ಬಿಎಸ್ವೈ ರಾಜ್ಯ ಪ್ರವಾಸ ರದ್ದು, ಬಿಜೆಪಿಗೆ ಮರಳಲು ಸಜ್ಜು!

ಬೆಂಗಳೂರು, ಡಿ. 20 : ಕೆಜೆಪಿ ಅಧ್ಯಕ್ಷ, ಬಿ.ಎಸ್,ಯಡಿಯೂರಪ್ಪ ಬಿಜೆಪಿಗೆ ಸೇರುವ ಮುನ್ಸೂಚನೆಗಳು ದೊರಕಿದ್ದು, ಡಿ.20ರಿಂದ ನಡೆಸಲು ಉದ್ದೇಶಿಸಿದ್ದ ರಾಜ್ಯ ಪ್ರವಾಸವನ್ನು ಯಡಿಯೂರಪ್ಪ ಸ್ಥಗಿತಗೊಳಿಸಿದ್ದಾರೆ. ಆತ್ತ ಬಿಜೆಪಿ ಯಡಿಯೂರಪ್ಪ ಕರೆತರುವ ಪ್ರಕ್ರಿಯೆಗೆ ನರೇಂದ್ರ ಮೋದಿ ಅವರ ಅನುಮತಿ ಪಡೆದು ಅಧಿಕೃತವಾಗಿ ಚಾಲನೆ ನೀಡಿದೆ.

ಗುರುವಾರ ಬೆಳಗಾವಿಗೆ ಆಗಮಿಸಿದ್ದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರೊಂದಿಗೆ ಯಡಿಯೂರಪ್ಪ ಕರೆತರುವ ಕುರಿತು ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಮತ್ತು ಇತರ ನಾಯಕರು ಮಾತುಕತೆ ನಡೆಸಿದ್ದು, ಅವರು ಸಹ ಪ್ರಕ್ರಿಯೆ ಆರಂಭಿಸುವಂತೆ ಸೂಚನೆ ನೀಡಿದ್ದರು. [ಯಡಿಯೂರಪ್ಪ ಅವರಿಗಾಗಿ ಕಾದು ಕುಳಿತ ಬಿಜೆಪಿ]

ಕೆಲವು ದಿನಗಳ ಹಿಂದೆ ನಡೆದ ಕೆಜೆಪಿ ಕಾರ್ಯಕಾರಣಿ ಸಭೆಯಲ್ಲಿ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಂಘಟಿಸಲು ಡಿ.20ರಿಂದ ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದರು. ಸದ್ಯ ಬಿಜೆಪಿ ಸೇರುವ ಪ್ರಕ್ರಿಯೆ ಆರಂಭಿಸಿರುವ ಅವರು ರಾಜ್ಯ ಪ್ರವಾಸವನ್ನು ಮುಂದೂಡಿದ್ದಾರೆ. [ರಾಜ್ಯ ಪ್ರವಾಸ ಹೊರಟ ಯಡಿಯೂರಪ್ಪ]

ಎರಡು ದಿನಗಳಲ್ಲಿ ಯಡಿಯೂರಪ್ಪ ದೆಹಲಿಗೆ ತೆರಳುವ ಸಾಧ್ಯತೆ ಇದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಜೊತೆ ಬಿಜೆಪಿ ಸೇರುವ ಕುರಿತು ಚರ್ಚೆ ನಡೆಸಲಿದ್ದಾರೆ. ಬಿಜೆಪಿ ಮತ್ತು ಕೆಜೆಪಿ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿದ್ದು, ರಾಜ್ಯ ರಾಜಕೀಯದಲ್ಲಿ ಬದಲಾವಣೆಗಳು ಆಗುವ ಲಕ್ಷಣಗಳು ಕಂಡುಬರುತ್ತಿವೆ.

