ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಅವರ ವಿರುದ್ಧದ 13 ಎಫ್‌ಐಆರ್‌ ರದ್ದಾಗಲಿದೆಯೇ?

|
Google Oneindia Kannada News

ಬೆಂಗಳೂರು, ಡಿಸೆಂಬರ್ 17 : ತಮ್ಮ ವಿರುದ್ಧ ದಾಖಲಾಗಿರುವ 13 ಎಫ್‌ಐಆರ್ ರದ್ದುಕೋರಿ ಯಡಿಯೂರಪ್ಪ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್, ತೀರ್ಪನ್ನು ಕಾಯ್ದಿರಿಸಿದೆ. ಅಕ್ರಮ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಎಫ್‌ಐಆರ್ ದಾಖಲಿಸಿದೆ.

ಮಹಾ ಲೆಕ್ಕಪರಿಶೋಧಕರ (ಸಿಎಜಿ) ವರದಿಯ ಅನ್ವಯ ತಮ್ಮ ವಿರುದ್ಧ ನೀಡಲಾಗಿರುವ ದೂರುಗಳಲ್ಲಿ ಹುರುಳಿಲ್ಲ. ಆದ್ದರಿಂದ, ಈ ಸಂಬಂಧ ದಾಖಲಾಗಿರುವ 13 ಎಫ್‌ಐಆರ್‌ ರದ್ದುಗೊಳಿಸಬೇಕು ಎಂದು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. [ಡಿಕೆಶಿ, ಬಿಎಸ್‌ವೈ ಕೇಸು ರದ್ದತಿ ತೀರ್ಪು ಕಾಯ್ದಿರಿಸಿದ ಕೋರ್ಟ್]

yeddyurappa

ಅರ್ಜಿಯ ವಿಚಾರಣೆಯನ್ನು ಬುಧವಾರ ಪೂರ್ಣಗೊಳಿಸಿರುವ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ಪೀಠವು, ತೀರ್ಪನ್ನು ಕಾಯ್ದಿರಿಸಿದೆ. ಲೋಕಾಯುಕ್ತ ದಾಖಲಿಸಿರುವ ಎಫ್‌ಐಆರ್ ರದ್ದುಗೊಂಡರೆ ಯಡಿಯೂರಪ್ಪ ಅವರಿಗೆ ಮತ್ತೊಂದು ಜಯ ಸಿಕ್ಕಿಂದತಾಗುತ್ತದೆ. [ಬಿಎಸ್ ವೈ ವಿರುದ್ಧ ತನಿಖೆ : ತಡೆಯಾಜ್ಞೆ ತೆರವಿಗೆ ಸುಪ್ರೀಂ ನಕಾರ]

ಯಾರು ದೂರು ನೀಡಿದ್ದಾರೆ? : ಬೆಂಗಳೂರಿನ ಜೆ.ಪಿ.ನಗರ, ಎಚ್‌ಆರ್‌ಬಿಆರ್‌ ಲೇಔಟ್‌, ಜಯನಗರ 8ನೇ ಬ್ಲಾಕ್‌ ಮತ್ತು ರಾಚೇನಹಳ್ಳಿ ಸುತ್ತಮುತ್ತಲಿನ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಜಯಕುಮಾರ್‌ ಹಿರೇಮಠ ಅವರು ದೂರು ನೀಡಿದ್ದಾರೆ.[5 ಪ್ರಕರಣದಲ್ಲಿ ಯಡಿಯೂರಪ್ಪಗೆ ರಿಲೀಫ್]

ಮಹಾ ಲೆಕ್ಕಪರಿಶೋಧಕರ (ಸಿಎಜಿ) ವರದಿ ಆಧರಿಸಿ ಯಡಿಯೂರಪ್ಪ ಅವರ ವಿರುದ್ಧ ದೂರು ನೀಡಲು ಅವಕಾಶ ನೀಡಬೇಕು ಎಂದು ಜಯಕುಮಾರ್ 2013ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಅರ್ಜಿದಾರರು ಸಕ್ಷಮ ತನಿಖಾ ಪ್ರಾಧಿಕಾರದಲ್ಲಿ ಇದನ್ನು ಪ್ರಶ್ನಿಸಬಹುದು ಎಂದು ಹೇಳಿತ್ತು.

ಈ ಆದೇಶದ ನಂತರ ಜಯಕುಮಾರ್ ಅವರು ಲೋಕಾಯುಕ್ತಕ್ಕೆ 2015ರಲ್ಲಿ ದೂರು ನೀಡಿದ್ದರು. ಲೋಕಾಯುಕ್ತ ಈ ದೂರಿನ ಪ್ರಾಥಮಿಕ ತನಿಖೆ ನಡೆಸುವಂತೆ ಸಿಐಡಿಗೆ ವಹಿಸಿತ್ತು. ಸಿಐಡಿ ವರದಿ ಬಂದ ಬಳಿಕ ಯಡಿಯೂರಪ್ಪ ಅವರ ವಿರುದ್ಧ 13 ಎಫ್‌ಐಆರ್‌ಗಳನ್ನು ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದೆ.

ಅಂದಹಾಗೆ ಯಡಿಯೂರಪ್ಪ ಅವರ ವಿರುದ್ಧದ 5 ಅಕ್ರಮ ಡಿ-ನೋಟಿಫಿಕೇಷನ್‌ ಪ್ರಕರಣಗಳಲ್ಲಿ ಹಿಂದಿನ ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಅವರು ನೀಡಿದ್ದ ಪೂರ್ವಾನುಮತಿಯನ್ನು ಹೈಕೋರ್ಟ್ ಕೆಲವು ದಿನಗಳ ಹಿಂದೆ ರದ್ದುಪಡಿಸಿದೆ. ಪೂರ್ವಾನುಮತಿ ರದ್ದುಗೊಂಡಿರುವುದರಿಂದ ಲೋಕಾಯುಕ್ತದಲ್ಲಿ ದಾಖಲಾಗಿದ್ದ ದೂರು ಸಹ ರದ್ದಾಗಿದೆ.

English summary
Karnataka High Court on Wednesday reserved its order on plea of Former CM B.S.Yeddyurappa for quashing 13 lokayukta FIR against him in denotification cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X