ಅಯ್ಯೋ, ನಾ ಹೇಳಿದ್ದು ಹಾಗಲ್ಲ ಹೀಗೆ ಎಂದರಪ್ಪ ಯಡಿಯೂರಪ್ಪ
Recommended Video

ಬೆಂಗಳೂರು, ಫೆಬ್ರವರಿ 28: ನನ್ನ ಹೇಳಿಕೆಯನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಗಿದೆ. 'ಬಿಜೆಪಿಗೆ ಅನುಕೂಲಕರ ಸ್ಥಿತಿಯಿದೆ' ಅಂತ ನಾನು ಹೆಳಿದ್ದು. ಇದೇ ಮಾತನ್ನು ಕಳೆದ ಕೆಲವು ತಿಂಗಳಿಂದ ಹೇಳುತ್ತಾ ಇದ್ದೀನಿ. ಅದೇ ರೀತಿ ಮೋದಿಜೀ ಸಮರ್ಥ ನಾಯಕತ್ವದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಇಪ್ಪತ್ತೆರಡು ಸ್ಥಾನಗಳನ್ನು ಗೆಲ್ಲುತ್ತದೆ ಅಂತ ಹೇಳಿದ್ದು ಕೂಡ ಇದೇ ಮೊದಲ ಸಲ ಅಲ್ಲ ಎಂದಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ.
ಭಾರತೀಯ ಜನತಾಪಕ್ಷ ನೇತೃತ್ವದ ಕೇಂದ್ರ ಸರಕಾರದ ನಿರ್ದೇಶನದಲ್ಲಿ ಭಾರತೀಯ ವಾಯು ಸೇನೆ ಉಗ್ರರ ನೆಲೆ ಮೇಲೆ ಮಾಡಿದ ವಾಯು ದಾಳಿಯಿಂದ ಕರ್ನಾಟಕದಲ್ಲಿ ಬಿಜೆಪಿಯು ಇಪ್ಪತ್ತೆರಡು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ ಎಂಬುದು ಭಾರೀ ಆಕ್ರೋಶಕ್ಕೆ ಕಾರಣ ಆಗಿದೆ.

ಈಗ ಭಾರತ ನಡೆಸಿದ ವಾಯು ದಾಳಿಯು ಕರ್ನಾಟಕದಲ್ಲಿ ಇಪ್ಪತ್ತಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಸಹಕಾರಿ ಆಗುತ್ತದೆ ಎಂದು ಯಡಿಯೂರಪ್ಪನವರೇ ಹೇಳಿದ್ದಾರೆ ಎಂಬುದು ಇತರ ಪಕ್ಷಗಳ ನಾಯಕರಿರಲಿ, ಸ್ವತಃ ಬಿಜೆಪಿಯಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ಎಚ್ಚೆತ್ತ ಬಿಎಸ್ ವೈ, ನಾನು ಹೇಳಿದ್ದು ಹಾಗಲ್ಲ, ಹೀಗೆ ಎಂಬ ಸ್ಪಷ್ಟನೆ ನೀಡಿದ್ದಾರೆ.
My statement is being reported out of context. I said that ‘situation favourable for BJP’ which i am saying for last couple of months. This is not first time that i said BJP in Karnataka will win minimum 22 seats under the able leadership of Modi ji.
— B.S. Yeddyurappa (@BSYBJP) 28 February 2019












Click it and Unblock the Notifications