ಮೋದಿ ಗ್ರೀನ್ ಸಿಗ್ನಲ್

ಮೋದಿ ಗ್ರೀನ್ ಸಿಗ್ನಲ್

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆತರಲು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ್ದು, ಬೆಳಗಾವಿಗೆ ಆಗಮಿಸಿದ್ದ ಅವರು ಪ್ರಕ್ರಿಯೆ ಆರಂಭಿಸಿ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಮತ್ತು ಇತರ ನಾಯಕರಿಗೆ ಸೂಚನೆ ನೀಡಿದ್ದಾರೆ.

ರಾಜ್ಯ ಪ್ರವಾಸ ಸ್ಥಗಿತ

ರಾಜ್ಯ ಪ್ರವಾಸ ಸ್ಥಗಿತ

ಬಿ.ಎಸ್.ಯಡಿಯೂರಪ್ಪ ಡಿ.20ರಿಂದ ರಾಜ್ಯ ಪ್ರವಾಸ ಕೈಗೊಳ್ಳಬೇಕಿತ್ತು. ಸದ್ಯ ಬಿಜೆಪಿ ಸೇರುವ ಬಗ್ಗೆ ಪ್ರಕ್ರಿಯೆ ಆರಂಭಿಸಿರುವ ಅವರು ತಮ್ಮ ರಾಜ್ಯ ಪ್ರವಾಸವನ್ನು ಸ್ಥಗಿತಗೊಳಿಸಿದ್ದಾರೆ. ಈ ಮೂಲಕ ಬಿಜೆಪಿ ಸೇರುವ ಮುನ್ಸೂಚನೆ ನೀಡಿದ್ದಾರೆ.

ರಾಜನಾಥ್ ಜೊತೆ ಮೋದಿ ಮಾತುಕತೆ

ರಾಜನಾಥ್ ಜೊತೆ ಮೋದಿ ಮಾತುಕತೆ

ಬೆಳಗಾವಿಗೆ ಆಗಮಿಸಿದ್ದ ನರೇಂದ್ರ ಮೋದಿ ಯಡಿಯೂರಪ್ಪ ಕರೆತರುವ ವಿಚಾರದ ಕುರಿತು ಪಕ್ಷದ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಆದ್ದರಿಂದ ಬಿಜೆಪಿ ನಾಯಕರು ತಮ್ಮ ಪ್ರಯತ್ನ ಆರಂಭಿಸಿದ್ದಾರೆ.

ಶೀಘ್ರದಲ್ಲೇ ಯಡಿಯೂರಪ್ಪ ಮರಳಲಿದ್ದಾರೆ

ಶೀಘ್ರದಲ್ಲೇ ಯಡಿಯೂರಪ್ಪ ಮರಳಲಿದ್ದಾರೆ

ಬಿ.ಎಸ್.ಯಡಿಯೂರಪ್ಪ ಅವರು ಶೀಘ್ರವೇ ಬಿಜೆಪಿಗೆ ಮರಳಲಿದ್ದಾರೆ ಅದಕ್ಕಾಗಿ ಅಗತ್ಯ ಪ್ರಯತ್ನಗಳನ್ನು ನಾವು ಆರಂಭಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಯಡಿಯೂರಪ್ಪ ದೆಹಲಿಗೆ

ಯಡಿಯೂರಪ್ಪ ದೆಹಲಿಗೆ

ರಾಜ್ಯ ಪ್ರವಾಸ ಸ್ಥಗಿತಗೊಳಿಸಿರುವ ಬಿ.ಎಸ್.ಯಡಿಯೂರಪ್ಪ ಎರಡು ದಿನದಲ್ಲಿ ದೆಹಲಿ ಪ್ರವಾಸ ಕೈಗೊಳ್ಳಲಿದ್ದು. ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಭೇಟಿಯಾಗಲಿದ್ದಾರೆ. ಅದಕ್ಕೂ ಮೊದಲು ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿ ಅವರು ಯಡಿಯೂರಪ್ಪ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ನಿರೀಕ್ಷೆ ಇದೆ.

