಡಿಸಲು ಬಿಜೆಪಿ ನಾಯಕರು ಮೊದಲು ಗಮನ ಹರಿಸಲಿದ್ದಾರೆ. ತೆರವಾಗುವ ಒಂದು ವಿಧಾನ ಪರಿಷತ್ ಸ್ಥಾನವನ್ನು ಅವರಿಗೆ ನೀಡಲಾಗುತ್ತದೆ. ಉಪ ಚುನಾವಣೆಯಲ್ಲಿ ಗೆದ್ದ ಹಿರಿಯ ಶಾಸಕರನ್ನು ಮೊದಲು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ...

ಶಿವಾಜಿನಗರದಲ್ಲಿ ಗೆದ್ದ ಕಾಂಗ್ರೆಸ್‌; ಲಕ್ಷ್ಮಣ ಸವದಿಗೆ ಸಂತಸ!

ಜನವರಿಯಲ್ಲಿ ಸಂಪುಟ ವಿಸ್ತರಣೆ

ಜನವರಿಯಲ್ಲಿ ಸಂಪುಟ ವಿಸ್ತರಣೆ

ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ. ಡಿಸೆಂಬರ್ 15ರೊಳಗೆ ಸಂಪುಟ ವಿಸ್ತರಣೆ ಮಾಡುವುದು ಕಷ್ಟ. ಡಿಸೆಂಬರ್ 15ರ ಬಳಿಕ ಧರ್ನುಮಾಸ ಬರಲಿದೆ. ಆದ್ದರಿಂದ, ಜನವರಿಯಲ್ಲಿ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿವೆ.

ಮೂವರಿಗೆ ಸಚಿವ ಸ್ಥಾನದ ಲೆಕ್ಕಾಚಾರ

ಮೂವರಿಗೆ ಸಚಿವ ಸ್ಥಾನದ ಲೆಕ್ಕಾಚಾರ

ಉಪ ಚುನಾವಣೆಯಲ್ಲಿ ಗೆದ್ದ 12 ಶಾಸಕರಿಗೆ ಸಚಿವ ಸ್ಥಾನ ನೀಡುವುದು ಒಂದು ಕಡೆಯಾದರೆ. ಎಂಟಿಬಿ ನಾಗರಾಜ್, ಎಚ್. ವಿಶ್ವನಾಥ್, ಆರ್. ಶಂಕರ್‌ಗೆ ಸಹ ಸಚಿವ ಸ್ಥಾನ ನೀಡಬೇಕು. ಉಪ ಚುನಾವಣೆಯಲ್ಲಿ ಸೋತ ಈ ಮೂವರಿಗೆ ಸಚಿವ ಸ್ಥಾನ ನೀಡಿದರೆ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಬೇಕಿದೆ. ಆದ್ದರಿಂದ, ಜನವರಿ ತನಕ ಕಾಯಬೇಕಿದೆ.

ಒಂದು ಪರಿಷತ್ ಸ್ಥಾನ ಖಾಲಿ

ಒಂದು ಪರಿಷತ್ ಸ್ಥಾನ ಖಾಲಿ

ಶಿವಾಜಿನಗರ ಕ್ಷೇತ್ರದಲ್ಲಿ ರಿಜ್ವಾನ್ ಅರ್ಷದ್ ಗೆಲುವು ಸಾಧಿಸಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿರುವ ಅವರು ರಾಜೀನಾಮೆ ನೀಡಲಿದ್ದಾರೆ. ಆ ಸ್ಥಾನಕ್ಕೆ ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ನೇಮಕವಾಗಲಿದ್ದಾರೆ. ಉಪ ಚುನಾವಣೆಯಲ್ಲಿ ಸೋತ ಮೂವರನ್ನು ಸಂಪುಟಕ್ಕೆ ಈಗ ಸೇರಿಸಿಕೊಂಡರೆ ಅವರಿಗೆ ಪರಿಷತ್ ಸದಸ್ಯ ಸ್ಥಾನ ನೀಡಲು ಸಾಧ್ಯವಿಲ್ಲ. ಜೂನ್‌ನಲ್ಲಿ 3 ಪರಿಷತ್ ಸ್ಥಾನಗಳು ತೆರವಾಗಲಿವೆ.

ಶಾಸಕರು ಒಪ್ಪಲಿದ್ದಾರೆಯೇ?

ಶಾಸಕರು ಒಪ್ಪಲಿದ್ದಾರೆಯೇ?

ಜನವರಿಯಲ್ಲಿ ಸಂಪುಟ ವಿಸ್ತರಣೆ ಮಾಡಲು ಉಪ ಚುನಾವಣೆಯಲ್ಲಿ ಗೆದ್ದ ಶಾಸಕರು ಒಪ್ಪಿಗೆ ನೀಡಲಿದ್ದಾರೆಯೇ? ಎಂದು ಕಾದು ನೋಡಬೇಕು. ತಕ್ಷಣ ಸಂಪುಟ ವಿಸ್ತರಣೆ ಮಾಡಿ ಎಂದು ಶಾಸಕರು ಪಟ್ಟು ಹಿಡಿದರೆ ಯಡಿಯೂರಪ್ಪಗೆ ಸಂಕಷ್ಟ ಎದುರಾಗಲಿದೆ.

English summary
Karnataka chief minister B.S.Yediyurappa cabinet expansion in the month of January 2020. BJP bagged 12 seat in 15 seat by elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X