ಅರುಣ್ ಜೇಟ್ಲಿ ಸಾರಥ್ಯ

ಅರುಣ್ ಜೇಟ್ಲಿ ಸಾರಥ್ಯ

ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನವನ್ನು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಟ್ರಬಲ್ ಶೂಟರ್ ಅರುಣ್ ಜೇಟ್ಲಿ ಆರಂಭಿಸಿದ್ದು, ಯಡಿಯೂರಪ್ಪ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಮೊದಲು ಪಕ್ಷಕ್ಕೆ ಮರಳಿ ಬನ್ನಿ. ಸ್ಥಾನಮಾನದ ಬಗ್ಗೆ ನಂತರ ಆಲೋಚನೆ ನಡೆಸೋಣ ಎಂದು ಜೇಟ್ಲಿ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ. ರಾಜನಾಥ್ ಸಿಂಗ್ ಜೊತೆ ಯಡಿಯೂರಪ್ಪ ಕರೆತರುವ ಬಗ್ಗೆ ಜೇಟ್ಲಿ ಮತ್ತು ನರೇಂದ್ರ ಮೋದಿ ಮಾತುಕತೆ ನಡೆಸಲಿದ್ದಾರೆ.

ಅರುಣ್ ಜೇಟ್ಲಿ ಸಾರಥ್ಯ

ಅರುಣ್ ಜೇಟ್ಲಿ ಸಾರಥ್ಯ

ಯಡಿಯೂರಪ್ಪ ಕರೆತರುವ ಪ್ರಯತ್ನವನ್ನು ರಾಷ್ಟ್ರಮಟ್ಟದಲ್ಲಿ ಬಿಜೆಪಿ ಟ್ರಬಲ್ ಶೂಟರ್ ಖ್ಯಾತಿಯ ಅರುಣ್ ಜೇಟ್ಲಿ ಆರಂಭಿಸಿದ್ದಾರೆ. ಪಕ್ಷಕ್ಕೆ ಮರಳಿ ಬನ್ನಿ. ಸ್ಥಾನಮಾನದ ಬಗ್ಗೆ ನಂತರ ಆಲೋಚನೆ ನಡೆಸೋಣ ಎಂದು ಯಡಿಯೂರಪ್ಪ ಜೊತೆ ಜೇಟ್ಲಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ನರೇಂದ್ರ ಮೋದಿ ಮತ್ತು ಅರುಣ್ ಜೇಟ್ಲಿ ಯಡಿಯೂರಪ್ಪ ಕುರಿತು ರಾಜನಾಥ್ ಸಿಂಗ್ ಜೊತೆ ಚರ್ಚೆ ನಡೆಸಲಿದ್ದಾರೆ.

ಪಕ್ಷಕ್ಕೆ ಮರಳಿದರೆ ಶಿವಮೊಗ್ಗದಲ್ಲಿ ಸ್ಪರ್ಧೆ

ಪಕ್ಷಕ್ಕೆ ಮರಳಿದರೆ ಶಿವಮೊಗ್ಗದಲ್ಲಿ ಸ್ಪರ್ಧೆ

ಬಿ.ಎಸ್.ಯಡಿಯೂರಪ್ಪ ಪಕ್ಷಕ್ಕೆ ಮರಳಿದರೆ ಶಿವಮೊಗ್ಗ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ಅವರನ್ನು ಅಭ್ಯರ್ಥಿ ಮಾಡಲು ರಾಜ್ಯ ಬಿಜೆಪಿ ಘಟಕ ತೀರ್ಮಾನ ಕೈಗೊಂಡಿದೆ. ಯಡಿಯೂರಪ್ಪ ಪುತ್ರ ರಾಘವೇಂದ್ರ ಅವರು ಸದ್ಯ ಅಲ್ಲಿನ ಸಂಸದರು. ಯಡಿಯೂರಪ್ಪ ಬಿಜೆಪಿಗೆ ಮರಳಿದರೆ ಅವರಿಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ಲೋಕಸಭೆ ಚುನಾವಣಾ ಸಿದ್ಧತಾ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+